twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು

    |

    ''ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ.'' ವಾವ್.. ಎಂತಹ ಅದ್ಭುತ ಡೈಲಾಗ್ ಇದು.

    ಹೌದು... 'ಕೆಜಿಎಫ್' ಸಿನಿಮಾದ ಟ್ರೇಲರ್ ನಲ್ಲಿ ನಟ ಅನಂತ್ ನಾಗ್ ಅವರ ಧ್ವನಿಯಲ್ಲಿ ಈ ಡೈಲಾಗ್ ಕೇಳುತ್ತಿದ್ದರೆ ಮೈ ಜುಮ್ ಎನ್ನುತ್ತದೆ. ನಿನ್ನೆ 'ಕೆಜಿಎಫ್' ಸಿನಿಮಾದ ಎರಡನೇ ಟ್ರೇಲರ್ ಬಿಡುಡಗೆಯಾಗಿದ್ದು, ಈ ಡೈಲಾಗ್ ಎಲ್ಲರ ಮನ ಗೆದ್ದಿದೆ.

    'ಕೆಜಿಎಫ್-2' ಟ್ರೈಲರ್ ನಲ್ಲಿ ಕಾಣಿಸಿದ್ರಂತೆ ಅಮಿತಾಬ್ ಬಚ್ಚನ್.! 'ಕೆಜಿಎಫ್-2' ಟ್ರೈಲರ್ ನಲ್ಲಿ ಕಾಣಿಸಿದ್ರಂತೆ ಅಮಿತಾಬ್ ಬಚ್ಚನ್.!

    ಇಂತಹ ಸಾಕಷ್ಟು ಸಂಭಾಷಣೆಗಳು ಈ ಸಿನಿಮಾದಲ್ಲಿವೆ. ಚಂದ್ರಮೌಳಿ ಹಾಗೂ ಎಂ ವಿನಯ್ ಶಿವಗಂಗೆ ಎಂಬುವವರು ಚಿತ್ರದ ಸಂಭಾಷಣೆಗಳನ್ನು ಬರೆದಿದ್ದಾರೆ. ಡೈಲಾಗ್ಸ್ ಸಿನಿಮಾದ ಹೈಲೆಟ್ ಆಗಿದೆ ಎಂಬುದು ಟ್ರೇಲರ್ ನೋಡಿದರೆನೇ ತಿಳಿಯುತ್ತದೆ.

    ಅಂದಹಾಗೆ, ಈಗಾಗಲೇ ಹೊರ ಬಂದಿರುವ 'ಕೆಜಿಎಫ್' ಚಿತ್ರದ ಕೆಲವು ಡೈಲಾಗ್ ಗಳು ಮುಂದಿವೆ ಓದಿ...

    ಆ ದಿನ ಎರಡು ಘಟನೆ ನೆಡಿತು

    ಆ ದಿನ ಎರಡು ಘಟನೆ ನೆಡಿತು

    ''ವಿಧಿಯ ಕೈವಾಡ ಆ ದಿನ ಎರಡು ಘಟನೆ ನೆಡಿತು. ಆ ಜಾಗನು ಹುಟ್ಟಿತು. ಅವರನು ಹುಟ್ಟಿದ.''

    ''ನನಗೆ ಒಂದ್ ಮಾತು ಕೊಡು.. ನೀನು ಹೇಗೆ ಬದುಕ್ತಿಯಾ ಅಂತ ನನಗೆ ಗೊತ್ತಿಲ್ಲ. ಆದರೆ, ನೀನು ಸಾಯುವಾಗ ಪ್ರಬಲನಾಗಿ, ದೊಡ್ಡ ಶ್ರೀಮಂತನಾಗಿ ಸಾಯಬೇಕು.''

    ಗಾಯಗೊಂಡಿರುವ ಸಿಂಹ

    ಗಾಯಗೊಂಡಿರುವ ಸಿಂಹ

    ''ಗಾಯಗೊಂಡಿರುವ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತದೆ.''

    ''ಪವರ್ ಫುಲ್ ಫೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್

    'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಕಿವಿಮಾತು 'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಕಿವಿಮಾತು

    ಗ್ಯಾಂಗ್ ಸ್ಟರ್ ಅಲ್ಲ

    ಗ್ಯಾಂಗ್ ಸ್ಟರ್ ಅಲ್ಲ

    ''ಒಂದು ಹೊಟೆದಾಟದಲ್ಲಿ ಯಾರು ಮೊದಲು ಹೊಡುದ್ರು ಎನ್ನುವುದು ಲೆಕ್ಕಕ್ಕೆ ಬರಲ್ಲ. ಯಾರ್ ಮೊದಲು ಕೆಳಗೆ ಬಿದ್ರು ಅನ್ನೊದೇ ಲೆಕ್ಕಕ್ಕೆ ಬರೋದು.''

    ''ಗ್ಯಾಂಗ್ ಕಟ್ಟಿಕೊಂಡು ಬರೋನು ಗ್ಯಾಂಗ್ ಸ್ಟರ್.. ಇವನು ಒಬ್ಬನೋ ಬರೋದು.. ಮೊನ್ ಸ್ಟಾರ್''

    ಬ್ಯಾಡ್ - ಡ್ಯಾಡ್

    ಬ್ಯಾಡ್ - ಡ್ಯಾಡ್

    'ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯು ಆರ್ ಡ್ಯಾಡ್'.

    ''ಇನ್ಮೇಲೆ ಅವರಪ್ಪ ನನ್ನ ಮಾವ. ನಾನು ನಿಮ್ಮೆಲ್ಲರಿಗೂ ಭಾವ. ನಿಮ್ಮಕ್ಕನ್ನ ಚೆನ್ನಾಗಿ ನೋಡ್ಕೊಳ್ರೊ''

    ''ಎಲ್ಲ ಸಿನಿಮಾಗಳಲ್ಲಿಯೂ ಒಬ್ಬ ಇರ್ತಾನಂತಲ್ಲ ನಿನ್ನುನ್ನ ನೋಡಿದ್ರೆ ಹಾಗೆ ಅನ್ಸುತ್ತೆ.. ಯಾರು ಹೀರೋ ನಾ ?, ಅಲ್ಲ 'ವಿಲನ್'

    ಬಾಂಬೆ ಏನು ನಿಮ್ಮಪ್ಪಂದಾ.?

    ಬಾಂಬೆ ಏನು ನಿಮ್ಮಪ್ಪಂದಾ.?

    ''ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ"

    ''ಬಾಂಬೆ ಏನು ನಿಮ್ಮಪ್ಪಂದಾ.? ಇಲ್ಲ ಕಣೋ, ಬಾಂಬೆ ನಿಮ್ಮಪ್ಪಂದೆ, ಆದ್ರೆ, ನಿಮ್ಮ ಅಪ್ಪ ನಾನೇ....''

    ಪ್ರಪಂಚನೇ ಗೆಲ್ಬಹುದು

    ಪ್ರಪಂಚನೇ ಗೆಲ್ಬಹುದು

    ''ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರಿ ಒಂದು ಯುದ್ಧ ಗೆಲ್ಬಹುದು... ಅದೇ ನೀನು ಮುಂದೆ ನಿಂತಿದ್ದೀಯಾ ಅಂತ ಹಿಂದೆ ಇರೋ ಸಾವಿರ ಜನಕ್ಕೆ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಬಹುದು....''

    ''ಹೊರಟ ಅವನಿಗೆ ಹೋಗುತ್ತಿದ್ದ ದಾರಿ ಬಗ್ಗೆ ಗೊತ್ತಿಲಿಲ್ಲ. ತಲುಪುವ ಜಾಗದ ಬಗ್ಗೆ ಗೊತ್ತಿರಲಿಲ್ಲ. ಅದರ ಅಮಾನುಷ ಚರಿತ್ರೆ ಬಗ್ಗೆನೂ ಗೊತ್ತಿರಲಿಲ್ಲ.''

    ಭಯ ಹುಟ್ಟಿಸಿದವನು, ಭಯ ಸಾಯಿಸಿದವನು

    ಭಯ ಹುಟ್ಟಿಸಿದವನು, ಭಯ ಸಾಯಿಸಿದವನು

    ''17 ಸಾವಿರ ವರ್ಷದ ಯುದ್ಧದ ಇತಿಹಾಸದಲ್ಲಿ ಕದನಗಳೆಷ್ಟೋ ನಡೆದಿದೆ. ಎಷ್ಟೋ ನೆತ್ತರ ಹರಿದಿದೆ. ಆದರೆ, ನಮ್ಮ ನೆನಪಿನಲ್ಲಿ ಉಳಿಯುವವರು ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು.. ಇವನು ಅವೆರಡು ಮಾಡಿದ್ದ.''

    ''ಭಾವನೆಗಳಿಗೆ ಓಳಗಾಗಬೇಡ.. ಇಲ್ಲಿ ಅದುಕ್ಕೆ ಬೆಲೆ ಇಲ್ಲ. ಎದೆಯಲ್ಲಿ ಕಲ್ಲು ಇದ್ದವನಿಗೆ ಇದೆಲ್ಲ ಅಂಟೋದಿಲ್ಲ.''

    English summary
    Rocking Star Yash's 'KGF kannada movie dialogues. The movie is directed by Prashanth Neel.
    Thursday, December 6, 2018, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X