twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ನಿರ್ದೇಶಕರ ಹೃದಯ ಬಡಿತ ಹೆಚ್ಚಿಸಿದ 'ಕೆ ಜಿ ಎಫ್'

    |

    Recommended Video

    K.G.F Kannada movie : ಕೆ.ಜಿ.ಎಫ್ ಸಿನಿಮಾ ಬಗ್ಗೆ ಆ ನಿರ್ದೇಶಕ ಹೇಳಿದ್ದೇನು..? | Filmibeat Kannada

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ ಜಿ ಎಫ್' ಸಿನಿಮಾದ ಕ್ರೇಜ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಈಗಾಗಲೇ, ಈ ಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಆದರೆ, ನಿನ್ನೆಯಿಂದ ಸಿನಿಮಾ ಮತ್ತೊಂದು ರೀತಿಯಲ್ಲಿ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ.

    'KGF' ಟ್ರೇಲರ್ ಮತ್ತು ಸಿನಿಮಾ ಯಾವಾಗ ಬರಲಿದೆ?, ಈ ಪ್ರಶ್ನೆಗೆ ಉತ್ತರ ಸಿಗಲಿದೆ 'KGF' ಟ್ರೇಲರ್ ಮತ್ತು ಸಿನಿಮಾ ಯಾವಾಗ ಬರಲಿದೆ?, ಈ ಪ್ರಶ್ನೆಗೆ ಉತ್ತರ ಸಿಗಲಿದೆ

    ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಪ್ರೇಕ್ಷಕರಿಗೆ ಮಾತ್ರವಲ್ಲ ಕನ್ನಡದ ಅನೇಕ ನಿರ್ದೇಶಕರು 'ಕೆಜಿಎಫ್' ಸಿನಿಮಾದ ಹೊಸ ಪೋಸ್ಟರ್ ನೋಡಿ ಮೆಚ್ಚಿಕೊಂಡಿದ್ದಾರೆ.

    KGF kannada movie new posters getting positive response

    ನಿರ್ದೇಶಕ ತರುಣ್ ಸುಧೀರ್, ಪವನ್ ಒಡೆಯರ್, ಸಿಂಪಲ್ ಸುನಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಅನೇಕರು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ 'ಕೆಜಿಎಫ್' ಸಿನಿಮಾದ ಬಗ್ಗೆ ಬರೆದುಕೊಳ್ಳುತ್ತಿದ್ದಾರೆ.

    ನಿನ್ನೆ ಈ ಸಿನಿಮಾದ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಅಕ್ಟೋಬರ್ 14 ರಂದು ಚಿತ್ರದ ಟ್ರೇಲರ್ ಹಾಗೂ ನವೆಂಬರ್ 16 ರಂದು ಸಿನಿಮಾ ರಿಲೀಸ್ ಆಗಲಿದೆ.

    ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. 'ಉಗ್ರಂ' ನಿರ್ದೇಶಕ ಪ್ರಶಾಂತ್ ನೀಲ್ ಕನಸಿನ ಸಿನಿಮಾ ಇದಾಗಿದೆ. ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    English summary
    Actor Yash and Srinidhi Shetty starrer 'KGF' kannada movie new posters getting positive response. The movie is direted by Prashanth Neel
    Thursday, September 20, 2018, 17:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X