'KGF' ಟ್ರೇಲರ್ ಮತ್ತು ಸಿನಿಮಾ ಯಾವಾಗ ಬರಲಿದೆ?, ಈ ಪ್ರಶ್ನೆಗೆ ಉತ್ತರ ಸಿಗಲಿದೆ
ರಾಜಾಹುಲಿ' ಯಶ್ ಅಭಿಮಾನಿಗಳು ಬಹು ಕಾಲದಿಂದ ಕೇಳುತ್ತಿರುವ ಪ್ರಶ್ನೆ ಒಂದೇ ಅದು 'ಕೆ ಜಿ ಎಫ್' ಸಿನಿಮಾ ಯಾವಾಗ ಬಿಡುಗಡೆ ಅಂತ. ಅಂದಹಾಗೆ, ಈ ಪ್ರಶ್ನೆಗೆ ಉತ್ತರ ಸಿಗುವ ಟೈಂ ಈಗ ಬಂದಿದೆ
'ಕೆ ಜಿ ಎಫ್' ಸಿನಿಮಾದ ನಿರ್ಮಾಪಕ ಕಾರ್ತಿಕ್ ಗೌಡ ಚಿತ್ರದ ರಿಲೀಸ್ ಡೇಟ್ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಕೆ ಜಿ ಎಫ್' ಸಿನಿಮಾದ ಬಿಡುಗಡೆಯ ಹಾಗೂ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಇದೇ ತಿಂಗಳ 19 ರಂದು ಅನೌನ್ಸ್ ಮಾಡಲಿದ್ದಾರಂತೆ.
ಚಿತ್ರದ ರಿಲೀಸ್ ಡೇಟ್ ಮಾಹಿತಿಯನ್ನು ಒಂದು ಸಿಂಪಲ್ ಪೋಸ್ಟರ್ ನಲ್ಲಿ ಮೂಲಕ ತಿಳಿಸಲಾಗಿದೆ. ಯಶ್ ಫ್ಯಾನ್ಸ್ ಜೊತೆಗೆ ಸಿನಿಮಾಭಿಮಾನಿಗಳು ಕಾಯುತ್ತಿರುವ ಈ ಮಹಾ ಸಿನಿಮಾ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿದೆ.

ಅಂದಹಾಗೆ, 'ಕೆ ಜಿ ಎಫ್' ನಟ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ.
ಇನ್ನೊಂದು ಕಡೆ ಗಣೇಶ ಹಬ್ಬಕ್ಕೆ 'ದಿ ವಿಲನ್' ಚಿತ್ರದ ರಿಲೀಸ್ ಡೇಟ್ ಹೇಳ್ತನಿ ಎಂದು ನಿರ್ದೇಶಕ ಪ್ರೇಮ್ ಸಹ ಹೇಳಿದ್ದಾರೆ.


Click it and Unblock the Notifications











