For Quick Alerts
  ALLOW NOTIFICATIONS  
  For Daily Alerts

  'ಕೆ ಜಿ ಎಫ್' ತಂಡದಿಂದ ಅಭಿಮಾನಿಗಳಿಗೆ ಸಿಕ್ಕಿತು ಸಿಹಿ ಸುದ್ದಿ

  By Naveen
  |
  K.G.F Kannada movie : ಅಂತೂ ಇಂತೂ ಕೆ.ಜಿ.ಎಫ್ ಶೂಟಿಂಗ್ ಮುಗೀತು..! | Filmibeat Kannada

  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು 'ಕೆ ಜಿ ಎಫ್' ಸಿನಿಮಾವನ್ನು ಯಾವಾಗ ಕಣ್ಣು ತುಂಬಿಕೊಳ್ಳುತ್ತೇವೋ ಎಂದು ಕಾಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಅಂತು ಒಂದು ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, ನಿನ್ನೆಗೆ ಈ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.

  ಕಳೆದ ಎರಡು ವರ್ಷಗಳಿಂದ 'ಕೆ ಜಿ ಎಫ್' ಸಿನಿಮಾದ ಕೆಲಸಗಳು ನಡೆಯುತ್ತಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾಗಾಗಿ ತುಂಬನೇ ಶ್ರಮ ಪಡುತ್ತಿದ್ದಾರೆ. ಯಶ್ ಕೂಡ 'ಕೆ ಜಿ ಎಫ್' ಚಿತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.

   'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು 'ಕೆ ಜಿ ಎಫ್' ಬಗ್ಗೆ ನಟಿ ತಮನ್ನಾ ಹೀಗೆ ಹೇಳಿದ್ರು

  ಸಿನಿಮಾದ ಒಂದು ಹಾಡು ಬಾಕಿ ಇದ್ದು, ಕಳೆದ ಕೆಲ ದಿನಗಳ ಹಿಂದೆ ಅದರ ಶೂಟಿಂಗ್ ಕೂಡ ನಡೆದಿತ್ತು. ನಟಿ ತಮನ್ನಾ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಹಾಡಿನ ನಂತರ ಈ ಸಿನಿಮಾದ ಒಟ್ಟಾರೆ ಶೂಟಿಂಗ್ ಮುಗಿದಿದೆ. ಕೇಕ್ ಕಟ್ ಮಾಡುವ ಮೂಲಕ ಈ ಸಂತಸದ ಕ್ಷಣವನ್ನು ಚಿತ್ರತಂಡ ಆಚರಣೆ ಮಾಡಿದೆ. ಇನ್ನು ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

  .

  ಅಂದಹಾಗೆ, 'ಕೆ ಜಿ ಎಫ್' ಸಿನಿಮಾದ ಟ್ರೇಲರ್ ಈ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಉಳಿದಂತೆ, ಸಿನಿಮಾ ರಿಲೀಸ್ ಡೇಟ್ ಇನ್ನೂ ಅನೌನ್ಸ್ ಆಗಿಲ್ಲ.

  English summary
  Actor Yash and Srinidhi Shetty starrer 'KGF' kannada movie shooting completed. The movie is direted by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X