»   » ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಬಂತು 'KGF' ಟೀಸರ್

ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಬಂತು 'KGF' ಟೀಸರ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಇಂದು ಸಿಕ್ಕಾಪಟ್ಟೆ ಸಂತಸದಲ್ಲಿ ಇದ್ದಾರೆ. ಕಾರಣ ಎಷ್ಟೊ ತಿಂಗಳುಗಳಿಂದ ಕಾಯುತ್ತಿದ್ದ ಬಹುನಿರೀಕ್ಷಿತ 'ಕೆ.ಜಿ.ಎಫ್' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.

1 ನಿಮಿಷ 25 ಸೆಕೆಂಡ್ ಗಳ ಈ ಟೀಸರ್ ಸಖತ್ ಖದರ್ ಆಗಿದೆ. ಟೀಸರ್ ನಲ್ಲಿ ಮೊದಲು ಮೇಕಿಂಗ್ ಬೀಟ್ ತೋರಿಸಿದ್ದಾರೆ. ರಾಕಿ ಆಗಿ ಕಾಣಿಸಿಕೊಂಡಿರುವ ಯಶ್ ಖಡಕ್ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ. ಜೊತೆಗೆ ಟೀಸರ್ ನಲ್ಲಿ ಅನಂತ್ ನಾಗ್ ಧ್ವನಿ ಗಮನ ಸೆಳೆಯುತ್ತದೆ.

''17 ಸಾವಿರ ವರ್ಷದ ಯುದ್ಧದ ಇತಿಹಾಸ. ಅದರಲ್ಲಿ ಎಷ್ಟೋ ಕದನಗಳು ನಡೆದಿದೆ. ಎಷ್ಟೋ ನೆತ್ತರು ಹರಿದಿದೆ. ಆದರೆ ನಮ್ಮ ನೆನಪಿನಲ್ಲಿ ಉಳಿಯುವುದು ಇಬ್ಬರೆ. ಭಯ ಹುಟ್ಟಿಸಿದವನು.. ಭಯ ಸಾಯಿಸಿದವನು.. ಇವನು ಅವರಡನ್ನು ಮಾಡಿದ್ದ.'' ಎಂದು ಅನಂತ್ ನಾಗ್ ತಮ್ಮ ಕಂಠದಲ್ಲಿ ರಾಕಿ ಪಾತ್ರವನ್ನು ವಿವರಿಸಿದ್ದಾರೆ.

'KGF' kannada movie teaser released

'ಕೆ.ಜಿ.ಎಫ್' ಚಿತ್ರ 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ರವಿ ಬಸೂರ್ ಸಂಗೀತ ನೀಡಿದ್ದು, ಶ್ರೀ ನಿಧಿ ಶೆಟ್ಟಿ ಚಿತ್ರದ ನಾಯಕಿ ಆಗಿದ್ದಾರೆ. ಸಿನಿಮಾದ ಟ್ರೇಲರ್ ಮುಂದಿನ ತಿಂಗಳು ಬರಲಿದೆ.

English summary
'KGF' kannada movie teaser released on Rocking Star Yash birthday January 8th. the movie directed by Prashanth Neel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X