'ಕೆಜಿಎಫ್'ಗೆ ಸಿಕ್ಕ ಮೈನ್ ಥಿಯೇಟರ್ ಯಾವುದು?
'ಕೆಜಿಎಫ್' ಎನ್ನುವ ಮಹಾ ಸಿನಿಮಾ ಬರಲು ಏಳು ದಿನ ಬಾಕಿ ಉಳಿದಿದೆ. ಭಾರತದಾದ್ಯಂತ ಈ ಕನ್ನಡ ಸಿನಿಮಾ ಸುದ್ದಿ ಮಾಡುತ್ತಿದೆ. ಐದು ಭಾಷೆಯ ಜನ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಈ ಸಿನಿಮಾ ರಿಲೀಸ್ ಆಗುವ ಚಿತ್ರಮಂದಿರದ ಪಟ್ಟಿ ಈಗ ಹೊರ ಬಂದಿದೆ. ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಸಿನಿಮಾ ಬರಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ನರ್ತಕಿ ಥಿಯೇಟರ್ ನಲ್ಲಿ 'ಕೆಜಿಎಫ್' ರಿಲೀಸ್ ಆಗುತ್ತಿದೆ.
ಚಿತ್ರಮಂದಿರ ಲಿಸ್ಟ್ ಹೊರಬಂದಿದ್ದು, ಕೊನೆಯ ಕ್ಷಣದಲ್ಲಿ ಚಿತ್ರಮಂದಿರಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಅಂದಹಾಗೆ, ಶಿವಮೊಗ್ಗದ ಮೂರು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುತಿರುವುದು ಮತ್ತೊಂದು ವಿಶೇಷ.

ಇದೇ ಭಾನುವಾರದಿಂದ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಲಿದೆ. ಸಿನಿಮಾಗೆ ದೊಡ್ಡ ಕ್ರೇಜ್ ಇದ್ದು ಟಿಕೆಟ್ ಬೆಲೆ ಕೂಡ ಏರಿಕೆ ಆಗಲಿದೆ.
ವಿಜಯ್ ಕಿರಗಂದೂರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಯಶ್, ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ.
English summary
Rocking star Yash starrer 'KGF' kannada movie will be releasing in Narthaki theatre, Bengaluru.


Click it and Unblock the Notifications