ಪ್ರೇಮ ಲಹರಿ ; ಸದ್ದಿಲ್ಲದೇ ಡ್ರಮ್ಮರ್ ಮಂಜು ಜೊತೆ ಮದುವೆಯಾದ 'ಸೋಜುಗಾದ ಸೂಜು ಮಲ್ಲಿಗೆ' ಅನನ್ಯಾ ಭಟ್

ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಇವರ ಈ ಟಾರ್ಚರ್‌ ತಡೆಯಲು ಆಗಲಾರದೇ..

ಮದುವೆಯಾಗುವ ಯೋಚನೆಯನ್ನು ಕೂಡ ಮಾಡದ ಕೆಲವರು ಏಕಾಏಕಿ ಮದುವೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಸಂಗಾತಿಯನ್ನು ಒಮ್ಮಿಂದೊಮ್ಮೆಲೆ ಪರಿಚಯಿಸುತ್ತಾರೆ. ಇನ್ನೂ ಕೆಲವರು ಸದ್ದಿಲ್ಲದೇ ಮದುವೆಯಾಗುವ ಮೂಲಕ ತಮ್ಮ ಅಭಿಮಾನಿಗಳನ್ನು ಅಚ್ಚರಿಗೆ ದೂಡುತ್ತಾರೆ. ಇದಕ್ಕೆ ಅನನ್ಯ ಭಟ್ ಸದ್ಯದ ಉದಾಹರಣೆ.

K G F amp amp Kantara Singer Ananya Bhat Marries Drummer Manju in Tirupati

ಹೌದು, ಅನನ್ಯಾ ಭಟ್ .. ಕನ್ನಡದ ಕೋಗಿಲೆ. ''ಲೂಸಿಯಾ'' ಚಿತ್ರದ ''ನೀ ತೊರೆದ ಘಳಿಗೆಯಲ್ಲಿ''... ''ರಾಮಾ ರಾಮಾ ರೇ'' ಚಿತ್ರದ ''ನಮ್ಮ ಕಾಯೋ ದೇವನೆ''.. ''ಟಗರು'' ಚಿತ್ರದ ''ಮೆಂಟಲ್ ಹೋ ಜಾವಾ''.. ''ಕೆಜಿಎಫ್'' ಚಿತ್ರದ ''ಮೆಹಬೂಬಾ''..ಮತ್ತು ''ಧೀರ ಧೀರ''.. ''ಕಾಂತಾರ'' ಚಿತ್ರದ ''ಸಿಂಗಾರ ಸಿರಿಯೇ''.. ''ಪುಷ್ಪ'' ಚಿತ್ರದ ''ಸಾಮಿ ಸಾಮಿ''..

ಹೀಗೆ ಒಂದಾ.. ಎರಡಾ... ಕಳೆದ ಹನ್ನೆರಡು ವರ್ಷಗಳಲ್ಲಿ ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಹಲವಾರು ಹಾಡುಗಳ ಮೂಲಕ ಹೃದಯ ಗೆದ್ದವರು ಅನನ್ಯಾ ಭಟ್.

ಇನ್ನು 2020ರ ಆಸು ಪಾಸು ಇವರ ಚಿನ್ನದ ಕಂಠದಿಂದ ಹೊರ ಹೊಮ್ಮಿದ ''ಸೋಜುಗಾದ ಸೂಜು ಮಲ್ಲಿಗೆ'' ಹಾಡು ಮರೆಯುವುದುಂಟೆ. ಈ ಹಾಡಿಂದ ವಿಶ್ವದೆಲ್ಲೆಡೆ ಇರುವ ಗಾನ ಪ್ರಿಯರನ್ನು ತಲುಪಿದ ಅನನ್ಯಾ ಭಟ್ ಅವರಿಗೆ ಇಶ ಫೌಂಡೇಶನ್‌ನ ಸದ್ಗುರು ಕೂಡ ಶರಣಾಗಿದ್ದರು. ಹತ್ತು ಲಕ್ಷ ಜನರ ಎದುರು ಮೊದಲ ಬಾರಿ ಈ ಹಾಡನ್ನು ಹಾಡಿದ್ದರು ಅನನ್ಯಾ ಭಟ್.

ಇಂಥಾ ಅನನ್ಯಾ ಭಟ್ ಸದ್ಯ ಸದ್ದು ಗದ್ದಲ ಇಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಜೊತೆ ಸಪ್ತಪದಿ ತುಳಿದಿದ್ದಾರೆ. ಖ್ಯಾತ ಜ್ಯೋತಿಷ್ಯ ಶಾಸ್ತ್ರದ ಲೇಖಕ ಮತ್ತು ಪಂಡಿತರಾದ ಪಂಡಿತ್ ಡಾ. ಅರುಣ್ ಗುರೂಜಿ ಅವರ ಮುಂದಾಳತ್ವದಲ್ಲಿ ಇಂದು (ನವೆಂಬರ್ 10) ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ಧಾರೆ.

K G F amp amp Kantara Singer Ananya Bhat Marries Drummer Manju in Tirupati

ಇನ್ನೂ ಅನನ್ಯಾ ಭಟ್ ಮತ್ತು ಡ್ರಮ್ಮರ್ ಮಂಜು ಅವರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಇಬ್ಬರ ಮೊದಲ ಭೇಟಿ ಆಗಿದ್ದು ಎಲ್ಲಿ..? ಸ್ನೇಹ ಶುರುವಾಗಿದ್ದು ಹೇಗೆ..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸದ್ಯ ಇಲ್ಲದಿದ್ದರೂ ಹಲವು ಕಾರ್ಯಕ್ರಮಗಳನ್ನು ಇವರು ಇಬ್ಬರು ಜೊತೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿರಬಹುದು ಎನ್ನುವ ಅನುಮಾನ ಸದ್ಯ ಹಲವರದ್ದು. ಇದಕ್ಕೆ ಪೂರಕವಾಗಿ ಅನನ್ಯ ಮತ್ತು ಮಂಜು ಇಬ್ಬರೂ ಸಂಗೀತ ಪ್ರೇಮಿಗಳು. ಸಂಗೀತಾಸಕ್ತರು. ಸಂಗೀತದ ಮೂಲಕ ಒಡನಾಟ ಹೊಂದಿರುವವರು, ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎಂದು ಅನನ್ಯಾ ಅವರ ತಾಯಿ ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸದ್ಯ ಅನನ್ಯಾ ಭಟ್ ಮತ್ತು ಡ್ರಮ್ಮರ್ ಮಂಜು ಅವರ ಮದುವೆಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಲವರು ಅನನ್ಯಾ ಭಟ್ ಮತ್ತು ಡ್ರಮ್ಮರ್ ಮಂಜು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿಮಾನಿಗಳು ಕೂಡ ಮದುವೆಯ ಬಂಧನಕ್ಕೊಳಗಾದ ನವ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕ ಹರಸಿ ಹಾರೈಸುತ್ತಿದ್ದಾರೆ. ಹೊಸ ಜೀವನಕ್ಕೆ ಮುನ್ನುಡಿ ಬರೆದಿರುವ ಅನನ್ಯಾ ಭಟ್ ಅವರಿಗೆ ನಿಮ್ಮ ಹಾರೈಕೆ ಕೂಡ ಇರಲಿ.

More from Filmibeat

English summary
The soundtrack of love! Get all the inside scoop on 'Kantara' singer Ananya Bhat's wedding as she marries long-time love and drummer Manju. Read about the gorgeous Tirupati celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X