ಮತ್ತೆ 'ಜೀರೋ' ಚಿತ್ರವನ್ನ ಹಿಂದೆ ಹಾಕಿದೆ ರಾಕಿ ಭಾಯ್
'ಕೆಜಿಎಫ್' ಜ್ವರ ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ರಾಕಿ ಭಾಯ್ ಗೆ ಎಲ್ಲರು ಸಲಾಂ ಹೊಡೆದಿದ್ದಾರೆ.
ಈ ಹಾಡು ಈಗ ಯೂಟ್ಯೂಬ್ ನಲ್ಲಿ ಎರಡನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಒಂದೇ ದಿನಕ್ಕೆ ಒಂದು ಮಿಲಿಯನ್ ಗೂ ಅಧಿಕ ಹಿಟ್ಸ್ ಅನ್ನು ಹಾಡು ಪಡೆದಿದೆ. ವಿಶೇಷ ಅಂದರೆ, ಮತ್ತೆ 'ಜೀರೊ' ಸಿನಿಮಾವನ್ನು 'ಕೆಜಿಎಫ್' ಹಿಂದೆ ಹಾಕಿದೆ.
'ಜೀರೊ' ಸಿನಿಮಾದ ಹಾಡು ಕಳೆದ ಸೋಮವಾರ ಬಿಡುಗಡೆಯಾಗಿತ್ತು. ಆ ಹಾಡು ಬಂದ ಒಂದು ದಿನದ ಬಳಿಕ ನಿನ್ನೆ 'ಕೆಜಿಎಫ್' ಹಾಡು ಬಂತು. ಇದೀಗ ಹಿಂದಿ ಹಾಡನ್ನು ಕನ್ನಡ ಹಾಡು ಹಿಂದೆ ಹಾಕಿದ್ದು, 'ಜೀರೋ' ನಂಬರ್ ಮೂರನೇ ಸ್ಥಾನಕ್ಕೆ ಹೋಗಿದೆ.

'ಕೆಜಿಎಫ್' ಹಾಡಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಹಾಡನ್ನ ಕೇಳೋ ಭಾಗ್ಯ ಸಿಕ್ಕಿದೆ. ಮೊದಲ ಹಾಡು ಹಿಟ್ ಆಗಿದೆ. ಈ ಹಾಡನ್ನ ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್, ಸಂತೋಷ್ ವೆಂಕಿ ಸೇರಿದಂತೆ ಕೆಲವರ ಧ್ವನಿ ಇದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.
ಐದು ಭಾಷೆಗಳಲ್ಲಿ ಈ ಬಹು ನಿರೀಕ್ಷಿತ ಸಿನಿಮಾ ತೆರೆಗೆ ಬರುತ್ತಿದೆ. ಡಿಸೆಂಬರ್ 21 ರಂದು 'ಕೆಜಿಎಫ್' ಹವಾ ಪ್ರಾರಂಭ ಆಗಲಿದೆ.


Click it and Unblock the Notifications











