twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ 'ಜೀರೋ' ಚಿತ್ರವನ್ನ ಹಿಂದೆ ಹಾಕಿದೆ ರಾಕಿ ಭಾಯ್

    |

    'ಕೆಜಿಎಫ್' ಜ್ವರ ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ರಾಕಿ ಭಾಯ್ ಗೆ ಎಲ್ಲರು ಸಲಾಂ ಹೊಡೆದಿದ್ದಾರೆ.

    ಈ ಹಾಡು ಈಗ ಯೂಟ್ಯೂಬ್ ನಲ್ಲಿ ಎರಡನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಒಂದೇ ದಿನಕ್ಕೆ ಒಂದು ಮಿಲಿಯನ್ ಗೂ ಅಧಿಕ ಹಿಟ್ಸ್ ಅನ್ನು ಹಾಡು ಪಡೆದಿದೆ. ವಿಶೇಷ ಅಂದರೆ, ಮತ್ತೆ 'ಜೀರೊ' ಸಿನಿಮಾವನ್ನು 'ಕೆಜಿಎಫ್' ಹಿಂದೆ ಹಾಕಿದೆ.

    ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್

    'ಜೀರೊ' ಸಿನಿಮಾದ ಹಾಡು ಕಳೆದ ಸೋಮವಾರ ಬಿಡುಗಡೆಯಾಗಿತ್ತು. ಆ ಹಾಡು ಬಂದ‌‌ ಒಂದು ದಿನದ ಬಳಿಕ ನಿನ್ನೆ 'ಕೆಜಿಎಫ್' ಹಾಡು ಬಂತು. ಇದೀಗ ಹಿಂದಿ ಹಾಡನ್ನು ಕನ್ನಡ ಹಾಡು ಹಿಂದೆ ಹಾಕಿದ್ದು, 'ಜೀರೋ' ನಂಬರ್ ಮೂರನೇ ಸ್ಥಾನಕ್ಕೆ ಹೋಗಿದೆ.

    KGF movie 1st song trending number 2 on youtube

    'ಕೆಜಿಎಫ್' ಹಾಡಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಹಾಡನ್ನ ಕೇಳೋ ಭಾಗ್ಯ ಸಿಕ್ಕಿದೆ.‌ ಮೊದಲ ಹಾಡು ಹಿಟ್ ಆಗಿದೆ. ಈ ಹಾಡನ್ನ ವಿ ನಾಗೇಂದ್ರ ಪ್ರಸಾದ್ ಬರೆದಿದ್ದು, ವಿಜಯ್ ಪ್ರಕಾಶ್, ಸಂತೋಷ್ ವೆಂಕಿ ಸೇರಿದಂತೆ ಕೆಲವರ ಧ್ವನಿ ಇದೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

    ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!ನಿಜವಾದ 'ಹವಾ' ಅಂದ್ರೆ ಇದು: ಆಡಿಯೋದಿಂದಲೇ 'ಕೋಟಿ' ಬಾಚಿದ ಅಣ್ತಮ್ಮ.!

    ಐದು ಭಾಷೆಗಳಲ್ಲಿ ಈ ಬಹು ನಿರೀಕ್ಷಿತ ಸಿನಿಮಾ ತೆರೆಗೆ ಬರುತ್ತಿದೆ. ಡಿಸೆಂಬರ್ 21 ರಂದು 'ಕೆಜಿಎಫ್' ಹವಾ ಪ್ರಾರಂಭ ಆಗಲಿದೆ.

    English summary
    KGF movie 1st song trending number 1 on youtube
    Wednesday, December 5, 2018, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X