ರೇಟಿಂಗ್ ನಲ್ಲಿ ಬಾಹುಬಲಿ, ಜೀರೋ, ಮಾರಿ ಚಿತ್ರಗಳನ್ನ ಹಿಂದಿಕ್ಕಿದ ಕೆಜಿಎಫ್.!
ಭಾರತದ ಅತಿ ನಿರೀಕ್ಷೆಯ ಚಿತ್ರಗಳ ಪೈಕಿ ಸದ್ಯಕ್ಕೆ ಕೆಜಿಎಫ್, ಶಾರೂಖ್ ಖಾನ್ ಅಭಿನಯದ 'ಜೀರೋ' ಹಾಗೂ ಧನುಶ್ ಅಭಿನಯದ 'ಮಾರಿ-2' ಸಿನಿಮಾಗಳಿದ್ದವು. ಈ ಮೂರು ಚಿತ್ರಗಳು ಇಂದು ಬಿಡುಗಡೆಯಾಗಿವೆ.
ಈ ಮೂರು ಚಿತ್ರಗಳ ಪೈಕಿ ಈಗ ಕೆಜಿಎಫ್ ಚಿತ್ರಕ್ಕೆ ಅತಿ ಹೆಚ್ಚು ರೇಟಿಂಗ್ ಸಿಕ್ಕಿದೆ. ಹೌದು, ಭಾರತದ ಪ್ರತಿಷ್ಠಿತ ಐಎಂಡಿಬಿ ರೇಟಿಂಗ್ ನಲ್ಲಿ ಕೆಜಿಎಫ್ ಮೊದಲ ಸ್ಥಾನ ಪಡೆದುಕೊಂಡಿದೆ.
ಈ ಹಿಂದೆ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ದಿ ಬಿಗಿನಿಂಗ್ ಮತ್ತು ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರಗಳು ಮೊದಲೆರಡು ಸ್ಥಾನಗಳಿದ್ದವು. ಆದ್ರೀಗ, ಬಾಹುಬಲಿ ಚಿತ್ರದ ಎರಡು ಭಾಗಗಳನ್ನ ಕೆಜಿಎಫ್ ಹಿಂದಿಕ್ಕಿದೆ.

ಕೆಜಿಎಫ್ ಚಿತ್ರಕ್ಕೆ ಐಎಂಡಿಬಿ ರೇಟಿಂಗ್ ನಲ್ಲಿ 10ಕ್ಕೆ 9.5 ಪಾಯಿಂಟ್ಸ್ ಸಿಕ್ಕಿದೆ. ಬಾಹುಬಲಿ-2 ಚಿತ್ರಕ್ಕೆ 8.3 ರೇಟಿಂಗ್ ನೀಡಲಾಗಿತ್ತು. ಜೀರೋ ಚಿತ್ರಕ್ಕೆ 7.5 ಹಾಗೂ ಮಾರಿ 2 ಚಿತ್ರಕ್ಕೆ 7.5 ಪಾಯಿಂಟ್ಸ್ ನೀಡಲಾಗಿತ್ತು.
ಇದೀಗ, ಈ ಎಲ್ಲಾ ಚಿತ್ರಗಳನ್ನ ಹಿಂದಿಕ್ಕಿ ಕೆಜಿಎಫ್ ಚಿತ್ರ ಅತಿ ಹೆಚ್ಚು ರೇಟಿಂಗ್ ಪಡೆದಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷ್ಯವಾಗಿದೆ. ಇಲ್ಲಿಯವರೆಗೂ ಐಎಂಡಿಬಿ ರೇಟಿಂಗ್ ನಲ್ಲಿ ಅತಿ ಹೆಚ್ಚು ಪಾಯಿಂಟ್ಸ್ ಪಡೆದಿರುವ ಸಿನಿಮಾ ಕೆಜಿಎಫ್ ಆಗಿದೆ.


Click it and Unblock the Notifications











