25 ದಿನಗಳನ್ನು ಪೂರೈಸಿದ 'ಕೆಜಿಎಫ್' ಸಿನಿಮಾ

Recommended Video

KGF Kannada Movie: ಯಶ್ ನಿರ್ಧಾರ ಕನ್ನಡ ಚಿತ್ರರಂಗದ ಗರಿಮೆ ಹೆಚ್ಚಿಸಿತು | FILMIBEAT KANNADA

'ಕೆಜಿಎಫ್' ಸಿನಿಮಾ ದಾಖಲೆಗಳ ಮೇಲೆ ದಾಖಲೆಯನ್ನು ಮಾಡುತ್ತಿದೆ. ಈಗ ಸಿನಿಮಾ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಡಿಸೆಂಬರ್ 21ಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ನಾಳೆಗೆ ಸರಿಯಾಗಿ 25 ದಿನಗಳನ್ನ ಕಂಪ್ಲೀಟ್ ಮಾಡಲಿದೆ.

ಕನ್ನಡದ ಈ ಹೆಮ್ಮೆಯ ಸಿನಿಮಾ ದೇಶ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕನ್ನಡ ಚಿತ್ರರಂಗ ಇತಿಹಾಸಲ್ಲಿ ಬಂದ ದೊಡ್ಡ ಚಿತ್ರಗಳಲ್ಲಿ ಈ ಚಿತ್ರ ಪ್ರಮುಖವಾಗಿದೆ. ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ ಮಾಡಿದೆ. ನೂರು ಕೋಟಿ ಕ್ಲಬ್ ದಾಟಿದ ಕನ್ನಡದ ಮೊದಲ ಸಿನಿಮಾವಾಗಿದೆ.

ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಸಿನಿಮಾ ಹಿಟ್ ಆಗಿದೆ. ಬಾಲಿವುಡ್ ನಲ್ಲಿ ಸಿನಿಮಾ 41 ಕೋಟಿ ಕಲೆಕ್ಷನ್ ಮಾಡಿದೆ. ಕಳೆದ ವರ್ಷದ ಬಿ ಟೌನ್ ಗೆ ಹೋದ ಸೌತ್ ಸಿನಿಮಾಗಳಲ್ಲಿ 'ಕೆಜಿಎಫ್' ದೊಡ್ಡ ಹೆಸರು ಮಾಡಿದೆ.

kgf movie complets 25 days

ಸಿನಿಮಾಗೆ ಒಳ್ಳೆಯ ಟಾಕ್ ಇರುವ ಕಾರಣ 25 ದಿನಗಳ ಆದರೂ ಸಿನಿಮಾ ಕಲೆಕ್ಷನ್ ಕಡಿಮೆ ಆಗುತ್ತಿಲ್ಲ. ಜನ ಕೂಡ ಚಿತ್ರಮಂದಿರದ ಕಡೆಗೆ ಬರುವುದು ನಿಲ್ಲಿಸಿಲ್ಲ. ಈ ವಾರ ಸಂಕ್ರಾತಿ ಹಬ್ಬ ಇರುವ ಕಾರಣ ಚಿತ್ರದ ಗಳಿಕೆಯಲ್ಲಿ ಏರಿಕೆ ಆಗಬಹುದು.

ಅಂದಹಾಗೆ, 'ಕೆಜಿಎಫ್' ಪ್ರಶಾಂತ್ ನೀಲ್ ನಿರ್ದೇಶನ ಎರಡನೇ ಸಿನಿಮಾವಾಗಿದ್ದು, ವಿಜಯ್ ಕಿರಗಂದೂರು ಸಿನಿಮಾದ ನಿರ್ಮಾಣ ಮಾಡಿದ್ದರು.

More from Filmibeat

English summary
Kannada actor Yash's 'KGF' movie completes 25 days . This is kannada's first movie to enter 200 crore club.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X