ಹಾಫ್ ಸೆಂಚುರಿ ಹೊಡೆದ ಯಶ್: 'ಚಾಪ್ಟರ್ 2' ಬಗ್ಗೆ ನಿರ್ಮಾಪಕರ ಟ್ವೀಟ್

ಕನ್ನಡ ಚಿತ್ರರಂಗದ ಮಹಾ ಸಿನಿಮಾ 'ಕೆಜಿಎಫ್' ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಸಿನಿಮಾ ಈಗ 50 ದಿನಗಳನ್ನು ಪೂರೈಸಿದೆ. ಕರುನಾಡ ರಾಕಿ ಬಾಯ್ ಹಾಫ್ ಸೆಂಚುರಿ ಹೊಡೆದಿದ್ದಾರೆ.

ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ 'ಕೆಜಿಎಫ್' ಸಿನಿಮಾ ಇಡೀ ದೇಶದಲ್ಲಿಯೇ ಸದ್ದು ಮಾಡಿತ್ತು. ಕನ್ನಡ ಈ ಬಂಗಾರದ ಸಿನಿಮಾದ ದೇಶ ಮಟ್ಟದಲ್ಲಿ ಹೆಸರು ಮಾಡಿತ್ತು. ಚಿತ್ರತಂಡದ ಶ್ರಮಕ್ಕೆ ಅಭಿಮಾನಿಗಳ ಪ್ರೀತಿ ಸಿಕ್ಕರೆ ಅವರ ಪ್ರತಿಪಲ ಹೇಗಿರುತ್ತದೆ ಎನ್ನುವುದನ್ನು ಈ ಸಿನಿಮಾ ಮತ್ತೆ ಸಾಭೀತು ಮಾಡಿತ್ತು.

ಸಿನಿಮಾದ ಈ ಗೆಲುವು ಇಡೀ ತಂಡಕ್ಕೆ ಖುಷಿ ನೀಡಿದೆ. ಈ ಸಂತಸವನ್ನು ನಿರ್ಮಾಪಕರಾದ ವಿಜಯ್ ಕಿರಗಂದೂರು ಹಾಗೂ ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

ಧನ್ಯವಾದ ಹೇಳಿದ ವಿಜಯ್ ಕಿರಗಂದೂರು

ಧನ್ಯವಾದ ಹೇಳಿದ ವಿಜಯ್ ಕಿರಗಂದೂರು

ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಕಿರಗಂದೂರು ''KGF ನನಗೆ ಬರೀ ಚಿತ್ರವಲ್ಲ. ಇಂತಹ ದಾಖಲೆಯ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಸಮರ್ಪಿಸಬೇಕೆಂಬುದು ನನ್ನ ಒಂದು ಕನಸಾಗಿತ್ತು. ಅದ್ಧೂರಿ ಯಶಸ್ಸು ಕಂಡು ಚಿತ್ರ 50ನೇ ದಿನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಾನು ಇಡೀ ಚಿತ್ರತಂಡಕ್ಕೆ, ಅಭಿಮಾನಿಗಳಿಗೆ ಮತ್ತು ಸಮಸ್ತ ಸಿನಿಪ್ರಿಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.'' ಎಂದಿದ್ದಾರೆ.

ಸಿನಿ ಪ್ರಿಯರಿಗೆ ಅರ್ಪಣೆ

'ಕೆಜಿಎಫ್' ಸಿನಿಮಾದ ದೊಡ್ಡ ಗೆಲುವಿಗೆ ಸಿನಿಪ್ರಿಯರು ಕಾರಣ ಎಂದಿರುವ ವಿಜಯ್ ಕಿರಗಂದೂರು ಈ ಚಿತ್ರವನ್ನು ಅವರಿಗೆ ಅರ್ಪಣೆ ಮಾಡಿದ್ದಾರೆ. 50 ದಿನದ 'ಕೆಜಿಎಫ್' ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸಹ ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2

'ಕೆಜಿಎಫ್' ಹಾಫ್ ಸೆಂಚುರಿ ಬಗ್ಗೆ ಕಾರ್ತಿಕ್ ಗೌಡ ಕೂಡ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಸೇರಿದಂತೆ ಸಾಕಷ್ಟು ಸೆಂಟರ್ ಗಳಲ್ಲಿ 'ಕೆಜಿಎಫ್' ಸಿನಿಮಾ ಐವತ್ತು ದಿನ ಪೂರೈಸಿದೆ. ಗೆಲುವಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ ತಿಳಿಸಿರುವ ಅವರು ಚಾಪ್ಟರ್ 2 ಮುಂದಿನ ತಿಂಗಳಿನಿಂದ ಶುರು ಆಗಲಿದೆ ಎಂದು ಹೇಳಿದ್ದಾರೆ.

ಅಮೇಜಾನ್ ಪ್ರೈಮ್

ಅಮೇಜಾನ್ ಪ್ರೈಮ್

ಕೆಜಿಎಫ್ ಸಿನಿಮಾ ಅಧಿಕೃತವಾಗಿ ಖ್ಯಾತ ಸಾಮಾಜಿಕ ಜಾಲತಾಣ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿ 5 ರಂದು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನವಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಅಮೇಜಾನ್ ಪ್ರೈಂ ವಿಡಿಯೋ ಸುಮಾರು 18 ಕೋಟಿ ರೂಪಾಯಿ ನೀಡಿ ಕೆಜಿಎಫ್ ಸಿನಿಮಾದ ನಾಲ್ಕು ಭಾಷೆಯ ಹಕ್ಕು ಖರೀದಿಸಿದೆಯಂತೆ.

More from Filmibeat

English summary
Kannada actor Yash's 'KGF' movie complets 50 days . This is kannada's first movie to enter 200 crore club.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X