For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್'ಗೆ ಸಲಾಂ : 100 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ

  |
  KGF Kannada Movie: ಎಲ್ಲರನ್ನು ಆಶ್ಚರ್ಯ ಆಗುವಂತೆ ಮಾಡಿದ ಕೆಜಿಎಫ್'ಗೆ ಸಲಾಂ | FILMIBEAT KANNADA

  ಹೌದು, ಅಂತೂ ಕನ್ನಡದ ಒಂದು ಸಿನಿಮಾ 100 ಕೋಟಿ ಗಳಿಕೆ ಮಾಡಿದೆ. ಬಿಡುಗಡೆಯಾದ ಬರೀ 5 ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ಎಲ್ಲರನ್ನು ಆಶ್ಚರ್ಯ ಆಗುವಂತೆ ಮಾಡಿದೆ.

  ಈ ಹಿಂದೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೆ ಮರಾಠಿಯ ಸಿನಿಮಾ ಕೂಡ ನೂರು ಕೋಟಿ ಗಳಿಕೆ ಮಾಡಿತ್ತು. ಕನ್ನಡ ಸಿನಿಮಾಭಿಮಾನಿಗಳು ನಮ್ಮ ಸಿನಿಮಾಗಳು ಯಾವಾಗ ಈ ರೀತಿ ಮಾಡೋದು ಅಂತ ಕಾಯುತ್ತಿದ್ದರು. ಆದರೆ, ಆಗ ಆ ಸಮಯ ಈಗ ಬಂದಿದೆ.

  ಕನ್ನಡದ 'ಕೆಜಿಎಫ್' ಸಿನಿಮಾ 100 ಕೋಟಿ ಗಳಿಸಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಶುಕ್ರವಾರ ರಿಲೀಸ್ ಆದ ಈ ಸಿನಿಮಾಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಿನದಿಂದ ದಿನಕ್ಕೆ ಇದರ ಕಲೆಕ್ಷನ್ ಹೆಚ್ಚಾಗುತ್ತಿದೆ. ಯಶ್ ಈ ಚಿತ್ರದ ಮೂಲಕ ಮೈಲಿಗಲ್ಲು ನಿರ್ಮಿಸಿದೆ. ಮುಂದೆ ಓದಿ...

  ನೂರು ಕೋಟಿ ಸಿನಿಮಾ

  ನೂರು ಕೋಟಿ ಸಿನಿಮಾ

  'ಕೆಜಿಎಫ್' ಬೊಕ್ಕಸಕ್ಕೆ ಈಗ ನೂರು ಕೋಟಿ ಬಂದಿದೆ. ಈ ಮೂಲಕ ಈ ಸಿನಿಮಾ ಕನ್ನಡದ ಮೊದಲ ನೂರು ಕೋಟಿ ಸಿನಿಮಾವಾಗಿದೆ. ಸುಮಾರು 80 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 'ಕೆಜಿಎಫ್' ಈಗ ನೂರು ಕೋಟಿಯ ಗಡಿ ದಾಟಿದೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಹಿಂದಿನ ಕನ್ನಡದ ಎಲ್ಲ ದಾಖಲೆಗಳನ್ನು 'ಕೆಜಿಎಫ್' ಹಿಂದಿಕ್ಕಿದೆ.

  ಮೊದಲ ದಿನಕ್ಕೆ 23 ಕೋಟಿ

  ಮೊದಲ ದಿನಕ್ಕೆ 23 ಕೋಟಿ

  ಎರಡು ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ 'ಕೆಜಿಎಫ್' ದೊಡ್ಡ ಓಪನಿಂಗ್ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಅದೇ ರೀತಿ ಸಿನಿಮಾ ಬಿಡುಗಡೆಯಾದ ದಿನ ದೊಡ್ಡ ರೆಸ್ಪಾನ್ಸ್ ಪಡೆಯಿತು. ಚಿತ್ರ ಮೊದಲ ದಿನ ಹೌಸ್ ಫುಲ್ ಪ್ರದರ್ಶನದಿಂದ 23 ಕೋಟಿ ಕಲೆಕ್ಷನ್ ಮಾಡಿತು.

  ಎರಡನೇ ದಿನ ಮತ್ತು ಮೂರನೇ ದಿನ

  ಎರಡನೇ ದಿನ ಮತ್ತು ಮೂರನೇ ದಿನ

  ಮೊದಲ ದಿನ ಬಂದ ಪ್ರತಿಕ್ರಿಯೆ ಎರಡನೇ ದಿನ ಚಿತ್ರಮಂದಿರವನ್ನು ತುಂಬಿಸಿತ್ತು. ಶುಕ್ರವಾರಕ್ಕಿಂತ ಶನಿವಾರ ಹಾಗೂ ಭಾನುವಾರ ಸಿನಿಮಾಗೆ ಹೆಚ್ಚಿನ ಜನ ಬಂದರು. ಪಾಸಿಟಿವ್ ಕಡೆ ಸಾಗಿದ ಚಿತ್ರದ ಕಲೆಕ್ಷನ್ 40 ಕೋಟಿ ಆಗುವಂತೆ ಮಾಡಿತ್ತು. ಮೂರನೇ ದಿನಕ್ಕೂ ಅದು ಮುಂದುವರೆದಿದ್ದು, 58 ಕೋಟಿ ಕಲೆಕ್ಷನ್ ಆಯ್ತು.

  ನಾಲ್ಕನೇ ದಿನಕ್ಕೆ 77 ಕೋಟಿ

  ನಾಲ್ಕನೇ ದಿನಕ್ಕೆ 77 ಕೋಟಿ

  ಟಿಕೆಟ್ ಡಿಮ್ಯಾಂಡ್ ಗಳ ನಡುವೆ ವಾರಾಂತ್ಯದ ನಂತರ ಸಿನಿಮಾ ನೋಡುವ ಮಂದಿ ಬಹಳ ಇದ್ದರು. ಸೋಮವಾರದಿಂದ ಕೂಡ ಸಿನಿಮಾಗೆ ಯಾವ ಅಡೆತಡೆ ಆಗಲಿಲ್ಲ. ಎಲ್ಲ ರಾಜ್ಯಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಸಿದ್ದು, ನಾಲ್ಕನೇ ದಿನದ ಅಂತ್ಯಕ್ಕೆ 75 ಕೋಟಿಯ ಗಡಿ ದಾಟಿದೆ.

  ಹಿಂದಿಯಿಂದ 16 ಕೋಟಿ

  ಹಿಂದಿಯಿಂದ 16 ಕೋಟಿ

  ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿಯೂ ಸಿನಿಮಾದ ಕಲೆಕ್ಷನ್ ಜೋರಾಗಿದೆ. ಹಿಂದಿಯಲ್ಲಿ 'ಜೀರೋ' ಸಿನಿಮಾವನ್ನೇ 'ಕೆಜಿಎಫ್' ಹಿಂದೆ ಹಾಕಿದೆ. ಇದುವರೆಗೆ ಬಾಲಿವುಡ್ ಬಾಕ್ಸ್ ಆಫೀಸ್ ನಿಂದ ಸಿನಿಮಾಗೆ 16 ಕೋಟಿ ಬಂದಿದೆ. ಕನ್ನಡದ ಬೇರೆ ಯಾವ ಸಿನಿಮಾ ಕೂಡ ಈ ಮಟ್ಟಿಗೆ ಹವಾ ಮಾಡಿಲ್ಲ.

  English summary
  Kannada actor Yash's 'KGF' kannada movie enters 100 crore club. This is kannada's first movie to enter 100 crore club.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X