ಕೆಜಿಎಫ್-1 ಹೇಗೆ ವಿಸ್ಮಮಯಗೊಳಿಸ್ತು? ಹೆಮ್ಮೆ ಪಟ್ಟಂತಹ ಘಟನೆ ಹಂಚಿಕೊಳ್ಳಿ ಎಂದ ಯಶ್

ಭಾರತೀಯ ಚಿತ್ರರಂಗವೆ ಬೆರಗಾಗಿ ನೋಡಿದ ಕೆಜಿಎಫ್-1 ಸಿನಿಮಾ ರಿಲೀಸ್ ಆಗಿ ಇವತ್ತಿಗೆ ಒಂದು ವರ್ಷವಾಗಿದೆ. ಕೆಜಿಎಫ್ ಟೈಟಲ್, ನಿರ್ದೇಶನ, ಹಾಡುಗಳು, ಧೂಳ್ ಎಬ್ಬಿಸುವ ಆಕ್ಷನ್, ತಾಯಿ ಸೆಂಟಿಮೆಂಟ್ ರಾಕಿ ಭಾಯ್, ರೀನಾ, ಗರುಡ ಹೀಗೆ ಚಿತ್ರದ ಪ್ರತಿಯೊಂದು ಅಂಶವು ಕನ್ನಡ ಚಿತ್ರಾಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದ ಕೆಜಿಎಫ್-1 ಚಿತ್ರದ ನೆನೆಪು ಪ್ರತಿಯೊಬ್ಬರಿಗೂ ಹಸಿರಾಗೆ ಇದೆ. ಕನ್ನಡಿಗರು ಹೆಮ್ಮಯಿಂದ ಹೇಳಿಕೊಂಡು ಓಡಾವಂತ ಕೆಜಿಎಫ್ ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಅಭಿಮಾನಿಗಳಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ.

'ಕೆಜಿಎಫ್' ಬಂದು ಹೋದ 1 ವರ್ಷದಲ್ಲಿ ಇಂಡಸ್ಟ್ರಿಯಲ್ಲಾದ 5 ಬಹುಮುಖ್ಯ ಬದಲಾವಣೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆರೆದುಕೊಂಡಿರುವ ಯಶ್, "ಕೆಜಿಎಫ್ ಚಾಪ್ಟರ್ 1 ಹೇಗೆ ನಿಮ್ಮನ್ನು ವಿಸ್ಮಮಯಗೊಳಿಸ್ತು...? ಈ ಚಿತ್ರದಿಂದ ನೀವು ಹೆಮ್ಮೆ ಪಟ್ಟಂತಹ ಘಟನೆ, ಘಳಿಗೆ ಇದ್ದರೆ ಅದು ಏನು..? ಹಂಚಿಕೊಳ್ಳಿ ನಿಮ್ಮ ಆ ಅದ್ಭುತ ಘಟನಾವಳಿಗಳನ್ನ, ಆ ನಿಮ್ಮ ಹೆಮ್ಮೆಯ ಕ್ಷಣಗಳನ್ನ ತಿಳಿದುಕೊಳ್ಳೋ ಕುತೂಹಲದಲ್ಲಿ ನಾನು" ಎಂದು ಬರೆದುಕೊಂಡಿದ್ದಾರೆ.

KGF Movie Favorite Scene Or Proud Moment Shared In Social Media Said Yash

ಯಶ್ ಈ ಪೋಸ್ಟರ್ ಅನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ಇಷ್ಟವಾದ ಘಟನೆ, ಘಳಿಗೆಗಳನ್ನು ಹಂಚಿಕೊಳ್ಳುವ ಜೊತೆಗೆ ಕೆಜಿಎಫ್-2 ಬಗ್ಗೆ ಕೇಳುತ್ತಿದ್ದಾರೆ.

ಯಶ್ ಫೋಸ್ಟ್ ಕೆಳಗೆ ಕಮೆಂಟ್ ಮಾಡುತ್ತಿರುವ ಅಭಿಮಾನಿಗಳು ಸಿನಿಮಾದಲ್ಲಿ ಅಭಿಮಾನಿಗಳು ಇಷ್ಟ ಪಟ್ಟಿದ್ದು ಅಂದರೆ ಡೈಲಾಗ್, ಆಕ್ಷನ್, ರಾಕಿ ಭಾಯ್, ತಾಯಿ ಸೆಂಟಿಮೆಂಟ್, ಬಿಜಿಎಂ ಮತ್ತು ರಾಕಿ ಬೈಕ್ ಸೇರಿದಂತೆ ಪ್ರತಿಯೊಂದು ಧೃಶ್ಯದ ಬಗ್ಗೆಯು ಹೇಳುತ್ತಿದ್ದಾರೆ.

ಇನ್ನು ಅನೇಕರು ಕೆಜಿಎಫ್-2 ಸಿನಿಮಾವನ್ನು ಬೇಗ ರಿಲೀಸ್ ಮಾಡಿ, ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕನ್ನಡ ಚಿತ್ರಪ್ರಿಯರು ಹಬ್ಬದಂತೆ ಆಚರಿಸಿದ ಕೆಜಿಎಫ್-2 ಸಿನಿಮಾದ ಪಾರ್ಟ್-2 ಭರ್ಜರಿಯಾಗಿ ಸಿದ್ಧವಾಗುತ್ತಿದೆ. ಪಾರ್ಟ್-2 ಚಿತ್ರೀಕರಣ ಬರದಿಂದ ನಡೆಯುತ್ತಿದೆ. ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದೆಯಂತೆ. ಈಗಾಗಲೆ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದು ಚಿತ್ರದ ಬಗ್ಗೆ ದತ್ ಕೂಡ ಫುಲ್ ಎಕ್ಸಾಯಿಟ್ ಆಗಿದ್ದಾರೆ. ಚಿತ್ರ ಮುಂದಿನ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

More from Filmibeat

English summary
which is a favorite scene, proud moment in KGF cinema Kannada actor Yash asked to fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X