ಬರೋಬ್ಬರಿ 100 ಮಿಲಿಯನ್ ಹಿಟ್ಸ್ ಪಡೆದ 'ಕೆಜಿಎಫ್' ಹಾಡು

'ಕೆಜಿಎಫ್' ಕನ್ನಡ ಸಿನಿಪ್ರಿಯರ ಪಾಲಿಗೆ ಎಂದಿಗೂ ಮರೆಯಲಾಗದ ಸಿನಿಮಾವಾಗಿ ಬಿಟ್ಟಿದೆ. ಈ ಸಿನಿಮಾ ಈಗಾಗಲೇ ತನ್ನ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ಬರೆದುಕೊಂಡಿದೆ.

ಇದೀಗ 'ಕೆಜಿಎಫ್' ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. ಈ ಸಿನಿಮಾದ ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದೆ. 'ಕೆಜಿಎಫ್' ಹಿಂದಿ ಸಿನಿಮಾದ 'ಗಲಿ ಗಲಿ..' ಹಾಡು ಈ ಮಟ್ಟಿಗಿನ ಜನಪ್ರಿಯತೆ ಪಡೆದುಕೊಂಡಿದೆ.

ಐದು ಭಾಷೆಗಳಲ್ಲಿ 'ಕೆಜಿಎಫ್' ಸಿನಿಮಾ ಬಿಡುಗಡೆಯಾಗಿತ್ತು. ಈ ಪೈಕಿ ಹಿಂದಿ ಭಾಷೆಯಲ್ಲಿ ಮಾತ್ರ ಒಂದು ಹಾಡನ್ನು ಹೊಸದಾಗಿ ಮಾಡಲಾಗಿತ್ತು. ಕನ್ನಡದಲ್ಲಿ 'ಜೋಕೆ ನಾನು ಬಳ್ಳಿಯ ಮಿಂಚು..' ಹಾಡನ್ನು ಅಲ್ಲಿ 'ಗಲಿ ಗಲಿ..' ಹಾಡಾಗಿ ಬಲಾವಣೆ ಮಾಡಲಾಗಿತ್ತು.

kgf movie gali gali song got 100 million views on youtube

'ಗಲಿ ಗಲಿ..' ಹಾಡಿನಲ್ಲಿ ಯಶ್ ಜೊತೆಗೆ ಮೌನಿರಾಯ್ ಸೊಂಟ ಬಳುಕಿಸಿದ್ದಾರೆ. ಯಶ್ ಗತ್ತು ಮೌನಿ ಗ್ಲಾಮರ್ ಹಾಡಿಗೆ ಪ್ಲಾಸ್ ಆಗಿದೆ.

ಕೇವಲ ಎರಡೇ ದಿನದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದು, ಮತ್ತೊಂದು ವಿಶೇಷವಾಗಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಹಾಡಿನ್ನು ಹೊಸದಾಗಿ ಮಾಡುವ ನಿರ್ಧಾರವನ್ನು ಚಿತ್ರತಂಡ ಮಾಡಿಕೊಂಡಿತ್ತು.

English summary
Actor Yash's 'KGF' movie 'Gali Gali..' song got 100 million views on youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X