For Quick Alerts
  ALLOW NOTIFICATIONS  
  For Daily Alerts

  ಯಶ್ ಮೇನಿಯಾ: ರಾಕಿ ಭಾಯ್ ಗೆ ಅಭಿಮಾನಿಯಾದ ಮೊರೊಕ್ಕೊ ಪ್ರಜೆ.!

  |
  KGF Movie : ಮೊರೊಕ್ಕೊದಲ್ಲಿ ಜೋರಾಯ್ತು ಯಶ್ ಫೀವರ್ | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾ ಬರೀ ಕರ್ನಾಟಕದಲ್ಲಿ ಮಾತ್ರವಲ್ಲ... ಇಡೀ ದೇಶದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಪಕ್ಕದ ಪಾಕಿಸ್ತಾನದಲ್ಲೂ 'ಕೆ.ಜಿ.ಎಫ್' ಸಿನಿಮಾ ಶಿಳ್ಳೆ-ಚಪ್ಪಾಳೆ ಗಳಿಸಿತ್ತು. ಇನ್ನೂ ವಿದೇಶಗಳಲ್ಲೂ 'ಕೆ.ಜಿ.ಎಫ್' ದರ್ಬಾರ್ ಜೋರಾಗಿದೆ.

  ಯು.ಎಸ್.ಎ ನಲ್ಲಿ 'ಕೆ.ಜಿ.ಎಫ್' ಸಿನಿಮಾ ಒಂದು ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ ಅಂದ್ರೆ ನೀವೇ ಊಹಿಸಿಕೊಳ್ಳಿ 'ಯಶ್ ಮೇನಿಯಾ' ಹೇಗಿದೆ ಅಂತ.!

  25 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ 'ಕೆ.ಜಿ.ಎಫ್' ಸಿನಿಮಾ ವಿಶ್ವದಾದ್ಯಂತ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ 'ಕೆ.ಜಿ.ಎಫ್' ಇನ್ನೂ ಕಮಾಲ್ ಮಾಡುತ್ತಲೇ ಇದೆ. ಚಿತ್ರದಲ್ಲಿ ಯಶ್ ಅಭಿನಯ, ಮ್ಯಾನರಿಸಂ ನೋಡಿ ಕ್ಲೀನ್ ಬೌಲ್ಡ್ ಆದವರು ಲೆಕ್ಕವಿಲ್ಲದಷ್ಟು ಮಂದಿ. ಅದರಲ್ಲಿ ದೂರದ ಮೊರೊಕ್ಕೊ ಪ್ರಜೆ ಕೂಡ ಒಬ್ಬರು.

  ಕರ್ನಾಟಕದಲ್ಲಿ 'ಬಾಹುಬಲಿ' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್'.!

  ಉತ್ತರ ಆಫ್ರಿಕಾದ ಮೊರೊಕ್ಕೊದಲ್ಲೂ 'ಕೆ.ಜಿ.ಎಫ್' ಸಿನಿಮಾ ಮ್ಯಾಜಿಕ್ ಮಾಡಿದೆ. 'ಕೆ.ಜಿ.ಎಫ್' ಚಿತ್ರವನ್ನು ನೋಡಿ ಮೊರೊಕ್ಕೊ ಪ್ರಜೆಯೊಬ್ಬರು ಮೆಚ್ಚಿಕೊಂಡಿದ್ದಾರೆ. ಪರಿಣಾಮ ತಮ್ಮ ರೂಮ್ ನಲ್ಲಿ 'ಕೆ.ಜಿ.ಎಫ್' ಪೋಸ್ಟರ್ ಅಂಟಿಸಿಕೊಂಡು ''ಯಶ್ ಅಭಿಮಾನಿ'' ಎಂದು ಮೊರೊಕ್ಕೊ ಪ್ರಜೆ ಬರೆದುಕೊಂಡಿದ್ದಾರೆ.

  ರಾಕಿ ಭಾಯ್ ಮೇಲೆ ಬಿತ್ತು ಪರಭಾಷಿಗರ ಕಣ್ಣು, ಇನ್ಮುಂದೆ ಕಾಲ್ ಶೀಟ್ ಕಷ್ಟ.!

  ''ನಾನು ಭಾರತೀಯ ಚಿತ್ರಗಳ ಅಭಿಮಾನಿ. ಮೊರೊಕ್ಕೊದಲ್ಲಿ ಯಶ್ ಮೇನಿಯಾ ಜೋರಾಗಿದೆ. ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರ ಸೂಪರ್ ಆಗಿದೆ. ನನಗೆ ಸಿನಿಮಾ ತುಂಬಾ ಇಷ್ಟ ಆಯಿತು. ನಾನು ಮೊರೊಕ್ಕೊದ ಯಶ್ ಅಭಿಮಾನಿ. ಸಲಾಂ ರಾಕಿ ಭಾಯ್'' ಎಂದು ಜಿಲ್ ಗ್ಯಾಕ್ಸ್ (ಮೊರೊಕ್ಕೊ ಪ್ರಜೆ) ಹೇಳಿದ್ದಾರೆ.

  ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಕಮ್ಮಿ ಅಂತ ಮೊನ್ನೆ ಮೊನ್ನೆಯವರೆಗೂ ಮೂಗು ಮುರಿದವರೇ ಹೆಚ್ಚು. ಅಂಥವರಿಗೆ ಕನ್ನಡ ಚಿತ್ರಗಳನ್ನು ಮಾರ್ಕೆಟ್ ಮಾಡುವ ರೀತಿ ಬಗ್ಗೆ ಯಶ್ ಮತ್ತು 'ಕೆ.ಜಿ.ಎಫ್' ಚಿತ್ರತಂಡ ತೋರಿಸಿಕೊಟ್ಟಿದೆ. ಒಳ್ಳೆ ಸಿನಿಮಾ ಮಾಡಿದರೆ ಪ್ರೇಕ್ಷಕ ಮಹಾಪ್ರಭು ಎಂದೂ ಕೈಬಿಡಲ್ಲ ಅನ್ನೋದಕ್ಕೆ 'ಕೆ.ಜಿ.ಎಫ್'ಗೆ ಸಿಕ್ಕಿರುವ ಸಕ್ಸಸ್ ಸಾಕ್ಷಿ.

  KGF Collection: 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.!

  ಅಂದ್ಹಾಗೆ, ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಚಿತ್ರ 'ಕೆ.ಜಿ.ಎಫ್'. ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದರೆ, ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ.

  English summary
  Rocking Star Yash starrer KGF movie is amazing. I liked the movie so much. I'm a fan of Yash from Morocco says Jilgax from Morocco.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X