»   » ಯಶ್ 'KGF' ಬರಲಿದೆ, ಕಟೌಟ್ ಹಾಕುವುದಕ್ಕೆ ರೆಡಿ ಆಗಿ.!

ಯಶ್ 'KGF' ಬರಲಿದೆ, ಕಟೌಟ್ ಹಾಕುವುದಕ್ಕೆ ರೆಡಿ ಆಗಿ.!

Posted By:
Subscribe to Filmibeat Kannada

ಬರೀ ಯಶ್ ಅಭಿಮಾನಿಗಳು ಮಾತ್ರವಲ್ಲ ಇಡೀ ಕನ್ನಡ ಸಿನಿಮಾ ಪ್ರೇಮಿಗಳು ಬಹಳ ದಿನದಿಂದ ಕಾಯುತ್ತಿರುವ ಸಿನಿಮಾ 'ಕೆ.ಜಿ.ಎಫ್'. ಈ ಸಿನಿಮಾ ಬಗ್ಗೆ ಎಲ್ಲರಿಗೂ ಅದೇನೋ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಏನೋ ಇದೆ ಅನ್ನುವ ನಂಬಿಕೆ ಮೇಲೆಯೇ ಚಿತ್ರಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ಯಶ್ ಹುಟ್ಟುಹಬ್ಬಕ್ಕೆ 'ಕೆ.ಜಿ.ಎಫ್' ಟೀಂ ಕಡೆಯಿಂದ ಉಡುಗೊರೆ

ಜನರ ಈ ಮಟ್ಟಿನ ನಿರೀಕ್ಷೆಗೆ ಕಾರಣ ಆಗಿರುವುದು ಒಂದು ಕಡೆ ಯಶ್, ಇನ್ನೊಂದು ಕಡೆ ನಿರ್ದೇಶಕ ಪ್ರಶಾಂತ್ ನೀಲ್. ಈ ರೀತಿ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್ ಗಳಿಗೆ ಅಂತೂ ಖುಷಿಯ ಸುದ್ದಿಯೊಂದು ಬಂದಿದೆ. 'KGF' ಸಿನಿಮಾದ ಬಿಡುಗಡೆಯ ದಿನಾಂಕ ಈಗ ಹೊರಬಂದಿದೆ.

'KGF' movie is Likely to release on 25 march 2018

'ಕೆ.ಜಿ.ಎಫ್' ಸಿನಿಮಾವನ್ನು ಮಾರ್ಚ್ 21ಕ್ಕೆ ಬಿಡುಗಡೆ ಮಾಡುವ ಪ್ಲಾನ್ ನಲ್ಲಿ ಚಿತ್ರತಂಡ ಇದೆಯಂತೆ. ಸದ್ಯ ಚಿತ್ರದ ಕೊನೆ ಹಂತದ ಶೂಟಿಂಗ್ ನಡೆಯುತ್ತಿದೆ. ಅದರ ಬಳಿಕ ಹಾಡುಗಳ ಶೂಟಿಂಗ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ.

ಮೊದಲು ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ನಲ್ಲಿ ಈ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಶೂಟಿಂಗ್ ಗಾಗಿ ಹೆಚ್ಚು ಸಮಯ ಆಗಿರುವ ಕಾರಣ ಸಿನಿಮಾ ಮಾರ್ಚ್ ನಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ತೆರೆಗೆ ಬರುತ್ತಿದೆ.

English summary
Yash starrer 'KGF' movie is likely to release on 25th March 2018. The movie is directed by Prashanth Neel. 'ಕೆ.ಜಿ.ಎಫ್' ಚಿತ್ರವನ್ನು ಮಾರ್ಚ್ 21ಕ್ಕೆ ಬಿಡುಗಡೆ ಮಾಡುವ ಪ್ಲಾನ್ ನಲ್ಲಿ ಚಿತ್ರತಂಡ ಇದೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada