ಜೂನಿಯರ್ ರಾಕಿಗೆ ಸಿಕ್ತು ಮತ್ತೊಂದು ದೊಡ್ಡ ಅವಕಾಶ
Recommended Video

ನಟ ಯಶ್ 'ಕೆಜಿಎಫ್' ಸಿನಿಮಾದಿಂದ ದೇಶ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೊಂದು ಕಡೆ ಸಿನಿಮಾದ ಕೆಲ ಪಾತ್ರಗಳನ್ನು ಜನ ಗುರುತಿಸುತ್ತಿದ್ದಾರೆ. ಇಂತಹ ಪಾತ್ರಗಳಲ್ಲಿ ಯಶ್ ಬಾಲ್ಯದ ಪಾತ್ರ ಕೂಡ ಒಂದು.
ರಾಕಿಯ ಸಣ್ಣ ಹುಡುಗನ ಪಾತ್ರ ಸಿನಿಮಾ ನೋಡಿದ ಬಹುತೇಕರ ಫೇವರೇಟ್. ಆ ಹುಡುಗನ ಅಭಿನಯ, ಗತ್ತು ಸಿನಿಮಾ ವೀಕ್ಷಿಸುವವರ ಗಮನ ಸೆಳೆದಿತ್ತು. ಅಂದಹಾಗೆ, ಆ ಪಾತ್ರ ಮಾಡಿದ್ದ ಹುಡುಗ ಅನ್ಮೋಲ್.
'ಕೆಜಿಎಫ್' ಸಿನಿಮಾದ ನಂತರ ಅನ್ಮೋಲ್ ಗೆ ದೊಡ್ಡ ಜನಪ್ರಿಯತೆ ಸಿಕ್ಕಿದ್ದು, ಈಗ ಇದರಿಂದ ಸಿನಿಮಾ ಅವಕಾಶ ಕೂಡ ಲಭಿಸಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ 'ಮದಗಜ' ಚಿತ್ರದಲ್ಲಿ ಅನ್ಮೋಲ್ ನಟಿಸುತ್ತಿದ್ದಾರೆ. ಈ ವಿಷಯವನ್ನು ನಿರ್ದೇಶಕ ಮಹೇಶ್ ಗೌಡ ಹಂಚಿಕೊಂಡಿದ್ದಾರೆ

'ಮದಗಜ' ಸಿನಿಮಾದಲ್ಲಿಯೂ ಶ್ರೀಮುರಳಿ ಅವರ ಬಾಲ್ಯದ ಪಾತ್ರದಲ್ಲಿ ಅನ್ಮೋಲ್ ನಟಿಸುತ್ತಿದ್ದಾರೆ. 'ಕೆಜಿಎಫ್' ಚಿತ್ರದಲ್ಲಿ ಈ ಹುಡುಗನ ನಟನೆ ಇಷ್ಟ ಪಟ್ಟಿದ್ದ ಮಹೇಶ್ ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ.
'ಮದಗಜ' ಸಿನಿಮಾವನ್ನು ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚಿಗೆ ಶ್ರೀ ಮುರಳಿ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು.


Click it and Unblock the Notifications











