»   » ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ

ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ

Posted By:
Subscribe to Filmibeat Kannada
ಕೆ ಜಿ ಎಫ್ ಸಿನಿಮಾ ತಂಡದಿಂದ ಬಂತು ಹೊಸ ಸುದ್ದಿ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ ಸಿನಿಮಾ ಶುರುವಾಗಿ 1 ವರ್ಷ ಆಯ್ತು. ಸಿನಿಮಾಗಾಗಿ ಕೆ ಜಿ ಎಫ್ ನಲ್ಲಿ ಸಿನಿಮಾತಂಡ ಅದ್ಧೂರಿ ಆಗಿರುವ ಸೆಟ್ ಹಾಕಿ ಶೂಟಿಂಗ್ ಕೂಡ ಮಾಡಿತು. ಚಿತ್ರೀಕರಣ ಇನ್ನೇನು ಮುಗಿಯಲಿದೆ ಅನ್ನುವಷ್ಟರಲ್ಲಿ ಕಾರಣಾಂತರಗಳಿಂದ ಚಿತ್ರೀಕರಣಕ್ಕೆ ಬ್ರೇಕ್ ಕೊಡಲಾಗಿತ್ತು.

ಅಭಿಮಾನಿಗಳು ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತೀರಾ ಎನ್ನುವ ಪ್ರಶ್ನೆಗಳಿಗೆ ಚಿತ್ರತಂಡ ಸ್ವಲ್ಪ ದಿನ ಕಾಯಿರಿ ಎನ್ನುವುದನ್ನ ಮಾತ್ರ ಹೇಳುತ್ತಿತ್ತು. ಆದರೆ ಅದೇ ಸಿನಿಮಾ ತಂಡ ಹೊಸ ಸುದ್ದಿಯನ್ನ ಕೊಟ್ಟಿದೆ. ಕೆ ಜಿ ಎಫ್ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ ಎನ್ನುವುದನ್ನ ನಿರ್ಮಾಪಕ ಕಾರ್ತಿಕ್ ಗೌಡ ಅಧಿಕೃತವಾಗಿ ತಿಳಿಸಿದ್ದಾರೆ.

'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ನಟಿಸೋರು ಈ ಇಬ್ಬರಲ್ಲಿ ಯಾರು.?

ಕೊನೆಯ ಹಂತದ ಚಿತ್ರೀಕರಣದಲ್ಲಿ ಸಾಹಸ ದೃಶ್ಯಗಳನ್ನ ಚಿತ್ರೀಕರಿಸುತ್ತಿದ್ದು ಅದಕ್ಕಾಗಿ ಸಾಹಸ ನಿರ್ದೇಶಕರಾದ 'ಅಂಬು-ಅರಿವು' ಬೆಂಗಳೂರಿಗೆ ಬಂದಿದ್ದಾರೆ. ರಾಕಿಂಗ್ ಸ್ಟಾರ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವನ್ನೂ ನೀಡಿದ್ದಾರೆ.

 KGF movie Last Schedule shooting start from Today(March- 16)

ಕೆ ಜಿ ಎಫ್ ಸಿನಿಮಾವನ್ನ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಭುವನ್ ಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ರೆ ರವಿ ಬಸ್ರೂರು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.

 KGF movie Last Schedule shooting start from Today(March- 16)

ಅಭಿಮಾನಿಗಳ ಮಧ್ಯೆ ಮಾತಿರುವಂತೆ ಕೆ ಜಿ ಎಫ್ ಸಿನಿಮಾ ಏರ್ಪಿಲ್ ನಲ್ಲೇ ಬಿಡುಗಡೆ ಆಗುತ್ತಾ ಅಥವಾ ಫ್ರೀ ಪ್ರೊಡಕ್ಷನ್ ಕೆಲಸ ಅಂತಾ ಹೆಚ್ಚಿನ ದಿನಗಳು ಬೇಕಾಗುತ್ತಾ ಅನ್ನುವುದನ್ನ ಕಾದು ನೋಡಬೇಕಾಗಿದೆ. ಒಟ್ಟಾರೆ ರಾಕಿಂಗ್ ಸ್ಟಾರ್ ಅನ್ನು ತೆರೆ ಮೇಲೆ ನೋಡುವ ದಿನ ತುಂಬಾ ದೂರ ಉಳಿದಿಲ್ಲ ಎನ್ನುವುದು ಮಾತ್ರ ಕನ್ಫರ್ಮ್ ಆಗಿದೆ.

English summary
Kannada KGF movie Last Schedule shooting start from Today(March- 16) 'Ambu-Arivu' director has come to Bangalore for directing action sequences. KGF rocking Yash starring movie, Prashant Neel is directing the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X