For Quick Alerts
  ALLOW NOTIFICATIONS  
  For Daily Alerts

  ಬೆಳಿಗ್ಗೆ 6 ಗಂಟೆಗೂ ಮೊದಲೇ ಈ ಚಿತ್ರಮಂದಿರಗಳಲ್ಲಿ 'ಕೆಜಿಎಫ್' ನೋಡಬಹುದು.!

  |
  KGF Kannada Movie : ಬೆಂಗಳೂರಿನ ಯಾವ ಥಿಯೇಟರ್ ಗಳಲ್ಲಿ ಕೆಜಿಎಫ್ 6 ಗಂಟೆಗೂ ಮುಂಚೆ ಶುರುವಾಗುತ್ತೆ

  ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ, ಕ್ರೇಜ್, ಸೌಂಡ್, ಅಬ್ಬರ ಸಖತ್ ಜೋರಾಗಿದೆ. ಐದು ಭಾಷೆಯಲ್ಲಿ ಬರ್ತಿರುವ ಈ ಸಿನಿಮಾ, ದೇಶಾದ್ಯಂತ 2 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ.

  ರಾಜ್ಯದಲ್ಲೇ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕೆಜಿಎಫ್ ಎಂಟ್ರಿಯಾಗುತ್ತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಹಾಟ್ ಕೇಕ್ ರೀತಿಯಲ್ಲಿ ಟಿಕೆಟ್ ಸೇಲ್ ಆಗ್ತಿದೆ.

  5 ನಿಮಿಷದಲ್ಲಿ 'ಕೆಜಿಎಫ್' ಚಿತ್ರದ 1100 ಟಿಕೆಟ್ ಸೇಲ್ ಮಾಡಿದ ಚಿತ್ರಮಂದಿರ.!

  ಇನ್ನು ಕೆಜಿಎಫ್ ಚಿತ್ರದ ಶೋ ಬಗ್ಗೆ ಹೇಳುವುದಾರೇ ರಾಜ್ಯಾದಂತ್ಯ ಬೆಳಿಗ್ಗೆ ಆರು ಗಂಟೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಫಸ್ಟ್ ಶೋ ಆರಂಭವಾಗ್ತಿದೆ. ಬಟ್, ಅದಕ್ಕೂ ಮುಂಚೆ ಹಲವು ಚಿತ್ರಮಂದಿರಗಳಲ್ಲಿ ಕೆಜಿಎಫ್ ದರ್ಶನ ಸಿಗಲಿದೆ. ಯಾವ ಯಾವ ಚಿತ್ರಮಂದಿರ? ಮುಂದೆ ಓದಿ....

  ಚಂದ್ರೋದಯದಲ್ಲಿ ಫಸ್ಟ್ ಶೋ

  ಚಂದ್ರೋದಯದಲ್ಲಿ ಫಸ್ಟ್ ಶೋ

  ವಿದ್ಯಾಪೀಠ ಸರ್ಕಲ್ ನಲ್ಲಿರುವ ಚಂದ್ರೋದಯ ಚಿತ್ರಮಂದಿರದಲ್ಲಿ ಬೆಳಿಗ್ಗೆ 4 ಗಂಟೆಗೆ 'ಕೆಜಿಎಫ್' ಚಿತ್ರದ ಮೊದಲ ಶೋ ಪ್ರದರ್ಶನವಾಗಲಿದೆ. ಮೊದಲ ದಿನ ಒಟ್ಟು ಏಳು ಶೋ ನಡೆಯಲಿದೆ. ಟಿಕೆಟ್ ಬೆಲೆ 200 ಮತ್ತು 150ರೂ ಇದೆ. ನಾಲ್ಕು ಹಾಗೂ ಏಳು ಗಂಟೆ ಶೊ ಸೋಲ್ಡ್ ಔಟ್ ಆಗಿದೆ.

  'ಕೆಜಿಎಫ್' ನಟಿ ತಮನ್ನಾಗೆ ಹೀಗೆಂದು ಕರೆಯಬಾರದಂತೆ.!

  ರೆಕ್ಸ್ ಚಿತ್ರಮಂದಿರದಲ್ಲಿ ಎಷ್ಟು ಗಂಟೆಗೆ?

  ರೆಕ್ಸ್ ಚಿತ್ರಮಂದಿರದಲ್ಲಿ ಎಷ್ಟು ಗಂಟೆಗೆ?

  ಇನ್ನು ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಚಿತ್ರಮಂದಿರದಲ್ಲೂ ಕೆಜಿಎಫ್ ಬಿಡುಗಡೆಯಾಗುತ್ತಿದ್ದು, ಒಟ್ಟು ನಾಲ್ಕು ಶೋ ಪ್ರದರ್ಶನವಾಗ್ತಿದೆ. ಮೊದಲ ಶೋ ಬೆಳಿಗ್ಗೆ 5.25ಕ್ಕೆ ಆರಂಭವಾಗಲಿದೆ. ಇಲ್ಲಿ ಟಿಕೆಟ್ ಇನ್ನು ಮಾರಾಟಕ್ಕಿದೆ. ಟಿಕೆಟ್ ಬೆಲೆ 400 ಮತ್ತು 300 ರೂಪಾಯಿ.

  'ಕೆಜಿಎಫ್' ಚಿತ್ರದಲ್ಲಿ ಬಿ ಸುರೇಶ್ ಅತ್ಯಂತ ಕಾಸ್ಟ್ಲಿ ನಟ.!

  ತುಳಸಿ ಚಿತ್ರಮಂದಿರ?

  ತುಳಸಿ ಚಿತ್ರಮಂದಿರ?

  ಮಾರತ್ ಹಳ್ಳಿಯಲ್ಲಿರುವ ತುಳಸಿ ಚಿತ್ರಮಂದಿರಲ್ಲೂ ಕೆಜಿಎಫ್ ಎಂಟ್ರಿಯಾಗುತ್ತಿದ್ದು, ಒಟ್ಟು ಏಳು ಶೋ ಪ್ರದರ್ಶನವಾಗ್ತಿದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಮೊದಲ ಪ್ರದರ್ಶನವಾಗ್ತಿದೆ. ಇಲ್ಲಿ ಟಿಕೆಟ್ ಬೆಲೆ 250, 200, 150 ರೂಪಾಯಿ. 4 ಗಂಟೆ ಶೋ ಸೋಲ್ಡ್ ಔಟ್ ಆಗಿದೆ.

  ಧನುಶ್ ಚಿತ್ರದಲ್ಲಿ ಕೆಜಿಎಫ್ ಡೈಲಾಗ್: ಯಶ್ ಏನಂದ್ರು.?

  ಊರ್ವಶಿ ಚಿತ್ರಮಂದಿರ?

  ಊರ್ವಶಿ ಚಿತ್ರಮಂದಿರ?

  ಬೆಂಗಳೂರಿನ ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದ್ದು, ಬೆಳಿಗ್ಗೆ 4 ಗಂಟೆಗೆ ಫಸ್ಟ್ ಶೋ ಪ್ರದರ್ಶನವಾಗ್ತಿದೆ. ಮೊದಲ ದಿನ ಒಟ್ಟು ಆರು ಶೋಗಳಿದ್ದು, 350, 256, 200 ರೂಪಾಯಿ ಟಿಕೆಟ್ ಬೆಲೆ ಹೊಂದಿದೆ. 4 ಮತ್ತು 7 ಗಂಟೆ ಶೋ ಸೋಲ್ಡ್ ಔಟ್ ಆಗಿದೆ.

  'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

  ವೈನಿಧಿ ಸಿಂಗಾಪೂರ

  ವೈನಿಧಿ ಸಿಂಗಾಪೂರ

  ಸಿಂಗಾಪೂರದಲ್ಲಿರುವ ವೈನಿಧಿ ಚಿತ್ರಮಂದಿರದಲ್ಲೂ ಕೆಜಿಎಫ್ ಸಿನಿಮಾ ಮುಂಜಾನೆಯೇ ಪ್ರದರ್ಶನವಾಗಲಿದೆ. ಒಟ್ಟು ಆರು ಶೋಗಳು ಈ ಚಿತ್ರಮಂದಿರದಲ್ಲಿದ್ದು, 200, 150 ಟಿಕೆಟ್ ಬೆಲೆ ಹೊಂದಿದೆ.

  ಕನ್ನಡ ನಟರಿಗೆ ಈ 'ಸ್ಟಾರ್'ಗಳು ಹೇಗೆ ಬರುತ್ತೆ: ಹಿಂದಿ ಮೀಡಿಯಾ ಪ್ರಶ್ನೆ.?

  6 ಗಂಟೆ ಶೋ ಎಲ್ಲೆಲ್ಲಿದೆ?

  6 ಗಂಟೆ ಶೋ ಎಲ್ಲೆಲ್ಲಿದೆ?

  ಹೊಸೂರು ಮುಖ್ಯರಸ್ತೆಯಲ್ಲಿರುವ ನರಸಿಂಹ ಚಿತ್ರಮಂದಿರ (7). ಪೀಣ್ಯದ ಭಾರತಿ ಚಿತ್ರಮಂದಿರ (6.30), ಬನಶಂಕರಿಯ ಈಶ್ವರಿ (6.30), ಕಾಮಾಕ್ಯ (6.15), ಬನಶಂಕರಿಯ ಮಹದೇಶ್ವರ (6.30), ರಾಧಕೃಷ್ಣ ಆರ್.ಟಿ ನಗರ್ (6.30), ಶಾರದ (6), ಶ್ರೀವೆಂಕಟೇಶ್ವರ ಕೆಂಗೇರಿ (7), ಶ್ರೀವಿನಾಯಕ ವರ್ತೂರ್ (6.05), ತಿರುಮಲ ಅಗರ (6) ಚಿತ್ರಮಂದಿರಗಳಲ್ಲಿ ಬೆಳಿಗ್ಗಿನ ಶೋ ಆರಂಭವಾಗಲಿದೆ.

  English summary
  Rocking star yash starrer KGF movie releasing on december 21st. here is the early morning shows details in bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X