'ಕೆಜಿಎಫ್' ರಿಲೀಸ್ ದಿನಾಂಕ ಮುಂದಕ್ಕೆ ಹೋಗಲು 'ಬಾಲಿವುಡ್' ಕಾರಣ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ನವೆಂಬರ್ 16 ರಂದು ಬಿಡುಗಡೆಯಾಗಬೇಕಿತ್ತು. ಇದನ್ನ ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿತ್ತು. ಆದ್ರೆ, ಈ ಮಧ್ಯೆ ಅದೇನಾಯ್ತೋ ಗೊತ್ತಿಲ್ಲ. ದಿಢೀರ್ ಅಂತ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಸುದ್ದಿಗೋಷ್ಠಿ ನಡೆಸಿ, ರಿಲೀಸ್ ದಿನಾಂಕ ಮುಂದಕ್ಕೆ ಹೋಗಲು ಕಾರಣ ಏನೆಂದು ಬಹಿರಂಗಪಡಿಸಿದ್ರು.
ರಾಕಿಂಗ್ ಸ್ಟಾರ್ ಸಿನಿಮಾಗಳು ಒಮ್ಮೆ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ ಮೇಲೆ ಮತ್ತೆ ಮುಂದಕ್ಕೆ ಹೋಗಿರುವ ಉದಾಹರಣೆಗಳಿಲ್ಲ. ಆದ್ರೆ, ಇದೇ ಮೊದಲ ಸಲ ಈ ರೀತಿಯಾಗಿದೆ. ಇದಕ್ಕೆ ಬಾಲಿವುಡ್ ಕಾರಣ ಎಂದು ಯಶ್ ತಿಳಿಸಿದ್ದಾರೆ. ಅಷ್ಟಕ್ಕೂ, ಕೆಜಿಎಫ್ ಚಿತ್ರಕ್ಕೂ ಬಾಲಿವುಡ್ ಗೂ ಏನ್ ಸಂಬಂಧ.? ಮುಂದೆ ಓದಿ....

ಡಿಸೆಂಬರ್ 21ಕ್ಕೆ ಕೆಜಿಎಫ್
ನವೆಂಬರ್ 16ರ ಬದಲಾಗಿ ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ಈ ಮೊದಲೇ ಹೇಳಿದಂತೆ ಟ್ರೈಲರ್ ಅಕ್ಟೋಬರ್ 14 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.

ರಿಲೀಸ್ ಮುಂದಕ್ಕೆ ಹೋಗಲು ಕಾರಣ ಬಾಲಿವುಡ್
ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಕೆಜಿಎಫ್ ಚಿತ್ರ ತೆರೆಗೆ ಬರಲಿದೆ. ಹಿಂದಿಯಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಬಾಲಿವುಡ್ ನಲ್ಲೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದ್ದು, ಇದಕ್ಕಾಗಿ ವಿತರಕರು ಸಮಯವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಮುಂದೂಡಲಾಗುತ್ತಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ಯಶ್ ಜೀವನದಲ್ಲಿ ಇದೇ ಮೊದಲು
ಯಶ್ ಅಭಿನಯದ ಈ ಹಿಂದಿನ ಯಾವ ಚಿತ್ರಗಳು ಒಮ್ಮೆ ರಿಲೀಸ್ ಡೇಟ್ ಘೋಷಣೆ ಮಾಡಿ, ಮತ್ತೆ ಬದಲಾಯಿಸಿದ ಉದಾಹರಣೆಗಳಿಲ್ಲ. ಆದ್ರೆ, ಕೆಜಿಎಫ್ ಚಿತ್ರದ ತುಂಬಾ ದೊಡ್ಡದು, ದೊಡ್ಡ ಬಜೆಟ್ ನಲ್ಲಿ ಮೂಡಿಬರ್ತಿರುವ ಕಾರಣ ಎಲ್ಲವನ್ನೂ ನಿರ್ಧರಿಸಿ ಡಿಸೆಂಬರ್ ಗೆ ಹೋಗ್ತಿದ್ದೀವಿ ಎಂದು ಸ್ವತಃ ಯಶ್ ಖಚಿತಪಡಿಸಿದ್ದಾರೆ.

ಊಹಿಸಲಾಗದ ರೆಸ್ಪಾನ್ಸ್ ಸಿಕ್ಕಿದೆ
ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿನಿಮಾಗೆ ಸಿಕ್ಕಿದೆ. ನಮ್ಮ ಚಿತ್ರಕ್ಕೆ ಅತಿ ಹೆಚ್ಚು ಸ್ಕ್ರೀನ್ ಗಳು ಸಿಗಲಿದೆ ಎಂಬ ಸುಳಿವು ಸಿಕ್ಕಿದೆ. ಇದಕ್ಕಾಗಿ ತಯಾರಿ ನಡೆಯುತ್ತಿದೆ. ನಮಗೆ ತುಂಬಾ ಖುಷಿ ಆಗ್ತಿದೆ. ಖುಷಿಯಿಂದಲೇ ಮುಂದಕ್ಕೆ ಹೋಗ್ತಿದ್ದೀವಿ. ಸೌತ್ ಇಂಡಿಯಾಗೆ ನಾವು ಅಂದುಕೊಂಡಿದ್ದ ಸಮಯ ಸಾಕಾಗಿತ್ತು. ಆದ್ರೆ, ಬಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಸಿಕ್ಕಾಗ ಇಂತಹ ನಿರ್ಧಾರ ತೆಗೆದುಕೊಂಡೆವು.


Click it and Unblock the Notifications











