ಕೆಜಿಎಫ್ ರೆಸ್ಪಾನ್ಸ್ ನೋಡಿ ಚಿತ್ರಮಂದಿರ ಹೆಚ್ಚಿಸಿದ ತಮಿಳುನಾಡು.!
Recommended Video

ಯಶ್ ಅಭಿನಯದ 'ಕೆಜಿಎಫ್' ಚಿತ್ರಕ್ಕೆ ಎಲ್ಲ ಕಡೆಯೂ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಮತ್ತೊಂದೆಡೆ ಬೇರೆ ಭಾಷೆಯ ಚಿತ್ರಗಳು ಹಿನ್ನಡೆ ಅನುಭವಿಸಿದೆ. ಇದರ ಪರಿಣಾಮ ಕೆಜಿಎಫ್ ಗೆ ಮತ್ತಷ್ಟು ಚಿತ್ರಮಂದಿರಗಳು ಸಿಗುವ ನಿರೀಕ್ಷೆ ಇದೆ.
ಇದರ ಮೊದಲ ಹಂತ ಎಂಬಂತೆ ತಮಿಳಿನಲ್ಲಿ ಕೆಜಿಎಫ್ ಚಿತ್ರಕ್ಕೆ ಥಿಯೇಟರ್ ಗಳನ್ನ ಹೆಚ್ಚಿಸಲಾಗಿದೆ. ಇದನ್ನ ಸ್ವತಃ ತಮಿಳು ಭಾಷೆಯ ವಿತರಕ 'ವಿಶಾಲ್ ಫಿಲಂ ಫ್ಯಾಕ್ಟರಿ' ಖಚಿತಪಡಿಸಿದೆ.

ಸದ್ಯ, ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ಎಷ್ಟು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ ಎಂಬುದರ ಬಗ್ಗೆ ವಿತರಕರು ನಿಖರವಾದ ಮಾಹಿತಿ ನೀಡಿಲ್ಲ. ಆದ್ರೆ, ಬಾಲಿವುಡ್ ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಅವರು ಹೇಳಿರುವ 100 ಸೆಂಟರ್ ನಲ್ಲಿ ತೆರೆಕಂಡಿತ್ತು.
ಈಗ ಮತ್ತಷ್ಟು ಸ್ಕ್ರೀನ್ ಹೆಚ್ಚಾಗಿದ್ದು, ಕೆಜಿಎಫ್ ಗೆ ಅತ್ಯುತ್ತಮ ಆರಂಭ ಸಿಕ್ಕಿದೆ. ಕೇವಲ ತಮಿಳಿನಲ್ಲಿ ಮಾತ್ರವಲ್ಲ, ತೆಲುಗು, ಹಿಂದಿಯಲ್ಲೂ ಚಿತ್ರಮಂದಿರಗಳು ಹೆಚ್ಚಾಗುವ ಸಾಧ್ಯತೆ ಇದೆ.
ತಮಿಳಿನಲ್ಲಿ 'ವಿಶಾಲ್ ಫಿಲಂ ಫ್ಯಾಕ್ಟರಿ' ಮೂಲಕ ನಟ ವಿಶಾಲ್ ವಿತರಣೆ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಯಶ್, ಶ್ರೀನಿಧಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.


Click it and Unblock the Notifications











