For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಚಿತ್ರದ ಎರಡನೇ ಟ್ರೈಲರ್ ಇಂದೇ ರಿಲೀಸ್

  |
  KGF Kannada Movie: ಕೆಜಿಎಫ್' ಚಿತ್ರದ ಎರಡನೇ ಟ್ರೈಲರ್ ಇಂದೇ ರಿಲೀಸ್ | FILMIBEAT KANNADA

  'ಕೆಜಿಎಫ್' ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಇಡೀ ಬಾಲಿವುಡ್ ಸಲಾಂ ರಾಕಿ ಭಾಯ್ ಎನ್ನುತ್ತಿದೆ. ಚೊಚ್ಚಲ ಹಾಡಿನ ಮೂಲಕ ಮತ್ತಷ್ಟು ಖದರ್ ತೋರಿಸುತ್ತಿರುವ ಕೆಜಿಎಫ್ ಈಗ ಇನ್ನೊಂದು ಟ್ರೈಲರ್ ಬಿಡುಗಡೆ ಮಾಡುತ್ತಿದೆ.

  ಈ ಸುದ್ದಿಯನ್ನ ಸ್ವತಃ ಕೆಜಿಎಫ್ ಹಿಂದಿ ಭಾಷೆಯ ವಿತರಕ ಫರಾನ್ ಅಖ್ತರ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ''ಅತಿದೊಡ್ಡ ಪ್ರದರ್ಶನಕ್ಕೆ ನೀವು ಸಾಕ್ಷಿಯಾಗಿ, ನಾಳೆ ಕೆಜಿಎಫ್ ಚಿತ್ರದ 2ನೇ ಟ್ರೈಲರ್‌ ರಿಲೀಸ್ ಆಗುತ್ತಿದೆ' ಎಂದು ನಿನ್ನೆ (ಡಿಸೆಂಬರ್ 4) ರಂದು ಟ್ವೀಟ್ ಮಾಡಿದ್ದರು.

  ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್

  ಅವರ ಮಾತಿನಂತೆ ಇಂದು ಕೆಜಿಎಫ್ ಎರಡನೇ ಟ್ರೈಲರ್ ಬರ್ತಿದೆ. ಆದ್ರೆ, ಇದು ಹಿಂದಿ ಭಾಷೆಯಲ್ಲಿ ಮಾತ್ರ ಬರುತ್ತಾ ಅಥವಾ ಐದು ಭಾಷೆಗಳಲ್ಲಿ ಬರುತ್ತಾ ಎಂಬ ಕುತೂಹಲ ಅಭಿಮಾನಿಗಳದ್ದು. ಸದ್ಯದ ಮಾಹಿತಿ ಪ್ರಕಾರ, ಹಿಂದಿಯಲ್ಲಿ ಮಾತ್ರ ಎರಡನೇ ಟ್ರೈಲರ್ ಬರಲಿದೆ ಎನ್ನಲಾಗುತ್ತಿದೆ.

  ವಿ ನಾಗೇಂದ್ರ ಪ್ರಸಾದ್ ಬರೆದಿರುವ 'ಸಲಾಮ್ ರಾಕಿ ಭಾಯ್' ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ವಿಜಯ್ ಪ್ರಕಾಶ್ ಸೇರಿದಂತೆ ಸಂತೋಷ್ ವೆಂಕಿ, ಸಚಿನ್ ಬಸ್ರೂರು, ಪುನೀತ್ ರುದ್ರಂಗ, ಮೋಹನ್, ಎಚ್ ಶ್ರೀನಿವಾಸ್ ಮೂರ್ತಿ, ವಿಜಯ್ ಅರಸ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.

  ಮತ್ತೆ 'ಜೀರೋ' ಚಿತ್ರವನ್ನ ಹಿಂದೆ ಹಾಕಿದೆ ರಾಕಿ ಭಾಯ್

  .

  ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾ ಇದೇ ಡಿಸೆಂಬರ್ 21 ರಂದು ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.

  English summary
  Kannada actor yash starrer kgf movie second trailer will release today (december 05). the movie directed by prashanth neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X