ಕೇರಳ ಅಭಿಮಾನಿಗಳ ಜೊತೆಗೆ 'ಕೆಜಿಎಫ್' ನೋಡ್ತಾರೆ ಯಶ್
Recommended Video

'ಕೆಜಿಎಫ್' ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾವಾಗಿದೆ. ಕೋಟಿ ಕೋಟಿ ಗಳಿಕೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಾಣ ಮಾಡಿದೆ. ಕನ್ನಡಿಗರು ಮಾತ್ರವಲ್ಲದೆ ಇಡೀ ದೇಶ ಈ ಸಿನಿಮಾವನ್ನು ನೋಡಿ ಖುಷಿ ಪಟ್ಟಿದೆ.
ಇದೀಗ ಕೇರಳ ಅಭಿಮಾನಿಗಳು ಯಶ್ ಜೊತೆಗೆ ಕೂತು 'ಕೆಜಿಎಫ್' ಸಿನಿಮಾ ನೋಡುವ ಅವಕಾಶ ಪಡೆದುಕೊಂಡಿದ್ದಾರೆ. ನಾಳೆ ಕೊಚ್ಚಿಯಲ್ಲಿ 'ಕೆಜಿಎಫ್' ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಅದೇ ಕಾರ್ಯಕ್ರಮದಲ್ಲಿ ಮಲೆಯಾಳಂ ಸಿನಿಮಾ 'ಯಾತ್ರ'ದ ಆಡಿಯೋ ಬಿಡುಗಡೆಯಾಗಲಿದೆ.
ಈ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳು ಯಶ್ ಹಾಗೂ ಮೆಗಾ ಸ್ಟಾರ್ ಮಮ್ಮೂಟಿ ಅವರನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ. 'ಕೆಜಿಎಫ್' ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಎಲ್ಲ ಭಾಷೆಗಳಿಗೆ ಹೊಲಿಸಿದರೆ, ಕೇರಳದಲ್ಲಿ ಕ್ರೇಜ್ ಕಡಿಮೆ ಇತ್ತು.

ಅಂದಹಾಗೆ, 'ಕೆಜಿಎಫ್' ಸಿನಿಮಾದ 'ಸಿಡಿಲ ಬರವ..' ಹಾಡಿನ ವಿಡಿಯೋ ನಿನ್ನೆ ಬಿಡುಗಡೆಯಾಗಿದೆ. ಕೇವಲ 14 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಅತಿ ಶೀಘ್ರದಲ್ಲೇ ಹಿಂದಿ ಅವತರಣಿಕೆಯ ಕೆಜಿಎಫ್ ಸಿನಿಮಾ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











