'2.O' ಸಿನಿಮಾದ ನಡುವೆ ದರ್ಶನ ನೀಡಿದ 'KGF'!

Recommended Video

2.O ಸಿನಿಮಾದ ನಡುವೆ ದರ್ಶನ ನೀಡಿದ KGF | FILMIBEAT KANNADA

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ '2.O' ಸಿನಿಮಾ ಇಂದು ವಿಶ್ವಾದ್ಯಂತ ಅಬ್ಬರ ಶುರು ಮಾಡಿದೆ. ಇಷ್ಟು ವರ್ಷಗಳಿಂದ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಅಂತೂ ಸಿನಿಮಾ ನೋಡುವ ಸುಗ್ಗಿ ಕಾಲ ಬಂದಿದೆ.

ಸಾಮಾನ್ಯವಾಗಿ ವಿದೇಶದಲ್ಲಿ ರಜನಿಕಾಂತ್ ಸಿನಿಮಾಗಳಿಗೆ ದೊಡ್ಡ ಕ್ರೇಜ್ ಇರುತ್ತದೆ. ಅದೇ ರೀತಿ ಈ ಸಿನಿಮಾ ಕೂಡ ಬೇರೆ ಬೇರೆ ದೇಶಗಳಲ್ಲಿ ತೆರೆಗೆ ಬಂದಿದೆ. ಮತ್ತೊಂದು ವಿಶೇಷ ಅಂದರೆ, ವಿದೇಶದಲ್ಲಿ ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ '2.O' ಜೊತೆಗೆ ಕನ್ನಡದ 'ಕೆಜಿಎಫ್' ಕೂಡ ದರ್ಶನ ನೀಡಿದೆ.

'ಕೆಜಿಎಫ್' ಸಿನಿಮಾ ಕರ್ನಾಟಕವನ್ನು ಮೀರಿ ಇಡೀ ದೇಶ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ಸಿನಿಮಾ. '2.O' ರೀತಿಯೇ 'ಕೆಜಿಎಫ್' ಗಾಗಿ ಕೂಡ ಸಾಕಷ್ಟು ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ, ಅಂತಹ ಅಭಿಮಾನಿಗಳಿಗೆ '2.O' ಜೊತೆಗೆ 'ಕೆಜಿಎಫ್' ಝಲಕ್ ಕಂಡಿದೆ. ಮುಂದೆ ಓದಿ...

ಚಿಟ್ಟಿ ಜೊತೆ ಬಂದ ರಾಕಿ

ಚಿಟ್ಟಿ ಜೊತೆ ಬಂದ ರಾಕಿ

ಸ್ಟೈಲ್ ಕಿಂಗ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ '2.O' ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಪ್ರದರ್ಶನದ ವೇಳೆ 'ಕೆಜಿಎಫ್' ಸಿನಿಮಾ ಟ್ರೇಲರ್ ಅನ್ನು ಪ್ರದರ್ಶನ ಮಾಡಲಾಗುತ್ತಿದೆ. ರಜನಿಕಾಂತ್ ನೋಡುವುದರ ಜೊತೆ ಜೊತೆಗೆ ಯಶ್ ರನ್ನು ಕೂಡ ಫ್ಯಾನ್ಸ್ ನೋಡುತ್ತಿದ್ದಾರೆ.

USA ನಲ್ಲಿ ಮಾತ್ರ

USA ನಲ್ಲಿ ಮಾತ್ರ

ವಿದೇಶದಲ್ಲಿ, ಅದರಲ್ಲಿಯೂ USA ನಲ್ಲಿ ಮಾತ್ರ ಸಿನಿಮಾ ನೋಡುವ ಅಭಿಮಾನಿಗಳಿಗೆ 'ಕೆಜಿಎಫ್' ಟ್ರೇಲರ್ ನೋಡುವ ಭಾಗ್ಯ ಸಿಗಲಿದೆ. ಈ ರೀತಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ತಮ್ಮ ಸಿನಿಮಾವನ್ನು ಹೊರ ದೇಶಗಳಿಗೆ ತಲುಪಿಸುತ್ತಿದೆ. ಕರ್ನಾಟಕದ ಕೋಟೆ ದಾಟಿದ ಈ ಸಿನಿಮಾದ ಭಾರತದ ಬಾರ್ಡರ್ ದಾಟುವ ಪ್ಲಾನ್ ಮಾಡಿದೆ.

ಈ ಹಿಂದಿನ IDMB ರೇಟಿಂಗ್

ಈ ಹಿಂದಿನ IDMB ರೇಟಿಂಗ್

ಈ ಹಿಂದೆ ಐಎಂಡಿಬಿಯ ಮೋಸ್ಟ್ ಆಂಟಿಸಿಪೇಟೆಡ್ ಇಂಡಿಯನ್ ಮೂವಿಸ್ ಪಟ್ಟಿಯಲ್ಲಿ ಕನ್ನಡದ 'ಕೆಜಿಎಫ್' ಮೊದಲ ಸ್ಥಾನ ಪಡೆದುಕೊಂಡಿತ್ತು. ಮೊದಲೆರಡು ಸ್ಥಾನಗಳಲ್ಲಿ 'ಜೀರೋ' ಮತ್ತು '2.0' ಚಿತ್ರಗಳು ಆವರಿಸಿಕೊಂಡಿತ್ತು. ಆದ್ರೆ, ಈ ಎರಡು ಚಿತ್ರಗಳನ್ನು ಯಶ್ ಹಿಂದೆ ಹಾಕಿದ್ದರು.

'ಕೆಜಿಎಫ್' ತಮಿಳು ಟ್ರೇಲರ್ ಟ್ರೆಂಡ್

'ಕೆಜಿಎಫ್' ತಮಿಳು ಟ್ರೇಲರ್ ಈಗಾಗಲೇ ದೊಡ್ಡ ಜನಮನ್ನಣೆ ಪಡೆದುಕೊಂಡಿದೆ. ತಮಿಳಿನಲ್ಲಿ 3 ಮಿಲಿಯನ್ ಗೂ ಅಧಿಕ ಹಿಟ್ಸ್ ಅನ್ನು ಯಟ್ಯೂಬ್ ನಲ್ಲಿ ಟ್ರೇಲರ್ ಪಡೆದುಕೊಂಡಿದೆ. ಕನ್ನಡ ಟ್ರೇಲರ್ ವ್ಯೂವ್ಸ್ 10 ಮಿಲಿಯನ್ ದಾಟಿದೆ. ಐದು ಭಾಷೆಯ ಟ್ರೇಲರ್ ಗಳೂ ಸೂಪರ್ ಹಿಟ್ ಆಗಿವೆ.

ಇದೇ ಡಿಸೆಂಬರ್ 21

ಇದೇ ಡಿಸೆಂಬರ್ 21

ಡಿಸೆಂಬರ್ 21 ಕನ್ನಡ ಚಿತ್ರರಂಗದ ಪಾಲಿಗೆ ಮಹಾ ದಿನವಾಗಲಿದೆ. ಎರಡು ವರ್ಷಗಳ ಪರಿಶ್ರಮದ 'ಕೆ ಜಿ ಎಫ್' ಸಿನಿಮಾ ಅಂದು ಬಿಡುಗಡೆಯಾಗಲಿದೆ. ಯಶ್, ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. 'ಕೆಜಿಎಫ್' ಚಿತ್ರದ ಎಲ್ಲ ಕುತೂಹಲಗಳಿಗೆ ಡಿಸೆಂಬರ್ 21ರಂದು ಉತ್ತರ ಸಿಗಲಿದೆ.

More from Filmibeat

English summary
Kannada actor Yash's 'KGF' movie trailer played with 2.O movie in a lot of USA locations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X