ವಿದೇಶದಲ್ಲಿ ಒಂದು ದಿನ ಮುಂಚೆಯೇ 'ಕೆಜಿಎಫ್' ಎಂಟ್ರಿ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕನ್ನಡ ಸಿನಿಮಾ ಎಂಬುವುದಕ್ಕಿಂತ ಭಾರತೀಯ ಚಿತ್ರವೆಂದು ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ 'ಕೆಜಿಎಫ್' ಡಿಸೆಂಬರ್ 21 ರಂದು ಅದ್ಧೂರಿಯಾಗಿ ತೆರೆಕಾಣ್ತಿದೆ. ಆದ್ರೆ, ಒಂದು ದಿನಕ್ಕೆ ಮುಂಚೆಯೇ ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.
ಹೌದು, ಡಿಸೆಂಬರ್ 21 ರಂದು ವರ್ಲ್ಡ್ ಪ್ರೀಮಿಯರ್ ಆಗ್ತಿದ್ರೆ, ಅದಕ್ಕೂ ಒಂದು ದಿನ ಮೊದಲೇ ಅಂದ್ರೆ, ಡಿಸೆಂಬರ್ 20 ರಂದೇ ಕೆಲವು ದೇಶಗಳಲ್ಲಿ ಪ್ರದರ್ಶನವಾಗಲಿದೆ. ಕೆನಡಾ ಮತ್ತು ಯುಎಸ್ ದೇಶಗಳಲ್ಲಿ 'ಕೆಜಿಎಫ್' ಒಂದು ದಿನ ಮೊದಲೇ ತೆರೆಕಾಣ್ತಿದೆ.

ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಐದು ಭಾಷೆಯಲ್ಲಿ ಸಿನಿಮಾ ಪ್ರದರ್ಶನವಾಗ್ತಿದ್ದು, ಕರ್ನಾಟಕದಲ್ಲಿ ಬಿಡುಗಡೆಗೂ ಮೊದಲೇ ಕನ್ನಡ ಸಿನಿಮಾವೊಂದು ಹೊರದೇಶದಲ್ಲಿ ತೆರೆಕಾಣ್ತಿರುವುದು ವಿಶೇಷ. ಇದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಸಿನಿಮಾ ಆಸ್ಟ್ರೇಲಿಯಾದಲ್ಲಿ ಒಂದು ದಿನ ಮುಂಚೆಯೇ ತೆರೆಕಂಡಿತ್ತು.
ಇನ್ನುಳಿದಂತೆ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











