twitter
    For Quick Alerts
    ALLOW NOTIFICATIONS  
    For Daily Alerts

    ವಿದೇಶದಲ್ಲಿ ಒಂದು ದಿನ ಮುಂಚೆಯೇ 'ಕೆಜಿಎಫ್' ಎಂಟ್ರಿ

    |

    Recommended Video

    KGF Kannada Movie : ಡಿಸೆಂಬರ್ 20ರಂದೇ ವಿದೇಶದಲ್ಲಿ ರಿಲೀಸ್ ಆಗ್ತಿದೆ ಕೆಜಿಎಫ್ | FILMIBEAT KANNADA

    ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕನ್ನಡ ಸಿನಿಮಾ ಎಂಬುವುದಕ್ಕಿಂತ ಭಾರತೀಯ ಚಿತ್ರವೆಂದು ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ.

    ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ 'ಕೆಜಿಎಫ್' ಡಿಸೆಂಬರ್ 21 ರಂದು ಅದ್ಧೂರಿಯಾಗಿ ತೆರೆಕಾಣ್ತಿದೆ. ಆದ್ರೆ, ಒಂದು ದಿನಕ್ಕೆ ಮುಂಚೆಯೇ ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.

    ರಜನಿಯ '2.0' ಚಿತ್ರದ ಹಾದಿಯಲ್ಲಿ ಕನ್ನಡದ 'ಕೆಜಿಎಫ್'.! ರಜನಿಯ '2.0' ಚಿತ್ರದ ಹಾದಿಯಲ್ಲಿ ಕನ್ನಡದ 'ಕೆಜಿಎಫ್'.!

    ಹೌದು, ಡಿಸೆಂಬರ್ 21 ರಂದು ವರ್ಲ್ಡ್ ಪ್ರೀಮಿಯರ್ ಆಗ್ತಿದ್ರೆ, ಅದಕ್ಕೂ ಒಂದು ದಿನ ಮೊದಲೇ ಅಂದ್ರೆ, ಡಿಸೆಂಬರ್ 20 ರಂದೇ ಕೆಲವು ದೇಶಗಳಲ್ಲಿ ಪ್ರದರ್ಶನವಾಗಲಿದೆ. ಕೆನಡಾ ಮತ್ತು ಯುಎಸ್ ದೇಶಗಳಲ್ಲಿ 'ಕೆಜಿಎಫ್' ಒಂದು ದಿನ ಮೊದಲೇ ತೆರೆಕಾಣ್ತಿದೆ.

    Kgf movie will release on December 20 in US and Canada

    ಮೊದಲ ಎಸೆತದಲ್ಲೇ ಶಾರೂಖ್ ಖಾನ್ ಗೆ ಗುರಿಯಿಟ್ಟ ರಾಕಿಂಗ್ ಸ್ಟಾರ್ ಮೊದಲ ಎಸೆತದಲ್ಲೇ ಶಾರೂಖ್ ಖಾನ್ ಗೆ ಗುರಿಯಿಟ್ಟ ರಾಕಿಂಗ್ ಸ್ಟಾರ್

    ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಐದು ಭಾಷೆಯಲ್ಲಿ ಸಿನಿಮಾ ಪ್ರದರ್ಶನವಾಗ್ತಿದ್ದು, ಕರ್ನಾಟಕದಲ್ಲಿ ಬಿಡುಗಡೆಗೂ ಮೊದಲೇ ಕನ್ನಡ ಸಿನಿಮಾವೊಂದು ಹೊರದೇಶದಲ್ಲಿ ತೆರೆಕಾಣ್ತಿರುವುದು ವಿಶೇಷ. ಇದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಸಿನಿಮಾ ಆಸ್ಟ್ರೇಲಿಯಾದಲ್ಲಿ ಒಂದು ದಿನ ಮುಂಚೆಯೇ ತೆರೆಕಂಡಿತ್ತು.

    ದರ್ಶನ್ ಆರೋಗ್ಯ ವಿಚಾರಿಸಿದ ಯಶ್, 'ಮರಿ ರಾಜಾಹುಲಿ'ಗೆ ಶುಭಕೋರಿದ ದಾಸ.! ದರ್ಶನ್ ಆರೋಗ್ಯ ವಿಚಾರಿಸಿದ ಯಶ್, 'ಮರಿ ರಾಜಾಹುಲಿ'ಗೆ ಶುಭಕೋರಿದ ದಾಸ.!

    ಇನ್ನುಳಿದಂತೆ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

    English summary
    Rocking star Yash starrer Kgf movie will be releasing in US and Canada a day early than its release in Karnataka.
    Thursday, November 8, 2018, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X