ರವಿ ಬಸ್ರೂರ್ ಹೊಸ ಸ್ಟೂಡಿಯೋ ಹೀಗಿದೆ ನೋಡಿ

'ಕೆಜಿಎಫ್' ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೊಸ ರೆಕಾರ್ಡಿಂಗ್ ಸ್ಟೂಡಿಯೋ ಉದ್ಘಾಟನೆ ಮಾಡಿದ್ದಾರೆ. ನಿನ್ನೆ ತಮ್ಮ ಹೊಸ ಸ್ಟೂಡಿಯೋವನ್ನು ಲಾಂಚ್ ಮಾಡಿದ್ದು, ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ನಾಗರಬಾವಿಯಲ್ಲಿ ಈ ಸ್ಟೂಡಿಯೊ ಇದೆ. ಆಧುನಿಕ ತಂತ್ರಜ್ಙಾನ ಬಳಸಿ ಇದನ್ನು ನಿರ್ಮಿಸಲಾಗಿದೆ. ಸ್ಟೂಡಿಯೊ ತುಂಬ ಹೆಚ್ಚು ಕಂಪು ಹಾಗೂ ಗೋಲ್ಡನ್ ಬಣ್ಣ ಬಳಸಲಾಗಿದೆ. ಹೊಳೆಯುವ ಲೈಟಿಂಗ್ ಮೂಲಕ ಸ್ಟೂಡಿಯೊ ಅಲಂಕಾರ ಮಾಡಲಾಗಿದೆ.

ರವಿ ಬಸ್ರೂರ್ ಗೆ ಬುದ್ಧ ಎಂದರೆ ಬಹಳ ಇಷ್ಟ. ಹಾಗಾಗಿ, ತಮ್ಮ ಸ್ಟೂಡಿಯೊದಲ್ಲಿ ಬುದ್ಧನ ಮೂರ್ತಿಯನ್ನು ಇಟ್ಟುಕೊಂಡಿದ್ದಾರೆ. ''ಮೌನದಿಂದ ಕೆಲಸ ಮಾಡು.. ನಿನ್ನ ಯಶಸ್ಸು ಮಾತನಾಡಲಿ'' ಎನ್ನುವ ಸಾಲನ್ನು ಸ್ಟೂಡಿಯೋದ ಗೋಡೆ ಮೇಲೆ ಬರೆಯಲಾಗಿದೆ.

Kgf Music Director Ravi Basrur New Recording Studio

ಈ ಹೊಸ ಸ್ಟೂಡಿಯೊದಲ್ಲಿ ಸದ್ಯ 'ಕೆಜಿಎಫ್ 2' ಸಿನಿಮಾದ ಸಂಗೀತ ಕಾರ್ಯ ನಡೆಯುತ್ತಿದೆ. ಅಂದಹಾಗೆ, ರವಿ ಬಸ್ರೂರ್ 'ಉಗ್ರಂ' ಸಿನಿಮಾದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. ನಂತರ 'ಅಂಜನಿಪುತ್ರ', 'ಮಫ್ತಿ', 'ಕರ್ವ', 'ಬಜಾರ್', 'ಕೆಜಿಎಫ್' ಸಿನಿಮಾಗಳಿಗೆ ಸಂಗೀತ ನೀಡಿದರು.

Kgf Music Director Ravi Basrur New Recording Studio

ಸಂಗೀತದ ಜೊತೆಗೆ ಸಿನಿಮಾದ ನಿರ್ದೇಶನ ಹಾಗೂ ನಟನೆಯಲ್ಲಿಯೂ ರವಿ ಬಸ್ರೂರ್ ತೊಡಗಿಸಿಕೊಂಡಿದ್ದಾರೆ. 'ಗಿರ್ಮಿಟ್' ಇವರ ಇತ್ತೀಚಿಗೆ ನಿರ್ದೇಶನದ ಸಿನಿಮಾವಾಗಿದೆ.

More from Filmibeat

English summary
KGF music director Ravi Basrur new recording studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X