For Quick Alerts
  ALLOW NOTIFICATIONS  
  For Daily Alerts

  ರವಿ ಬಸ್ರೂರ್ ಹೊಸ ಸ್ಟೂಡಿಯೋ ಹೀಗಿದೆ ನೋಡಿ

  |

  'ಕೆಜಿಎಫ್' ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಹೊಸ ರೆಕಾರ್ಡಿಂಗ್ ಸ್ಟೂಡಿಯೋ ಉದ್ಘಾಟನೆ ಮಾಡಿದ್ದಾರೆ. ನಿನ್ನೆ ತಮ್ಮ ಹೊಸ ಸ್ಟೂಡಿಯೋವನ್ನು ಲಾಂಚ್ ಮಾಡಿದ್ದು, ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಬೆಂಗಳೂರಿನ ನಾಗರಬಾವಿಯಲ್ಲಿ ಈ ಸ್ಟೂಡಿಯೊ ಇದೆ. ಆಧುನಿಕ ತಂತ್ರಜ್ಙಾನ ಬಳಸಿ ಇದನ್ನು ನಿರ್ಮಿಸಲಾಗಿದೆ. ಸ್ಟೂಡಿಯೊ ತುಂಬ ಹೆಚ್ಚು ಕಂಪು ಹಾಗೂ ಗೋಲ್ಡನ್ ಬಣ್ಣ ಬಳಸಲಾಗಿದೆ. ಹೊಳೆಯುವ ಲೈಟಿಂಗ್ ಮೂಲಕ ಸ್ಟೂಡಿಯೊ ಅಲಂಕಾರ ಮಾಡಲಾಗಿದೆ.

  ಕುಂದಾಪುರ ಜನತೆ ಬಗ್ಗೆ ಬೇಸರ: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರವಿ ಬಸ್ರೂರ್ಕುಂದಾಪುರ ಜನತೆ ಬಗ್ಗೆ ಬೇಸರ: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರವಿ ಬಸ್ರೂರ್

  ರವಿ ಬಸ್ರೂರ್ ಗೆ ಬುದ್ಧ ಎಂದರೆ ಬಹಳ ಇಷ್ಟ. ಹಾಗಾಗಿ, ತಮ್ಮ ಸ್ಟೂಡಿಯೊದಲ್ಲಿ ಬುದ್ಧನ ಮೂರ್ತಿಯನ್ನು ಇಟ್ಟುಕೊಂಡಿದ್ದಾರೆ. ''ಮೌನದಿಂದ ಕೆಲಸ ಮಾಡು.. ನಿನ್ನ ಯಶಸ್ಸು ಮಾತನಾಡಲಿ'' ಎನ್ನುವ ಸಾಲನ್ನು ಸ್ಟೂಡಿಯೋದ ಗೋಡೆ ಮೇಲೆ ಬರೆಯಲಾಗಿದೆ.

  ಈ ಹೊಸ ಸ್ಟೂಡಿಯೊದಲ್ಲಿ ಸದ್ಯ 'ಕೆಜಿಎಫ್ 2' ಸಿನಿಮಾದ ಸಂಗೀತ ಕಾರ್ಯ ನಡೆಯುತ್ತಿದೆ. ಅಂದಹಾಗೆ, ರವಿ ಬಸ್ರೂರ್ 'ಉಗ್ರಂ' ಸಿನಿಮಾದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. ನಂತರ 'ಅಂಜನಿಪುತ್ರ', 'ಮಫ್ತಿ', 'ಕರ್ವ', 'ಬಜಾರ್', 'ಕೆಜಿಎಫ್' ಸಿನಿಮಾಗಳಿಗೆ ಸಂಗೀತ ನೀಡಿದರು.

  Kgf Music Director Ravi Basrur New Recording Studio

  ನನ್ನ ಕಣ್ಣೀರು ಸಿನಿಮಾ ಸೋಲಿನಿಂದ ಅಲ್ಲ: ನೋವಿನ ಕಾರಣ ಹೇಳಿದ ರವಿ ಬಸ್ರೂರ್ನನ್ನ ಕಣ್ಣೀರು ಸಿನಿಮಾ ಸೋಲಿನಿಂದ ಅಲ್ಲ: ನೋವಿನ ಕಾರಣ ಹೇಳಿದ ರವಿ ಬಸ್ರೂರ್

  ಸಂಗೀತದ ಜೊತೆಗೆ ಸಿನಿಮಾದ ನಿರ್ದೇಶನ ಹಾಗೂ ನಟನೆಯಲ್ಲಿಯೂ ರವಿ ಬಸ್ರೂರ್ ತೊಡಗಿಸಿಕೊಂಡಿದ್ದಾರೆ. 'ಗಿರ್ಮಿಟ್' ಇವರ ಇತ್ತೀಚಿಗೆ ನಿರ್ದೇಶನದ ಸಿನಿಮಾವಾಗಿದೆ.

  English summary
  KGF music director Ravi Basrur new recording studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X