For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಬಿಡುಗಡೆಯಾದ 3ನೇ ವಾರಕ್ಕೆ ಐಟಿ ದಾಳಿ ಆಗಿದ್ದು ಬೇಸರ ತಂದಿದೆ: ವಿಜಯ್ ಕಿರಗಂದೂರು

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಬಿಗ್ ಬಜೆಟ್ ಸಿನಿಮಾ 'ಕೆ.ಜಿ.ಎಫ್' ಬಿಡುಗಡೆ ಆಗಿ ಎರಡು ವಾರ ಕಳೆದರೂ, ಭರ್ಜರಿ ಪ್ರದರ್ಶನ ಕಾಣುತ್ತಿದೆ.

  ಕಲೆಕ್ಷನ್ ವಿಚಾರದಲ್ಲಿ 'ಕೆ.ಜಿ.ಎಫ್' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುತ್ತಿರುವಾಗಲೇ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಟ ಯಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ.

  'ಕೆ.ಜಿ.ಎಫ್' ಬಿಡುಗಡೆ ಆದ ಮೂರನೇ ವಾರಕ್ಕೆ ಐಟಿ ದಾಳಿ ನಡೆದಿದ್ದು ಬೇಸರ ತಂದಿದೆ ಅಂತ ನಿರ್ಮಾಪಕ ವಿಜಯ್ ಕಿರಗಂದೂರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಮುಂದೆ ಓದಿರಿ...

  ಐಟಿ ಪರಿಶೀಲನೆ ಮುಕ್ತಾಯ

  ಐಟಿ ಪರಿಶೀಲನೆ ಮುಕ್ತಾಯ

  ನಿರ್ಮಾಪಕ ವಿಜಯ್ ಕಿರಗಂದೂರು ಮನೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯ ಅಂತ್ಯಗೊಂಡಿದೆ. ವಿಜಯ್ ಕಿರಗಂದೂರು ಆದಾಯ ಮೂಲಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಐಟಿ ಆಫೀಸರ್ಸ್ ವಾಪಸ್ ಹೊರಟರು.

  ಸಂದರ್ಶನ: ಕೆಜಿಎಫ್-2 ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಎಕ್ಸ್ ಕ್ಲೂಸಿವ್ ಮಾತುಸಂದರ್ಶನ: ಕೆಜಿಎಫ್-2 ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರ್ ಎಕ್ಸ್ ಕ್ಲೂಸಿವ್ ಮಾತು

  ತಲೆ ಕೆಡಿಸಿಕೊಳ್ಳುವಂಥ ವಿಚಾರ ಅಲ್ಲ.!

  ತಲೆ ಕೆಡಿಸಿಕೊಳ್ಳುವಂಥ ವಿಚಾರ ಅಲ್ಲ.!

  ''ಇಲ್ಲಿ ತಲೆ ಕೆಡಿಸಿಕೊಳ್ಳುವಂಥ ವಿಚಾರ ಏನೂ ಇಲ್ಲ. 'ಕೆ.ಜಿ.ಎಫ್' ಸಿನಿಮಾ ದೊಡ್ಡ ಸಕ್ಸಸ್ ಆಗಿದೆ. ಅದಕ್ಕೆ ಸಂಬಂಧಪಟ್ಟ ಹಾಗೆ ಎರಡನೇ ವಾರ ಮುಗಿಯುವ ಹೊತ್ತಿಗೆ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಎಲ್ಲವೂ ಸರಿಯಾಗಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇವೆ. ಮತ್ತೆ ವಿಚಾರಣೆ ಮಾಡಿದರೆ ಸ್ಪಂದಿಸುತ್ತೇವೆ'' ಎಂದು ಮಾಧ್ಯಮಗಳ ಮುಂದೆ ವಿಜಯ್ ಕಿರಗಂದೂರು ಹೇಳಿದರು.

  'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?

  ಬೇಸರ ಆಗಿದೆ

  ಬೇಸರ ಆಗಿದೆ

  ''ಕೆ.ಜಿ.ಎಫ್ ರಿಲೀಸ್ ಆಗಿ ಎರಡು ವಾರ ಇನ್ನೂ ಕಂಪ್ಲೀಟ್ ಆಗಿರಲಿಲ್ಲ. ಅಷ್ಟು ಬೇಗ ಇಷ್ಟೆಲ್ಲಾ ಆಗಿದೆ. ನಾವು ಪ್ರಮೋಷನ್ ಗೆ ಪ್ಲಾನ್ ಮಾಡುತ್ತಿದ್ವಿ. ಮೂರನೇ ವಾರದ ಆರಂಭದಲ್ಲೇ ಹೀಗೆ ಆಗಿರುವುದು ನಮಗೂ ಬೇಸರ ತಂದಿದೆ. ಆದ್ರೆ ಐಟಿ ಇಲಾಖೆಗೆ ಸಿಕ್ಕ ಮಾಹಿತಿ ಪ್ರಕಾರ ಬಂದಿದ್ದಾರೆ ಅಷ್ಟೇ'' ಎಂದಿದ್ದಾರೆ ವಿಜಯ್ ಕಿರಗಂದೂರು.

  ಆದಾಯ ಮೂಲದ ಪರಿಶೀಲನೆ

  ಆದಾಯ ಮೂಲದ ಪರಿಶೀಲನೆ

  ''ನನ್ನದು ಕನ್ಸ್ ಟ್ರಕ್ಷನ್ ಬಿಸಿನೆಸ್ ಇದೆ. ಅದರ ಜೊತೆಗೆ ಸಿನಿಮಾ ವ್ಯವಹಾರ. ಎರಡನ್ನೂ ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಮೊದಲ ದಿನವೇ ನನ್ನ ಪರಿಶೀಲನೆ ಮುಗಿದಿತ್ತು. ಆದ್ರೆ, ಎಲ್ಲರದ್ದೂ ಮುಗಿಬೇಕಾಗಿರುವ ಕಾರಣ ಇಷ್ಟು ತಡ ಆಯ್ತು'' - ವಿಜಯ್ ಕಿರಗಂದೂರು.

  English summary
  KGF Producer Vijay Kiragandur reacts after IT Raid is over.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X