'ಕೆಜಿಎಫ್' ಕೊಟ್ಟ ಬ್ರೇಕಿಂಗ್ : ಟ್ರೈಲರ್ ಮತ್ತು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್

Recommended Video

K.G.F Kannada Movie : ಕೊನೆಗೂ ಗೊತ್ತಾಯ್ತು ಕೆ.ಜಿ.ಎಫ್ ರಿಲೀಸ್ ದಿನಾಂಕ..! | Oneindia Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಹಾಕಿದೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರ್ತಿರುವ ಬಹುಕೋಟಿ ವೆಚ್ಚದ ಚಿತ್ರ.

'ಕೆಜಿಎಫ್' ಚಿತ್ರದ ಟ್ರೈಲರ್ ಮತ್ತು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ಇಂದು (ಸೆಪ್ಟೆಂಬರ್ 19) ಅಧಿಕೃತವಾಗಿ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಈಗ 'ಕೆಜಿಎಫ್' ಸಿನಿಮಾ ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಅನೌನ್ಸ್ ಮಾಡಿದ್ದಾರೆ.

ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ದಿನಾಂಕವನ್ನ ಘೋಷಿಸಿದ್ರೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ತಮಿಳು ನಟ ವಿಶಾಲ್ ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಕೆಜಿಎಫ್ ಎಂಟ್ರಿ ಯಾವಾಗ.? ಮುಂದೆ ಓದಿ....

ನವೆಂಬರ್ ನಲ್ಲಿ 'ಕೆಜಿಎಫ್'

ನವೆಂಬರ್ ನಲ್ಲಿ 'ಕೆಜಿಎಫ್'

ರಾಕಿಂಗ್ ಸ್ಟಾರ್ ಅಭಿನಯದ ಮೆಗಾ ಸಿನಿಮಾ 'ಕೆಜಿಎಫ್' ನವೆಂಬರ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರ್ತಿದೆ. ನವೆಂಬರ್ 16 ರಂದು ಭಾರತದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಅಕ್ಟೋಬರ್ ನಲ್ಲಿ ಟ್ರೈಲರ್

ಅಕ್ಟೋಬರ್ ನಲ್ಲಿ ಟ್ರೈಲರ್

ನವೆಂಬರ್ ತಿಂಗಳಲ್ಲಿ ಕೆಜಿಎಫ್ ಸಿನಿಮಾ ಬರ್ತಿದೆ. ಅದಕ್ಕೂ ಮುಂಚೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಮೊದಲೇ ಊಹಿಸಿದಂತೆ ಅಕ್ಟೋಬರ್ ತಿಂಗಳಲ್ಲಿ ಕೆಜಿಎಫ್ ಟ್ರೈಲರ್ ರಿಲೀಸ್ ಆಗುತ್ತಿದೆ. ಅಕ್ಟೋಬರ್ 14 ರಂದು ಕೆಜಿಎಫ್ ಟ್ರೈಲರ್ ಬರುತ್ತೆ.

ತಮಿಳು-ತೆಲುಗು ಯಾವಾಗ.?

ತಮಿಳು-ತೆಲುಗು ಯಾವಾಗ.?

ಅಕ್ಟೋಬರ್ 14 ರಂದು ಕೆಜಿಎಫ್ ಟ್ರೈಲರ್, ನವೆಂಬರ್ 16 ರಂದು ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ಯಶ್ ತಿಳಿಸಿದ್ದಾರೆ. ವಿಶೇಷ ಅಂದ್ರೆ ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಅದೇ ದಿನ ಟ್ರೈಲರ್ ಮತ್ತು ಸಿನಿಮಾ ಬರಲಿದೆ ಎಂದು ವಿಶಾಲ್ ತಿಳಿಸಿದ್ದಾರೆ.

ಇದು ಮೊದಲ ಭಾಗವಷ್ಟೇ

ಇದು ಮೊದಲ ಭಾಗವಷ್ಟೇ

ಅಂದ್ಹಾಗೆ, ಕೆಜಿಎಫ್ ಸಿನಿಮಾ ಎರಡು ಅಧ್ಯಾಯಗಳಲ್ಲಿ ಸಿದ್ಧವಾಗ್ತಿದೆ. ಸದ್ಯಕ್ಕೆ ಮೊದಲ ಭಾಗ ಮಾತ್ರ ರಿಲೀಸ್ ಆಗ್ತಿದೆ. ಈ ಸಿನಿಮಾ ಬಂದ್ಮೇಲೆ ಸೆಕೆಂಡ್ ಚಾಪ್ಟರ್ ಯಾವಾಗ ಬರುತ್ತೆ ಎಂದು ಹೇಳಲಾಗುವುದು ಎಂದು ಚಿತ್ರತಂಡವೇ ಹೇಳಿಕೊಂಡಿತ್ತು.

More from Filmibeat

English summary
Rocking star yash starrer 'KGF' will release on november 16th and trailer on october 14th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X