ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್': ಎಷ್ಟು ಚಿತ್ರಮಂದಿರ?
Recommended Video

'ಕೆಜಿಎಫ್' ಸಿನಿಮಾ ಐದು ಭಾಷೆಯಲ್ಲಿ ಬರ್ತಿರುವುದರಿಂದ ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಮೊದಲಿನಿಂದಲೂ ಹೇಳಲಾಗ್ತಿತ್ತು. ಅದರಂತೆ ಈಗ ಚಿತ್ರಮಂದಿರ ವಿಷ್ಯದಲ್ಲೂ ಕೆಜಿಎಫ್ ದಾಖಲೆ ಬರೆದಿದೆ.
ಸದ್ಯದ ಮಾಹಿತಿ ಪ್ರಕಾರ 'ಕೆಜಿಎಫ್' ಸಿನಿಮಾ ಭಾರತದಾದ್ಯಂತ ಸುಮಾರು 2 ಸಾವಿರ ಸ್ಕ್ರೀನ್ ನಲ್ಲಿ ತೆರೆಕಾಣಲಿದೆ. ಕನ್ನಡದಲ್ಲೇ 350ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಯಶ್ ಸಿನಿಮಾ ಬರ್ತಿದೆ.
ಆ ಕಡೆ ಬಾಲಿವುಡ್ ನ ಖ್ಯಾತ ವಿತರಕ ಫರಾನ್ ಅಖ್ತರ್, ರಿತೇಶ್ ಸಿದ್ವಾನಿ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡ್ತಿದ್ದು, 500ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿದ್ದಾರಂತೆ. ಇನ್ನುಳಿದಂತೆ ಎಲ್ಲ ಭಾಷೆಯಲ್ಲೂ ಸೇರಿ 1800 ರಿಂದ 2000 ಸ್ಕ್ರೀನ್ ನಲ್ಲಿ ಕೆಜಿಎಫ್ ನೋಡಬಹುದು.

ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದಾಖಲೆ ಹಾಗೂ ಹೆಮ್ಮೆಯ ವಿಷ್ಯ. ಇಷ್ಟು ಚಿತ್ರಮಂದಿರದಲ್ಲಿ ಕೆಜಿಎಫ್ ಬರ್ತೊರೋದು ನೋಡಿದ್ರೆ, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.
ಈಗಾಗಲೇ ಕನ್ನಡದಲ್ಲಿ ನೂರು ಕೋಟಿ ಗಳಿಸುವ ಮೊದಲ ಸಿನಿಮಾ ಇದಾಗಲಿದೆ ಎಂಬ ಮಾತಿದೆ. ಈ ಸ್ಕ್ರೀನ್ ಸಂಖ್ಯೆ ನೋಡಿದ್ರೆ ಇದು ಪಕ್ಕಾ ಆಗಲಿದೆ. ಡಿಸೆಂಬರ್ 21 ರಂದು ಐದು ಭಾಷೆಯಲ್ಲಿ ಕೆಜಿಎಫ್ ಬರ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ.


Click it and Unblock the Notifications











