'ಶಾರುಖ್ ಎದುರಿಗೆ ಬಂದ್ರೆ, ನಿಮ್ಮ ಅಂತಿಮ ಯಾತ್ರೆ ಆಗುತ್ತೆ'': ಯಶ್ ವಿರುದ್ಧ ಶಾರುಖ್ ಫ್ಯಾನ್ಸ್ ಕಿಡಿ

Recommended Video

KGF Kannada Movie : ಯಶ್ ಫ್ಯಾನ್ಸ್ v/s ಶಾರುಖ್ ಖಾನ್ ಫ್ಯಾನ್ಸ್ ಸಮರ | FILMIBEAT KANNADA

ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ.. ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿಯೂ ಹವಾ ಸೃಷ್ಟಿಸಿರುವ ಸಿನಿಮಾ ಕನ್ನಡದ 'ಕೆ.ಜಿ.ಎಫ್'. ಬಾಲಿವುಡ್ ನ ಖ್ಯಾತ ನಟರಾದ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ಕನ್ನಡದ 'ಕೆ.ಜಿ.ಎಫ್' ಚಿತ್ರದ ಹಿಂದಿ ವಿತರಣೆ ಹಕ್ಕುಗಳನ್ನು ಖರೀದಿ ಮಾಡಿದ್ದಾರೆ ಅಂದ್ರೆ ನೀವೇ ಊಹಿಸಿ.. 'ಕೆ.ಜಿ.ಎಫ್' ಚಿತ್ರದ ಹೈಪ್ ಎಷ್ಟರ ಮಟ್ಟಿಗೆ ಇದೆ ಅಂತ.!

ಎರಡು ವರ್ಷಗಳಿಂದ ತಯಾರು ಮಾಡಲಾಗಿರುವ 'ಕೆ.ಜಿ.ಎಫ್' ಚಿತ್ರ ಡಿಸೆಂಬರ್ 21 ರಂದು ರಾಷ್ಟ್ರಾದ್ಯಂತ ಬಿಡುಗಡೆ ಆಗಲಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಅದೇ ದಿನ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ 'ಝೀರೋ' ಚಿತ್ರ ಕೂಡ ರಿಲೀಸ್ ಆಗಲಿದೆ.

'ಝೀರೋ' ಎದುರು 'ಕೆ.ಜಿ.ಎಫ್' ತೊಡೆ ತಟ್ಟಿ ನಿಂತಿರುವುದು ಶಾರುಖ್ ಖಾನ್ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ, ಟ್ವಿಟ್ಟರ್ ನಲ್ಲಿ ಯಶ್ ವಿರುದ್ಧ ಶಾರುಖ್ ಖಾನ್ ಫ್ಯಾನ್ಸ್ ಕಿಡಿಕಾರಲು ಆರಂಭಿಸಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳತ್ತ ಕಣ್ಣಾಡಿಸಿ...

ಟ್ವೀಟ್ ಮಾಡಿದ್ದ ಫರ್ಹಾನ್ ಅಖ್ತರ್

''ಕೆ.ಜಿ.ಎಫ್' ಚಿತ್ರವನ್ನ ಪರಿಚಯಿಸುತ್ತಿರುವೆ. ಡಿಸೆಂಬರ್ 21 ರಂದು 'ಕೆ.ಜಿ.ಎಫ್' ಬಿಡುಗಡೆ ಆಗಲಿದೆ'' ಎಂದು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಿಂದಾಗಿ ಯಶ್ ಫ್ಯಾನ್ಸ್ ಹಾಗೂ ಶಾರುಖ್ ಫ್ಯಾನ್ಸ್ ಮಧ್ಯ ದೊಡ್ಡ ಸಮರ ಶುರುವಾಗಿದೆ.

ಶಾರುಖ್ ಫ್ಯಾನ್ ಕೊಟ್ಟಿರುವ ಪ್ರತಿಕ್ರಿಯೆ ನೋಡಿ

''ಶಾರುಖ್ ಖಾನ್ ಮುಂದೆ ಈ ಸಿನಿಮಾ ತೆರೆಗೆ ಬಂದ್ರೆ, ಅದೇ ನಿಮ್ಮ ಅಂತಿಮ ಯಾತ್ರೆ ಆಗುತ್ತೆ ಯಶ್'' ಎಂದು ಶಾರುಖ್ ಖಾನ್ ಅಭಿಮಾನಿಯೊಬ್ಬ ಪ್ರತಿಕ್ರಿಯಿಸಿದ್ದಾನೆ.

ಕನ್ನಡಿಗ ಕೊಟ್ಟ ತಿರುಗೇಟು

''ಅಂತಿಮ ಯಾತ್ರೆ ಯಾರದ್ದು ಆಗುತ್ತೆ ಅಂತ ನೋಡೋಣ. ಕನ್ನಡಿಗರ ಶಕ್ತಿಯನ್ನ ಅಂಡರ್ ಎಸ್ಟಿಮೇಟ್ ಮಾಡಬೇಡಿ. ಕೆ.ಜಿ.ಎಫ್ ಚಿತ್ರ ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗಲಿದೆ. ಕಂಟೆಂಟ್ ಯಾವತ್ತೂ ಕಿಂಗ್.. ಕಾದು ನೋಡಿ'' - ಇದು ಶಾರುಖ್ ಅಭಿಮಾನಿಗೆ ಕನ್ನಡಿಗ ಕೊಟ್ಟಿರುವ ತಿರುಗೇಟು.

ಕಂಟೆಂಟ್ ಮೇಲೆ ನಂಬಿಕೆ ಇದೆ

''ಝೀರೋ' ಚಿತ್ರದ ಮುಂದೆ 'ಕೆ.ಜಿ.ಎಫ್' ಬರ್ತಿದೆ ಅಂದ್ರೆ ಚಿತ್ರದ ಕಂಟೆಂಟ್ ಹಾಗೂ ಮೇಕಿಂಗ್ ಬಗ್ಗೆ ನಂಬಿಕೆ ಇದೆ ಅಂತರ್ಥ. ಈ ಚಿತ್ರಕ್ಕೋಸ್ಕರ ಕಾಯುತ್ತಿದ್ದೇವೆ'' ಎಂದು ಯಶ್ ಫ್ಯಾನ್ಸ್ ಕೂಡ ಟ್ವೀಟ್ ಮಾಡಿದ್ದಾರೆ.

ಪರ-ವಿರೋಧ ಚರ್ಚೆ

ಪರ-ವಿರೋಧ ಚರ್ಚೆ

''ಝೀರೋ' ಚಿತ್ರದ ಮುಂದೆ 'ಕೆ.ಜಿ.ಎಫ್' ಬಿಡುಗಡೆ ಆದರೆ 'ಕೆ.ಜಿ.ಎಫ್' ಫ್ಲಾಪ್ ಆಗುತ್ತೆ'' ಅಂತ ಕೆಲವರು ವಾದ ಮಾಡುತ್ತಿದ್ದರೆ, ''ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಬ್ಲಾಕ್ ಬಸ್ಟರ್ ಖಂಡಿತ ಆಗುತ್ತೆ'' ಎನ್ನುವುದು ಹಲವರ ಅಭಿಪ್ರಾಯ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.

More from Filmibeat

English summary
Shahrukh Khan fans are annoyed with Kannada Actor Yash as Kannada Movie KGF is releasing on December 21st along with SRK starrer 'Zero'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X