'ಕೆಜಿಎಫ್' ಚಿತ್ರಕ್ಕೆ ಸಾಥ್ ಕೊಡ್ತಿದ್ದಾರೆ ತಮಿಳು ನಟ ವಿಶಾಲ್
Recommended Video

ದಕ್ಷಿಣ ಭಾರತದಲ್ಲೇ ದೊಡ್ಡ ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಈಗ ಮತ್ತೊಂದು ವಿಷ್ಯಕ್ಕೆ ಸುದ್ದಿ ಮಾಡುತ್ತಿದೆ. ಸೆಪ್ಟೆಂಬರ್ 19 ರಂದು 'ಕೆಜಿಎಫ್' ಚಿತ್ರದ ಟ್ರೈಲರ್ ರಿಲೀಸ್ ದಿನಾಂಕವನ್ನ ಘೋಷಿಸುವುದಾಗಿ ಹೇಳಿಕೊಂಡಿತ್ತು. ಅದರಂತೆ ನಾಳೆ 'ಕೆಜಿಎಫ್' ಸಿನಿಮಾದ ಅಪ್ಡೇಟ್ ಸಿಗಲಿದೆ.
ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಟ್ರೈಲರ್ ಯಾವಾಗ ಮತ್ತು ರಿಲೀಸ್ ದಿನಾಂಕ ಯಾವಾಗ ಎಂಬುದನ್ನ ಕೂಡ ನಾಳೆಯೇ (ಸೆಪ್ಟೆಂಬರ್ 19) ಬಹಿರಂಗಪಡಿಸಲಿದ್ದಾರೆ.
ಅಂದ್ಹಾಗೆ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಈ ಸುದ್ದಿಯನ್ನ ಬಹಿರಂಗಪಡಿಸುವುದು ತಮಿಳು ಸ್ಟಾರ್ ನಟ ವಿಶಾಲ್. ಹೌದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ 'ಕೆಜಿಎಫ್' ಟ್ರೈಲರ್ ಮತ್ತು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ನಟ ವಿಶಾಲ್ ನಾಳೆ ಸಂಜೆ 6 ಗಂಟೆಗೆ ತಮ್ಮ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಹೇಳಲಿದ್ದಾರೆ.

ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಕೆಜಿಎಫ್'. ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ವಿಶೇಷ ಅಂದ್ರೆ, ಕೆಜಿಎಫ್ ಚಿತ್ರದ ಹಾಡೊಂದರಲ್ಲಿ ತಮನ್ನಾ ಹೆಜ್ಜೆ ಹಾಕಿದ್ದಾರೆ. 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ ಇದೀಗ 'ಕೆ.ಜಿ.ಎಫ್' ಸಿನಿಮಾದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಯಶ್ ಜೊತೆ ಸೇರಿ ಸೊಂಟು ಬಳುಕಿಸಿದ್ದಾರೆ.
ಸುಮಾರು ಎರಡು ವರ್ಷಗಳಿಂದ ನಟ ಯಶ್ ಈ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಮದುವೆಯ ಬಳಿಕ ಯಶ್ ಅಭಿನಯದ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ. ಹೀಗಾಗಿ, ಸಹಜವಾಗಿ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.


Click it and Unblock the Notifications











