ಲೋಕಲ್ ಚಾನಲ್ ವಿರುದ್ಧ ಸಿಡಿದೆದ್ದ KGF ತಂಡ: ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ

ತೆಲುಗು ಲೋಕಲ್ ಚಾನಲ್ ವಿರುದ್ಧ ಕೆಜಿಎಫ್ ತಂಡ ಆಕ್ರೋಶ ಹೊರಹಾಕಿದೆ. ಅಲ್ಲದೆ ಆ ಚಾನಲ್ ವಿರುದ್ಧ ಕಾನೂನು ಬದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಅಷ್ಟಕು ಆಗಿದ್ದೇನೆಂದರೆ, ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಕನ್ನಡದ ಸಿನಿಮಾ ಕೆಜಿಎಫ್ ಅನ್ನು ತೆಲುಗು ಲೋಕಲ್ ಚಾನಲ್ ಒಂದರಲ್ಲಿ ಅಕ್ರಮವಾಗಿ ಪ್ರಸಾರ ಮಾಡಿದೆ.

Recommended Video

ಮಕ್ಕಳೊಂದಿಗೆ KGF ನಿರ್ದೇಶಕ ಪ್ರಶಾಂತ್ ನೀಲ್ ಜಬರ್ದಸ್ತ್ ಫೃಟ್ | Prashanth Neel | KGF 2

ಇನ್ನೂ ತೆಲುಗು ಟಿವಿ ರೈಟ್ಸ್ ಸೇಲ್ ಆಗಿಲ್ಲ. ಆಗಲೆ ಲೋಕಲ್ ಚಾನೆಲ್ ಮಾಡಿದ ಕೆಲಸಕ್ಕೆ ಚಿತ್ರತಂಡ ಕೆಂಡಾಮಂಡಲವಾಗಿದೆ. ಈ ಬಗ್ಗೆ ಹೊಂಬಾಳೆ ಬ್ಯಾನರ್ ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ. ಮುಂದೆ ಓದಿ..

ತೆಲುಗಿನ 'Every' ಚಾನಲ್ ನಲ್ಲಿ ಪ್ರಸಾರ

ತೆಲುಗಿನ 'Every' ಚಾನಲ್ ನಲ್ಲಿ ಪ್ರಸಾರ

ತೆಲುಗಿನ 'ಎವರಿ' ಎನ್ನುವ ಲೋಕಲ್ ಚಾನಲ್ ಈ ಕೆಲಸ ಮಾಡಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸ್ಕ್ರೀನ್ ಶಾಟ್ ಮತ್ತು ವಿಡಿಯೋವನ್ನು ಮಾಡಿಕೊಂಡಿದೆ ಚಿತ್ರತಂಡ. ಇನ್ನೂ ಸಹ ಟಿವಿ ರೈಟ್ಸ್ ಸೆಲ್ ಆಗಿಲ್ಲ, ಮಾತು ಕತೆ ಹಂತದಲ್ಲಿರುವಾಗಲೆ ಕೆಜಿಎಫ್ ಚಿತ್ರವನ್ನು ಲೋಕಲ್ ಚಾನಲ್ ನಲ್ಲಿ ಹಾಕಿರುವುದು ಬ್ಯುಸಿನೆಸ್ ಗೆ ದೊಡ್ಡ ಹೊಡೆತ ಬೀಳಲಿದೆ. ಹಾಗಾಗಿ ಚಿತ್ರತಂಡ ಆ ಚಾನಲ್ ವಿರುದ್ಧ ಕಾನೂನುಬದ್ಧ ಹೋರಾಟ ಮಾಡಲು ಮುಂದಾಗಿದೆ.

ಕಾರ್ತಿಕ್ ಗೌಡ ಟ್ವೀಟ್

ಕಾರ್ತಿಕ್ ಗೌಡ ಟ್ವೀಟ್

ಈ ಬಗ್ಗೆ ಕಾರ್ತಿ ಗೌಡ ಹೇಳಿರುವುದು ಹೀಗೆ "ತೆಲುಗು ಲೋಕಲ್ ಚಾನಲ್ ಆಕ್ರಮವಾಗಿ ಪ್ರಸಾರಮಾಡಿದೆ. ನಾವು ಚಾನಲ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರ ವಿರುದ್ಧ ಕಾನೂನುಬದ್ಧ ಹೋರಾಟ ಮಾಡುತ್ತೇವೆ. ಇನ್ನೂ ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿಲ್ಲ. ಮಾತುಕತೆ ಹಂತದಲ್ಲಿದೆ. ಆದರೆ ಆಗಲೆ ಕೇಬಲ್ ಚಾನಲ್ ಈ ಕೆಲಸ ಮಾಡಿದೆ. ಇದಕ್ಕೆ ನಮ್ಮ ಬಳಿ ಪುರಾವೆಗಳಿವೆ. ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳು ಇದೆ" ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ.

ಕಾರ್ತಿಕ್ ಗೌಡ ಟ್ವೀಟ್ ಗೆ ನೆಟ್ಟಿಗರ ಪ್ರತಿಕ್ರಿಯೆ

ಕಾರ್ತಿಕ್ ಗೌಡ ಟ್ವೀಟ್ ಗೆ ನೆಟ್ಟಿಗರ ಪ್ರತಿಕ್ರಿಯೆ

ಕಾರ್ತಿಕ್ ಗೌಡ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ವಿವಿದ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. "ಸಿನಿಮಾ ರಿಲೀಸ್ ಆಗಿ 1.5 ವರ್ಷವಾಗುತ್ತ ಬಂತು. ಇನ್ನೂ ಟಿವಿ ರೈಟ್ಸ್ ಮಾರಾಟ ಮಾಡಿಲ್ಲ ಅಂದರೆ ಹೀಗೆ ಆಗುತ್ತೆ". ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕಾರ್ತಿಕ್ ಗೌಡ "ಓ ನನಗೆ ಗೊತ್ತಿರಲೇ ಇಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ. ಇನ್ನೂ ಸಾಕಷ್ಟು ಮಂದಿ ಈಗಾಗಲೆ ಅನೇಕ ಲೋಕಲ್ ಚಾನಲ್ ಗಳಲ್ಲಿ ಸಿನಿಮಾ ಪ್ರಸಾರವಾಗಿದೆ. ಇದು ಮೊದಲೇನಲ್ಲ ಎಂದು ಹೇಳುತ್ತಿದ್ದಾರೆ.

ಆಕ್ಟೋಬರ್ 23ಕ್ಕೆ ಕೆಜಿಎಫ್-2 ರಿಲೀಸ್

ಆಕ್ಟೋಬರ್ 23ಕ್ಕೆ ಕೆಜಿಎಫ್-2 ರಿಲೀಸ್

ಕೆಜಿಎಫ್-2 ಸಿನಿಮಾ ಈ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದೆ. ಈಗಾಗಲೆ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಡಿಸೆಂಬರ್ ಗೆ ಪೋಸ್ಟ್ ಪೋನ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

More from Filmibeat

English summary
Telugu local channel playing KGF movie illegally. KGF team Outrage against Telugu local channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X