For Quick Alerts
  ALLOW NOTIFICATIONS  
  For Daily Alerts

  ರಾವ್ ರಮೇಶ್ ಪಾತ್ರದಿಂದ ಕೆಜಿಎಫ್ ಚಾಪ್ಟರ್ 2 ಕಥೆಗೆ ಟ್ವಿಸ್ಟ್

  |

  2018ರಲ್ಲಿ ತೆರೆಕಂಡಿದ್ದ ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯ್ ನರಾಚಿ ರಾಜ ಗರುಡನನ್ನು ಹೊಡೆದುರುಳಿಸಿ ತಾನು 'ಸಾಮ್ರಾಟ' ಆಗುವತ್ತಾ ಹೆಜ್ಜೆಯಿಟ್ಟಿದ್ದ.. ಈಗ ಕೆಜಿಎಫ್‌ಗೆ ತಾನೇ ಅಧಿಪತಿ ಆಗ್ತಾನಾ ಅಥವಾ ಕೆಜಿಎಫ್‌ಗಾಗಿ ಹೊಂಚು ಹಾಕಿ ಕುಳಿತಿದ್ದ ಶತ್ರುಗಳಿಗೆ ಬಿಟ್ಟು ಕೊಡ್ತಾನೆ ಎನ್ನುವುದು ಚಾಪ್ಟರ್ 2ರ ಕಥೆ ಎನ್ನುವುದು ಸಾಮಾನ್ಯ ಪ್ರೇಕ್ಷಕರ ಲೆಕ್ಕಾಚಾರ. ಆದರೆ, ಕೆಜಿಎಫ್ ಎರಡರಲ್ಲಿ ಇದನ್ನು ಮೀರಿದ ಚಿತ್ರಕಥೆ ಹೆಣೆಯಲಾಗಿದೆ ಎನ್ನುವುದು ಕುತೂಹಲ ಹೆಚ್ಚಿಸಿದೆ.

  ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರೈ ಚಾಪ್ಟರ್ 2ರಲ್ಲಿ ಹೊಸ ಮುಖಗಳು. ಇದರ ಜೊತೆಗೆ ತೆಲುಗಿನ ಖ್ಯಾತ ಪೋಷಕ ನಟ ರಾವ್ ರಮೇಶ್ ಸಹ ಎಂಟ್ರಿಯಾಗಿರುವುದು ಈ ಹಿಂದೆಯೇ ವರದಿಯಾಗಿದೆ. ಆದರೆ ರಾವ್ ರಮೇಶ್ ಪಾತ್ರವೇನು? ಕೆಜಿಎಫ್‌ನಲ್ಲಿ ಈ ಪಾತ್ರ ಎಷ್ಟು ಪರಿಣಾಮ ಬೀರಲಿದೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಈಗ ಕೊಟ್ಟಿರುವ ಸುಳಿವು ಗಮನಿಸಿದರೆ ರಾವ್ ರಮೇಶ್ ಪಾತ್ರದಿಂದ ಕೆಜಿಎಫ್ ಚಾಪ್ಟರ್ 2 ಕಥೆ ಮತ್ತಷ್ಟು ರೋಚಕವಾಗಿರಲಿದೆ. ಮುಂದೆ ಓದಿ....

  ಭಾರತದಲ್ಲಿಯೇ ಅತಿ ಹೆಚ್ಚು ಜನ ನೋಡಲು ಕಾಯುತ್ತಿರುವ ಸಿನಿಮಾ ಕೆಜಿಎಫ್ 2!ಭಾರತದಲ್ಲಿಯೇ ಅತಿ ಹೆಚ್ಚು ಜನ ನೋಡಲು ಕಾಯುತ್ತಿರುವ ಸಿನಿಮಾ ಕೆಜಿಎಫ್ 2!

  ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

  ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

  ಮೇ 25 ತೆಲುಗು ನಟ ರಾವ್ ರಮೇಶ್ ಹುಟ್ಟುಹಬ್ಬ. ಜನುಮದಿನದ ಪ್ರಯುಕ್ತ ಕೆಜಿಎಫ್ ಚಿತ್ರತಂಡ ರಾವ್ ರಮೇಶ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದೆ. ಜೊತೆಗೆ ರಮೇಶ್ ಅವರ ಪಾತ್ರ ಏನೆಂದು ಬಹಿರಂಗಪಡಿಸಿದೆ. ಈ ಮೂಲಕ ಕೆಜಿಎಫ್ ಚಿತ್ರದಲ್ಲಿ ತೆಲುಗು ನಟನ ಪಾತ್ರ ಏನು ಎಂದು ಕೇಳುತ್ತಿದ್ದವರಿಗೆ ಉತ್ತರ ಸಿಕ್ಕಿದೆ.

  ಕೆಜಿಎಫ್‌ಗೆ ಸಿಬಿಐ ಪ್ರವೇಶ

  ಕೆಜಿಎಫ್‌ಗೆ ಸಿಬಿಐ ಪ್ರವೇಶ

  ಕೆಜಿಎಫ್ ಚಿತ್ರದಲ್ಲಿ ರಾವ್ ರಮೇಶ್ ಸಿಬಿಐ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಿಗೆ ರಾವ್ ಅವರದ್ದು ಪ್ರಮುಖ ಪಾತ್ರ ಎನ್ನುವುದು ಖಾತ್ರಿಯಾಗಿದೆ. ಸಿಬಿಐ ಪ್ರವೇಶದಿಂದ ಕೆಜಿಎಫ್ ಕಥೆಯಲ್ಲಿ ರೋಚಕತೆ ಹೆಚ್ಚಿದೆ. ರಾವ್ ರಮೇಶ್ ಈ ಚಿತ್ರದಲ್ಲಿ ಕೆಜಿಎಫ್ ರಕ್ಷಿಸಲು ಬಂದಿದ್ದಾರೋ ಅಥವಾ ರಾಕಿ ಭಾಯ್ ಹಿಡಿಯಲು ಬಂದಿದ್ದಾರೋ ಎನ್ನುವುದು ಸಿನಿಮಾದಲ್ಲಿ ನೋಡಬೇಕಿದೆ.

  ಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್: ಒಂದು ಖುಷಿ, ಇನ್ನೊಂದು ನಿರಾಸೆಕೆಜಿಎಫ್ ಚಾಪ್ಟರ್ 2 ಅಪ್‌ಡೇಟ್: ಒಂದು ಖುಷಿ, ಇನ್ನೊಂದು ನಿರಾಸೆ

  ಪೋಸ್ಟ್ ಪ್ರೊಡಕ್ಷನ್ ಮುಗಿದಿದೆ

  ಪೋಸ್ಟ್ ಪ್ರೊಡಕ್ಷನ್ ಮುಗಿದಿದೆ

  ಇತ್ತೀಚಿಗಷ್ಟೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ ಎಂಬ ವಿಷಯ ಬಹಿರಂಗವಾಗಿದೆ. ಜುಲೈ 16ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಈ ಹಿಂದೆ ಅಧಿಕೃತವಾಗಿ ಪ್ರಕಟಿಸಿತ್ತು. ಆದ್ರೀಗ, ಕೋವಿಡ್ ಭೀತಿಯಲ್ಲಿ ರಿಲೀಸ್ ದಿನಾಂಕ ಮುಂದೂಡುವ ಸಾಧ್ಯತೆ ಹೆಚ್ಚಿದೆ.

  ತೆಲುಗಿನಲ್ಲಿ ಪ್ರಶಾಂತ್ ನೀಲ್ ಗೆ ಸಿಕ್ತಿದೆ ಕೋಟಿ ಕೋಟಿ ಸಂಭಾವನೆ | Filmibeat Kannada
  ಪ್ಯಾನ್ ಇಂಡಿಯಾ ರಿಲೀಸ್

  ಪ್ಯಾನ್ ಇಂಡಿಯಾ ರಿಲೀಸ್

  ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2ರಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಮಾಳವಿಕಾ ಅವಿನಾಶ್ ಸೇರಿದಂತೆ ದೊಡ್ಡ ತಾರಬಳಗ ಇದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  English summary
  KGF Team wishes telugu actor Rao Ramesh on his birthday; revealed his character name in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X