ಯಶ್ ಹುಟ್ಟುಹಬ್ಬಕ್ಕೆ ಈಗಿನಿಂದಲೇ ತಯಾರಿ, ಸ್ಪೆಷಲ್ ಏನು?
Recommended Video

ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳಿಗೆ ಈ ವರ್ಷ ದೊಡ್ಡ ನಿರಾಸೆಯಾಯಿತು. ಯಾಕಂದ್ರೆ, ನಿರೀಕ್ಷೆಯಂತೆ ಈ ವರ್ಷ ಬಿಡುಗಡೆಯಾಗಬೇಕಿದ್ದ 'ಕೆಜಿಎಫ್' ಬರಲೇ ಇಲ್ಲ. ಇತ್ತ ಟೀಸರ್, ಟ್ರೈಲರ್ ಕೂಡ ರಿಲೀಸ್ ಆಗಿಲ್ಲ. ಆದ್ರೆ, ಮೇಕಿಂಗ್ ಚಿತ್ರಗಳಿಂದ ಕುತೂಹಲ ಮಾತ್ರ ದಿನದಿಂದ ಹೆಚ್ಚು ಮಾಡುತ್ತಲೇ ಇದೆ.
ಈಗ ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರತಂಡ ತಯಾರಿ ನಡೆಸಿದ್ದು, 'ಕೆಜಿಎಫ್' ಚಿತ್ರದಿಂದ ಭರ್ಜರಿ ಗಿಫ್ಟ್ ನೀಡಲು ಸಿದ್ದವಾಗಿದ್ದಾರೆ. ಜನವರಿ 8 ರಂದು ಯಶ್ ಅವರು ಹುಟ್ಟುಹಬ್ಬವಿದ್ದು, ಅದೇ ದಿನ 'ಕೆಜಿಎಫ್' ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ಆಗಿದೆ. ಅದರಂತೆ ಟೀಸರ್ ಕೂಡ ಬರಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗುತ್ತಿರುವ 'ಕೆಜಿಎಫ್' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ನಿಂದ ಮಾರ್ಕೆಟ್ ಹೆಚ್ಚಿಕೊಂಡಿರುವ ಯಶ್ ಸಿನಿಮಾ, ಕಲೆಕ್ಷನ್ ಮೇಲು ಕಣ್ಣಿಟ್ಟಿದೆ.
ಇನ್ನುಳಿದಂತೆ ಮಾರ್ಚ್ ತಿಂಗಳಲ್ಲಿ 'ಕೆಜಿಎಫ್' ಚಿತ್ರವನ್ನ ತೆರೆ ಮೇಲೆ ತರಬೇಕು ಎಂಬ ಗುರಿ ಹೊಂದಿದೆ ಚಿತ್ರತಂಡ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications










