'ಕೆಜಿಎಫ್' ಟಿಕೆಟ್ ಬುಕ್ಕಿಂಗ್ ಓಪನ್ ಆಗ್ತಿದೆ, ಗೆಟ್ ರೆಡಿ.!

Recommended Video

KGF kannada movie : KGF ಟಿಕೆಟ್ ಬೇಕಾ..? ಹೀಗೆ ಮಾಡಿ..! | FILMIBEAT KANNADA

'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗ್ತಿದೆ. ಈ ಸಿನಿಮಾವನ್ನ ಮೊದಲ ದಿನ ಮೊದಲ ಶೋ ನೋಡ್ಬೇಕು ಅಂತ ಚಿತ್ರಪ್ರೇಮಿಗಳು ಕಾಯ್ತಾ ಕೂತಿದ್ದಾರೆ.

ಬಿಡುಗಡೆಗೆ ಕೇವಲ ಒಂಭತ್ತು ದಿನ ಮಾತ್ರ ಬಾಕಿದೆ. ಈಗಾಗಲೇ ಯಶ್ ಅಭಿಮಾನಿಗಳು ಹಾಗೂ ಕೆಜಿಎಫ್ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ಯಾ? ಅಥವಾ ಯಾವ ಥಿಯೇಟರ್ ನಲ್ಲಿ ರಿಲೀಸ್ ಆಗ್ತಿದೆ ಎಂದು ಹುಡುಕಾಡ್ತಿದ್ದಾರೆ.

ನಿರೀಕ್ಷೆಯಂತೆ ಇಷ್ಟೋತ್ತಿಗಾಗಲೇ ಕೆಜಿಎಫ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕೊಡಬೇಕಿತ್ತು. ಆದ್ರೆ, ಅಂತಹ ಸುಳಿವು ಸಿಕ್ಕಿರಲಿಲ್ಲ. ಇದೀಗ, ಕೆಜಿಎಫ್ ಟಿಕೆಟ್ ಬುಕ್ ಮಾಡೋ ಟೈಂ ಬಂದಿದೆ. ಬಿಡುಗಡೆಯ ಒಂದು ವಾರಕ್ಕೂ ಮುಂದೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಯಾವತ್ತು ಎಂದು ತಿಳಿಯಲು ಮುಂದೆ ಓದಿ....

ಡಿಸೆಂಬರ್ 16ಕ್ಕೆ ಆಲ್ ಲೈನ್

ಡಿಸೆಂಬರ್ 16ಕ್ಕೆ ಆಲ್ ಲೈನ್

ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದೆ. ಒಂದೂ ವಾರದ ಮುಂದೆ ಅಂದ್ರೆ, ಡಿಸೆಂಬರ್ 16 ರಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿ ಈಗ ಹೊರಬಿದ್ದಿದೆ. ಭಾರತದೆಲ್ಲೆಡೆ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಮೊದಲ ದಿನ ಟಿಕೆಟ್ ಸಿಗುವುದೇ ಅನುಮಾನ ಮೂಡಿಸಿದೆ.

81 ಸಾವಿರ ಜನ ಆಸಕ್ತಿ ತೋರಿದ್ದಾರೆ

81 ಸಾವಿರ ಜನ ಆಸಕ್ತಿ ತೋರಿದ್ದಾರೆ

ಸದ್ಯ, ಬುಕ್ ಮೈ ಶೋನಲ್ಲಿ ಕೆಜಿಎಫ್ ಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. 81494 ಜನ ಕೆಜಿಎಫ್ ಚಿತ್ರವನ್ನ ನೋಡಲು ಬಯಸಿದ್ದಾರೆ. ಸಿನಿಮಾ ರಿಲೀಸ್ ಗೂ ಮುಂಚೆಯೇ ಇಷ್ಟೊಂದು ಕ್ರೇಜ್ ಹೊಂದಿರುವ ಸಿನಿಮಾ ಕೆಜಿಎಫ್ ಎಂಬುದಕ್ಕೆ ಇದು ಕೂಡ ಸಾಕ್ಷಿ.

ಟಿಕೆಟ್ ಬೆಲೆ ಎಷ್ಟಿರಬಹುದು?

ಟಿಕೆಟ್ ಬೆಲೆ ಎಷ್ಟಿರಬಹುದು?

ಈ ಹಿಂದೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಿದ್ದ 'ದಿ ವಿಲನ್' ಚಿತ್ರದ ಮೊದಲ ದಿನದ ಟಿಕೆಟ್ ಬೆಲೆ ದುಬಾರಿಯಾಗಿತ್ತು. 400 ರಿಂದ 1000 ವರೆಗೂ ನಿಗದಿಯಾಗಿತ್ತು. ಆ ಚಿತ್ರದಂತೆ ಕೆಜಿಎಫ್ ಕೂಡ ದೊಡ್ಡ ಮಟ್ಟದ ಭರವಸೆ ಮೂಡಿಸಿದೆ. ಹಾಗಾಗಿ, ಕೆಜಿಎಫ್ ಚಿತ್ರದ ಮೊದಲ ಮೂರು ದಿನ ಟಿಕೆಟ್ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಾಣಬಹುದು.

ಒಂದು ದಿನ ಮುಂಚೆಯೇ ಕೆಜಿಎಫ್ ರಿಲೀಸ್

ಒಂದು ದಿನ ಮುಂಚೆಯೇ ಕೆಜಿಎಫ್ ರಿಲೀಸ್

ಭಾರತದಲ್ಲಿ ಕೆಜಿಎಫ್ ಡಿಸೆಂಬರ್ 21 ರಂದು ತೆರೆಕಾಣುತ್ತಿದೆ. ಆದ್ರೆ, ಹೊರದೇಶದಲ್ಲಿ, ಅಂದ್ರೆ ಯುಎಸ್ ಮತ್ತು ಕೆನೆಡಾದಲ್ಲಿ ಡಿಸೆಂಬರ್ 20 ರಂದೇ ಶೋ ಕಾಣಲಿದೆ. ಇದು ನಿಜಕ್ಕೂ ಅಲ್ಲಿನ ಕನ್ನಡಿಗರಿಗೆ ವಿಶೇಷವೇ ಸರಿ.

More from Filmibeat

English summary
Rocking star Yash starrer KGF movie advanced ticket booking will start from december 16th, and Film Will be release on december 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X