ಕೆಜಿಎಫ್ ಟೈಮ್ಸ್: ಪ್ರೀತಿ ಅಥವಾ ಅಧಿಕಾರ? ಯಾವ ಕಡೆ ರಾಕಿ ಭಾಯ್ ನಡೆ?

ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಆಗಲಿದೆ.

Recommended Video

ಇದು KGF 2 ತಂಡದ ನೆಕ್ಸ್ಟ್ ಲೆವೆಲ್ ಪ್ರಮೋಷನ್ | Kgf news Paper Filmibeat Kannada

ಟೀಸರ್ ರಿಲೀಸ್‌ಗೂ ಮುಂಚೆ ಹೊಂಬಾಳೆ ಫಿಲಂಸ್ ಕೆಜಿಎಫ್ ಟೈಮ್ಸ್ ಎಂಬ ವಿಶೇಷ ಸಂಚಿಕೆಯ ಪತ್ರಿಕೆಯ ಮೂಲಕ ಪ್ರಚಾರ ಆರಂಭಿಸಿದೆ. ಪ್ರತಿದಿನವೂ ಕೆಜಿಎಫ್ ಸಿನಿಮಾಗೆ ಸಂಬಂಧಿಸಿದಂತೆ ವಿಚಾರಗಳುಳ್ಳ ಮುಖಪುಟವನ್ನು ಹಂಚಿಕೊಳ್ಳಲಾಗುತ್ತಿದೆ.

ಕೆಜಿಎಫ್ ಟೈಮ್ಸ್ ಪತ್ರಿಕೆ ಇಂದಿನ ಮುಖ್ಯಾಂಶ ''ರಾಕಿಯ ನಡೆ ಯಾವುದರೆಡೆ? ಪ್ರೀತಿ ಮತ್ತು ಅಧಿಕಾರ?'' ಎಂದು ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.

 KGF TIMES Special Edition Newspaper January 5th Edition

ಚಾಪ್ಟರ್ 2ನಲ್ಲಿ ರಾಕಿ ಭಾಯ್ ಕಥೆ ಏನು? ರೀನಾ ಜೊತೆಗಿನ ಪ್ರೇಮ ಕಥೆ ಏನು? ಕೆಜಿಎಫ್‌ಗೆ ಕಿಂಗ್ ಆಗ್ತಾರಾ ಹೀಗೆ ಹಲವು ವಿಚಾರಗಳೊಂದಿಗೆ ಕುತೂಹಲ ಮೂಡಿಸಿದೆ. ಇದೇ ಅಂಶಗಳನ್ನು ಹೈಲೈಟ್ ಮಾಡಿ ಚಿತ್ರತಂಡ ಸಹ ಪ್ರಚಾರ ಮಾಡುತ್ತಿದೆ.

ಕೆಜಿಎಫ್ ಚಾಪ್ಟರ್ 2ನಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಪ್ರಧಾನ ಮಂತ್ರಿ ರಿಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ. ರಿಮಿಕಾ ಸೇನ್ ಗೆಟಪ್ ರಿವಿಲ್ ಮಾಡುವಂತಹ ಪೋಸ್ಟರ್‌ವೊಂದು ವೈರಲ್ ಆಗಿದೆ.

 KGF TIMES Special Edition Newspaper January 5th Edition

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಬಾಕಿ ಉಳಿದಿರುವ ಕೆಲವು ದೃಶ್ಯಗಳನ್ನು ಮಾತ್ರ ಸೆರೆಹಿಡಿಯಲಾಗುತ್ತಿದ್ದು, ಈ ಜನವರಿ ಎರಡನೇ ವಾರ ಅಥವಾ ಮೂರನೇ ವಾರದಲ್ಲಿ ಕುಂಬಳಕಾಯಿ ಹೊಡೆಯಲಿದ್ದಾರಂತೆ. ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್ ಸೇರಿದಂತೆ ಹಲವು ಹೊಸ ಮುಖಗಳು ಈ ಚಿತ್ರದಲ್ಲಿ ಇರಲಿದೆ.

More from Filmibeat

English summary
Hombale Films Shares KGF TIMES Special Edition Newspaper January 5th Edition in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X