For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಟೈಮ್ಸ್: ರಾಕಿಯ ಹಿಟ್‌ಲಿಸ್ಟ್‌ನಲ್ಲಿ ಮುಂದಿನವರು ಯಾರು?

  |

  ರಾಕಿ ಗರುಡನನ್ನು ಮಾರಿ ಜಾತ್ರೆಯಲ್ಲಿ ಕೊಂದ ನಂತರ ಎಲ್ಲ ಕಣ್ಣು ಕೆಜಿಎಫ್ ಮೇಲಿದೆ. ಅದರ ಮೇಲೆ ಹಿಡಿತ ಸಾಧಿಸಲು ಯಾರ್ಯಾರು ಪ್ರಯತ್ನ ಹೇಗೆ ನಡೆಯಲಿದೆ? ಆಂಡ್ರ್ಯೂಸ್, ಕಮಲ್, ರಾಜೇಂದ್ರ ದೇಸಾಯಿ ಮತ್ತು ದಯಾ ರಾಕಿಯೊಂದಿಗೆ ಕೈ ಜೋಡಿಸುತ್ತಾರ? ಅಥವಾ ಅವನ ಬೆನ್ನಿಗೆ ಚೂರಿ ಹಾಕುತ್ತಾರ?

  ಕಥೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟ ಹೊಂಬಾಳೆ ಫಿಲಂ | KGF 2 | Prashanth Neel Filmibeat Kannada

  ರಾಜಕೀಯದ ಸಮ್ಮಿಶ್ರ ಶಕ್ತಿಗಳಾದ ರಮಿಕಾ ಸೇನ್ ಮತ್ತು ಗುರುಪಾಂಡಿಯನ್, ನರಾಚಿಯ ಗುಲಾಮರ ಪ್ರಾಣ ಉಳಿಸಲು ಸೇರಿಕೊಳ್ಳುತ್ತಾರ ಅಥವಾ ಅವರ ವೈಯಕ್ತಿಕ ಉದ್ದೇಶದ ದಾಳವನ್ನು ಉರುಳಿಸುತ್ತಾರ? ಪ್ರತಿಸ್ಪರ್ಧಿಗಳಾದ ಶೆಟ್ಟಿ ಮತ್ತು ಜಾನ್ ತಮ್ಮ ಅಧಿಪತಿ ಗರುಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಧೀರನ ಜೊತೆ ಸೇರುತ್ತಾರಾ?

  ಟೀಸರ್ ನಿರೀಕ್ಷೆಯಲ್ಲಿದ್ದವರಿಗೆ ಊಹೆನೇ ಮಾಡದಂತ ಸರ್ಪ್ರೈಸ್ ನೀಡಿದ ಕೆಜಿಎಫ್

  ಇದು ಕೆಜಿಎಫ್ ಟೈಮ್ಸ್ ಅಂತಿಮ ಆವೃತ್ತಿಯ ಪ್ರಮುಖ ಅಂಶಗಳು. ಕೆಜಿಎಫ್ ಚಾಪ್ಟರ್ 2 ಕುರಿತು ಕಥೆ ಲೀಡ್ ಕೊಟ್ಟಿದ್ದಾರೆ. ಈ ಆಧಾರದಲ್ಲಿ ಸಿನಿಮಾ ನಡೆಯುವ ಸಾಧ್ಯತೆ ಹೆಚ್ಚಿದೆ.

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಜನವರಿ 8 ರಂದು ಬಿಡುಗಡೆಯಾಗಲಿದೆ. ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಬರ್ತಿದೆ. ಯಶ್, ಸಂಜಯ್ ದತ್ ಅವರ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಬಾಕಿ ಉಳಿದಿರುವ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆಯಂತೆ.

  ಜನವರಿಯಲ್ಲಿ ಪೂರ್ಣ ಕೆಲಸ ಮುಗಿಸಿ ಕುಂಬಳಕಾಯಿ ಹೊಡೆಯಲು ಕೆಜಿಎಫ್ ತಂಡ ನಿರ್ಧರಿಸಿದೆ. ಸದ್ಯಕ್ಕೆ ಚಿತ್ರ ಬಿಡುಗಡೆ ಕುರಿತು ಸ್ಪಷ್ಟನೆ ಇಲ್ಲ.

  ಕೆಜಿಎಫ್ ಟೈಮ್ಸ್: ಪ್ರೀತಿ ಅಥವಾ ಅಧಿಕಾರ? ಯಾವ ಕಡೆ ರಾಕಿ ಭಾಯ್ ನಡೆ?

  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಲಿದೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್ ಚಾಪ್ಟರ್ 2ರಲ್ಲಿ ಹೊಸ ಕಲಾವಿದರು ಎಂಟ್ರಿಯಾಗಿದ್ದಾರೆ.

  English summary
  Hombale Films Shared KGF TIMES Special Edition Newspaper January 7th Volume 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X