ಫೆಬ್ರವರಿ 5 ರಂದು ಅಮೇಜಾನ್ ನಲ್ಲಿ ಕೆಜಿಎಫ್ ರಿಲೀಸ್
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಯಾದ ಐದು ಭಾಷೆಯಲ್ಲೂ ಅತ್ಯುತ್ತಮ ಪ್ರದರ್ಶನ ಕಂಡಿದೆ ಮತ್ತು ಇನ್ನು ಕಾಣುತ್ತಿದೆ. ಕೆಜಿಎಫ್ ಚಿತ್ರದ ಡಿಜಿಟಲ್ ಹಕ್ಕು ಅತಿ ದೊಡ್ಡ ಬೆಲೆಗೆ ಸೇಲ್ ಆಗಿದೆ ಎಂದು ಈ ಹಿಂದೆಯೇ ವರದಿಯಾಗಿತ್ತು.
ಇದೀಗ, ಕೆಜಿಎಫ್ ಸಿನಿಮಾ ಅಧಿಕೃತವಾಗಿ ಖ್ಯಾತ ಸಮಾಜಿಕ ಜಾಲತಾಣ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಫೆಬ್ರವರಿ 5 ರಂದು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನವಾಗಲಿದೆ.
ಸದ್ಯದ ಮಾಹಿತಿ ಪ್ರಕಾರ, ಅಮೇಜಾನ್ ಪ್ರೈಂ ವಿಡಿಯೋ ಸುಮಾರು 18 ಕೋಟಿ ರೂಪಾಯಿ ನೀಡಿ ಕೆಜಿಎಫ್ ಸಿನಿಮಾದ ನಾಲ್ಕು ಭಾಷೆಯ ಹಕ್ಕು ಖರೀದಿಸಿದೆಯಂತೆ.

ಹಿಂದಿ ಬಿಟ್ಟು ನಾಲ್ಕು ಭಾಷೆಯಲ್ಲೂ ನಾಳೆ ರಿಲೀಸ್ ಆಗ್ತಿದೆ. ಇನ್ನೊಂದೆಡೆ ಸೋನಿ ಮ್ಯಾಕ್ಸ್ ಚಾನಲ್ ನಲ್ಲಿ ಕೆಜಿಎಫ್ ಹಿಂದಿ ಸಿನಿಮಾ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದ್ದು, ಹಾಗಾಗಿ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ ರಿಲೀಸ್ ಗೆ ತಡೆದಿರಬಹುದು.
ಇನ್ನುಳಿದಂತೆ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಬಿಸಿನೆಸ್ ಮಾಡಿದೆ ಎಂಬ ಮಾತಿದೆ. ಯಶ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದರು. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ಹೊಂಬಾಳೆ ಫಿಲಂ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದರು.


Click it and Unblock the Notifications











