ಇಂದು ಸಂಜೆ ಕೆಜಿಎಫ್ ತಂಡದಿಂದ ಇನ್ನೊಂದು ಸರ್ಪ್ರೈಸ್.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ, ದಿನದಿಂದ ದಿನಕ್ಕೆ ಸರ್ಪ್ರೈಸ್ ಕೊಡ್ತಾನೆ ಇದೆ. ಇಂದು ಕೆಜಿಎಫ್ ಚಿತ್ರದ ಎರಡನೇ ಟ್ರೈಲರ್ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಎರಡನೇ ಟ್ರೈಲರ್ ನೋಡಿದ ಅಭಿಮಾನಿಗಳು, ಕನ್ನಡದಲ್ಲೂ ಬರಬೇಕಿತ್ತು ಎಂಬ ಬೇಡಿಕೆ ಇಟ್ಟರು.

ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದ್ರೆ, ಹಿಂದಿ ವರ್ಷನ್ ಟ್ರೈಲರ್ ಅದ್ಯಾವಾಗ ದೊಡ್ಡ ಸದ್ದು ಮಾಡಿತೋ, ಅದರ ಬೆನ್ನಲ್ಲೆ ಈಗ ಕೆಜಿಎಫ್ ಎರಡನೇ ಟ್ರೈಲರ್ ಕನ್ನಡದಲ್ಲೂ ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ.

KGF Trailer 2 kannada will release today

ಹೌದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಕೆಜಿಎಫ್ ಎರಡನೇ ಟ್ರೈಲರ್ ಬರ್ತಿದೆ. ಈ ಬಗ್ಗೆ ಖುದ್ದು ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ. ಪಕ್ಕಾ ಸಮಯ ಹೇಳದಿದ್ದರೂ, ಇಂದು (ಡಿಸೆಂಬರ್ 5) ಸಂಜೆ ಎಂದು ಹೇಳಿರುವುದು ಕುತೂಹಲದಿಂದ ಕಾಯುವಂತೆ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾ ಇದೇ ಡಿಸೆಂಬರ್ 21 ರಂದು ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.

More from Filmibeat

English summary
kannada actor, rocking star yash starrer KGF movie second trailer in kannada language will release today only.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X