ಇತಿಹಾಸ ನಿರ್ಮಿಸಿದ ಕೆಜಿಎಫ್, 1 ಕೋಟಿ ದಾಟಿದ ಟ್ರೈಲರ್ ವೀಕ್ಷಣೆ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಇರೋ ಬರೋ ದಾಖಲೆಗಳನ್ನ ತನ್ನ ಹೆಸರಿಗೆ ಬರೆಸಿಕೊಳ್ಳುತ್ತಿದೆ.
ದಾಖಲೆಗಳ ಪ್ರಕಾರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ವೀಕ್ಷಣೆ ಪಡೆದ ಟ್ರೈಲರ್ ಕೆಜಿಎಫ್ ಆಗಿ ಹೊರಹೊಮ್ಮಿದೆ. ನವೆಂಬರ್ 12 ರಂದು ಸಂಜೆ 6.30 ಗಂಟೆಗೆ 73 ಲಕ್ಷ ವೀಕ್ಷಕರ ಸಂಖ್ಯೆ ಹೊಂದಿದೆ.
ಆದ್ರೆ, ಕೆಜಿಎಫ್ ಹಿಂದಿಯ ಟ್ರೈಲರ್ ಒಂದು ಕೋಟಿ ದಾಟಿದೆ. ಹೌದು, ಹಿಂದಿ ವರ್ಷನ್ ಟ್ರೈಲರ್ ಗೆ ಭಾರಿ ಮೆಚ್ಚುಗೆ ಸಿಕ್ಕಿದ್ದು, 1 ಕೋಟಿ (10,186,957) ವೀಕ್ಷಕರ ಸಂಖ್ಯೆಯಾಗಿದೆ.

ಇನ್ನುಳಿದಂತೆ ತೆಲುಗು ವರ್ಷನ್ ಕೆಜಿಎಫ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ತೆಲುಗು ಟ್ರೈಲರ್ 46 ಲಕ್ಷ ವೀವ್ಸ್ ಪಡೆದುಕೊಂಡಿದೆ.
ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.


Click it and Unblock the Notifications











