ರಜನಿಯ '2.0' ಚಿತ್ರದ ಹಾದಿಯಲ್ಲಿ ಕನ್ನಡದ 'ಕೆಜಿಎಫ್'.!

Recommended Video

ರಜಿನಿಯ ಸಿನಿಮಾ ಹಾದಿಯಲ್ಲಿ ಯಶ್ ಕೆಜಿಎಫ್ ಸಿನಿಮಾ | Oneindia Kannada

ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ಅಭಿನಯಿಸಿರುವ '2.0' ಸಿನಿಮಾ ಇದೇ ತಿಂಗಳು 29ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇತ್ತೀಚಿಗಷ್ಟೆ '2.0' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚೆನ್ನೈನಲ್ಲಿ ಅದ್ಧೂರಿಯಾಗಿ ಈ ಕಾರ್ಯಕ್ರಮ ಮಾಡಲಾಯಿತು.

ಸದ್ಯ, ಭಾರತೀಯ ಚಿತ್ರರಂಗದಲ್ಲಿ '2.0' ಸಿನಿಮಾ ಬಹುದೊಡ್ಡ ಸದ್ದು ಮಾಡುತ್ತಿದ್ದು, 'ಬಾಹುಬಲಿ' ಸಿನಿಮಾ ಸೇರಿದಂತೆ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡುತ್ತೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

ಇಂತಹ ಸಮಯದಲ್ಲಿ ಅದೇ ಕ್ರೇಜ್, ಅದೇ ಅಬ್ಬರ, ಅದೇ ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸುವತ್ತಾ ಹೆಜ್ಜೆ ಹಾಕಿದೆ ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾ ಕೆಜಿಎಫ್. ಹಾಗ್ನೋಡಿದ್ರೆ, ರಜನಿಯ '2.0' ಸಿನಿಮಾದ ಹಾದಿಯಲ್ಲೇ ರಾಕಿಂಗ್ ಸ್ಟಾರ್ 'ಕೆಜಿಎಫ್' ಸಿನಿಮಾ ಕೂಡ ಸಾಗುತ್ತಿದೆ. ಏನಿದು ಸ್ಪೆಷಲ್ ಸ್ಟೋರಿ.? ಮುಂದೆ ಓದಿ.....

ಚೆನ್ನೈನಲ್ಲಿ ಸುದ್ದಿ ಮಾಡಿದ್ದ '2.0'

ಚೆನ್ನೈನಲ್ಲಿ ಸುದ್ದಿ ಮಾಡಿದ್ದ '2.0'

ಶನಿವಾರ ಚೆನ್ನೈನಲ್ಲಿ ನಡೆದ '2.0' ಚಿತ್ರದ ಟ್ರೈಲರ್ ಲಾಂಚ್ ತುಂಬಾ ವಿಶೇಷವಾಗಿತ್ತು. ಯಾಕಂದ್ರೆ, ಈ ಕಾರ್ಯಕ್ರಮಕ್ಕೆ ಆಲ್ ಇಂಡಿಯಾ ಮೀಡಿಯಾಗಳಿಗೆ ಆಹ್ವಾನ ನೀಡಲಾಗಿತ್ತು. ಸ್ವತಃ ಚಿತ್ರತಂಡವೇ ಬೇರೆ ಬೇರೆ ರಾಜ್ಯದ ಮಾಧ್ಯಮ ವರದಿಗಾರರಿಗೆ ಪ್ರಯಾಣದ ವೆಚ್ಚವನ್ನ ಭರಿಸಿ ಚೆನ್ನೈಗೆ ಕರೆಯಿಸಿಕೊಂಡಿತ್ತು. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯ ಮಾಧ್ಯಮದವರು ಚೆನ್ನೈಗೆ ಹೋಗಿದ್ದರು.

ಬೆಂಗಳೂರಿನಲ್ಲಿ 'ಕೆಜಿಎಫ್'

ಬೆಂಗಳೂರಿನಲ್ಲಿ 'ಕೆಜಿಎಫ್'

ಚೆನ್ನೈನಲ್ಲಿ '2.0' ಸಿನಿಮಾದ ಟ್ರೈಲರ್ ಬಿಡುಗಡೆಯಾದಂತೆ ಕನ್ನಡದ ಕೆಜಿಎಫ್ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಲಿದೆ. ನವೆಂಬರ್ 9 ರಂದು ಕೆಜಿಎಫ್ ಸಿನಿಮಾ ಟ್ರೈಲರ್ ರಿಲೀಸ್ ಆಗುತ್ತಿದ್ದು, ಎಲ್ಲಾ ಭಾಷೆಯ ಮಾಧ್ಯಮದವರು ಬೆಂಗಳೂರಿಗೆ ಆಗಮಿಸಲಿದ್ದಾರಂತೆ.

ಭಾರತದಲ್ಲೇ ಅಬ್ಬರಿಸುವ ಪ್ಲಾನ್.!

ಭಾರತದಲ್ಲೇ ಅಬ್ಬರಿಸುವ ಪ್ಲಾನ್.!

ಅಂದ್ಹಾಗೆ, ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಕನ್ನಡದ ಮಾತ್ರವಲ್ಲ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲೂ ತೆರೆಕಾಣುತ್ತಿದೆ. ಹೀಗಾಗಿ, ಕನ್ನಡದ ಸಿನಿಮಾವೊಂದು ಬಹುಭಾಷೆಯಲ್ಲಿ ಅಬ್ಬರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲು ಸಿದ್ಧವಾಗುತ್ತಿದೆ.

ಶಾರೂಖ್ ಗೆ ಶಾಕ್ ಕೊಡ್ತಾರಾ ಯಶ್.!

ಶಾರೂಖ್ ಗೆ ಶಾಕ್ ಕೊಡ್ತಾರಾ ಯಶ್.!

ಇನ್ನು ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಅದೇ ದಿನ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾನೂ ತೆರೆಗೆ ಬರ್ತಿರುವುದು ವಿಶೇಷ. ಹೀಗಾಗಿ, ಬಾಲಿವುಡ್ ನಲ್ಲಿ ಶಾರೂಖ್ ಸಿನಿಮಾಗೆ ಯಶ್ ಸಿನಿಮಾ ಶಾಕ್ ಕೊಡುತ್ತಾ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

More from Filmibeat

English summary
Rocking star yash starrer kgf trailer releases on the 9th of November at Bangalore with we hombalefilms, hosting the media from all the 5 industries.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X