'ಕೆ.ಜಿ.ಎಫ್' ಟ್ರೈಲರ್ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಯಶ್ ಕೊಟ್ಟ ಉತ್ತರ ಇದು...
Recommended Video

ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ 'ಕೆ.ಜಿ.ಎಫ್'. 'ಸಂತು ಸ್ಟ್ರೇಟ್ ಫಾರ್ವರ್ಡ್' ಸಿನಿಮಾದ ಬಳಿಕ ಯಶ್ ಹಸಿರು ನಿಶಾನೆ ತೋರಿಸಿದ್ದು ಇದೇ ಚಿತ್ರಕ್ಕೆ.
ಕಳೆದ ವರ್ಷದಿಂದ ಚಿತ್ರೀಕರಣ ಆಗುತ್ತಲೇ ಇದ್ದ 'ಕೆ.ಜಿ.ಎಫ್' ಶೂಟಿಂಗ್ ಮೊನ್ನೆ ಮೊನ್ನೆಯಷ್ಟೇ ಕಂಪ್ಲೀಟ್ ಆಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗಿರುವ ಸಿನಿಮಾ 'ಕೆ.ಜಿ.ಎಫ್'.

'ಉಗ್ರಂ' ಅಂತಹ ಹಿಟ್ ಸಿನಿಮಾ ಕೊಟ್ಟ ಪ್ರಶಾಂತ್ ನೀಲ್ 'ಕೆ.ಜಿ.ಎಫ್'ಗೆ ಆಕ್ಷನ್ ಕಟ್ ಹೇಳಿರುವ ಕಾರಣ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ಡಬಲ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇರುವ 'ಕೆ.ಜಿ.ಎಫ್' ಸಿನಿಮಾದ ಟ್ರೈಲರ್ ನೋಡಲು ಅಣ್ತಮ್ಮಂದಿರು ಕಾತರದಿಂದ ಕಾಯುತ್ತಿದ್ದಾರೆ.
''ಕೆ.ಜಿ.ಎಫ್' ಟ್ರೈಲರ್ ಯಾವಾಗ ರಿಲೀಸ್ ಆಗುತ್ತೆ.?'' ಅಂತ ಇತ್ತೀಚೆಗಷ್ಟೇ ಅಭಿಮಾನಿಯೊಬ್ಬರು ಯಶ್ ರನ್ನ ಕೇಳಿದ್ದರು. ಅದಕ್ಕೆ ಯಶ್ ಕೊಟ್ಟ ಉತ್ತರ - ''ಅಕ್ಟೋಬರ್ ನಲ್ಲಿ 'ಕೆ.ಜಿ.ಎಫ್' ಟ್ರೈಲರ್ ಬಿಡುಗಡೆ ಆಗುತ್ತೆ''

ಅಲ್ಲಿಗೆ, 'ಕೆ.ಜಿ.ಎಫ್' ಟ್ರೈಲರ್ ಅಕ್ಟೋಬರ್ ನಲ್ಲಿ ರಿಲೀಸ್ ಆಗುವುದು ಪಕ್ಕಾ. 'ಕೆ.ಜಿ.ಎಫ್' ಟ್ರೈಲರ್ ನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಒಂದು ತಿಂಗಳು ಕಾಯಬೇಕು.
ಅಂದ್ಹಾಗೆ, 'ಕೆ.ಜಿ.ಎಫ್' ಸಿನಿಮಾ ನವೆಂಬರ್ ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಒಟ್ನಲ್ಲಿ, ಈ ವರ್ಷ 'ಕೆ.ಜಿ.ಎಫ್' ಮೂಲಕ ರಾಕಿಂಗ್ ಸ್ಟಾರ್ ಯಶ್ ಬೆಳ್ಳಿಪರದೆ ಮೇಲೆ ರಾರಾಜಿಸುವುದು ಕನ್ಫರ್ಮ್.


Click it and Unblock the Notifications











