For Quick Alerts
  ALLOW NOTIFICATIONS  
  For Daily Alerts

  ದುಬಾರಿ ಕಾರು ಖರೀದಿಸಿದ 'ಕೆಜಿಎಫ್' ಗರುಡ: ಮೊದಲು ಭೇಟಿ ಮಾಡಿದ್ದು ಯಾರನ್ನ?

  |
  ಬಹುದಿನಗಳ ಗೆಳೆಯನ ಏಳಿಗೆ ಕಂಡು ಖುಷಿ ಪಟ್ಟ ರಾಕಿಂಗ್ ಸ್ಟಾರ್ ಯಶ್..! |FILMIBEAT KANNADA

  ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಗುವ ಜೊತೆಗೆ ಸಾಕಷ್ಟು ಹೊಸ ಕಲಾವಿದರನ್ನ ಪರಿಚಯ ಮಾಡಿಕೊಡ್ತು. ಈ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಂದು ಪಾತ್ರಗಳು ಚಿತ್ರಪ್ರಿಯರ ಮನದಲ್ಲಿ ಹಾಗೆ ಉಳಿದುಕೊಂಡಿದೆ. ಆದ್ರೆ, ಈ ಎಲ್ಲಾ ಪಾತ್ರಗಳಲ್ಲಿ ಹೆಚ್ಚು ಕಾಡಿದ್ದು ಅಂದ್ರೆ ಖಳನಟ ಗರುಡ.

  ಕೆಜಿಎಫ್ ಮೊದಲ ಭಾಗದಲ್ಲಿ ರಾಕಿ ಭಾಯ್ ಯಿಂದ ಕೊಲೆಯಾಗುವ ಗರುಡ ಪಾರ್ಟ್-2 ಗೆ ರೋಚಕ ತಿರುವು ನೀಡುವ ಮೂಲಕ ಅಭಿಮಾನಿಗಳಲ್ಲಿ ಉಳಿದುಕೊಂಡಿದ್ದಾರೆ. ಮುಂದುವರಿದ ಭಾಗದಲ್ಲಿ ಈ ಪಾತ್ರ ಇರುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ಗರುಡ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ರು. ಅಂದ್ಹಾಗೆ, ಗರುಡ ಆಗಿ ಕಾಣಿಸಿಕೊಂಡಿದ್ದು ನಟ ರಾಮಚಂದ್ರ ರಾಜ್.

  ರಾಮಚಂದ್ರ ರಾಜು ಹೆಸರಿಗಿಂತ ಗರುಡ ಅಂತಾನೆ ಖ್ಯಾತಿಗಳಿಸಿರುವ ಇವರು ಈಗ ಮತ್ತೆ ಸುದ್ದಿಯಾಗಿದ್ದಾರೆ. ಅಂದ್ಹಾಗೆ, ಗರುಡ ಸದ್ದು ಮಾಡುತ್ತಿರುವುದು ಸಿನಿಮಾ ವಿಚಾರಕ್ಕೆ ಅಲ್ಲ, ಬದಲಿಗೆ ದುಬಾರಿ ಕಾರಿ ಮೂಲಕ. 'ಕೆಜಿಎಫ್' ನ ಸಕ್ಸಸ್ ಖುಷಿಯಲ್ಲಿರುವ ಗರುಡ ದುಬಾರಿ ಕಾರು ಖರೀದಿಸಿದ್ದಾರೆ. ಯಾವುದು ಆ ದುಬಾರಿ ಕಾರು? ಮುಂದೆ ಓದಿ..

  ಸೆಂಚುರಿ ಬಾರಿಸಿದ ಕೆಜಿಎಫ್, ಸಂತಸದಲ್ಲಿ ಚಿತ್ರತಂಡ

  ದುಬಾರಿ ಕಾರು ಯಾವುದು?

  ದುಬಾರಿ ಕಾರು ಯಾವುದು?

  'ಕೆಜಿಎಫ್' ಯಶಸ್ಸಿನ ಖುಷಿಯಲ್ಲಿರುವ ಗರುಡ ಫಾರ್ಚೂನರ್ ಕಾರು ಖರೀದಿಸಿದ್ದಾರೆ. ಬಿಳಿ ಬಣ್ಣದ ಫಾರ್ಚೂನರ್ ಕೊಂಡುಕೊಂಡ ರಾಮ್ ಕಾರಿನ ಮೇಲೆ ಅವರಿಗೆ ಇಷ್ಟವಾದ ಮತ್ತು ದೊಡ್ಡ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟ 'ಗರುಡ' ಪ್ರತಿಮೆ ಹಾಕಿಸಿಕೊಂಡಿರುವುದು ವಿಶೇಷ.

  ಯಶ್ ಭೇಟಿ ಮಾಡಿದ ಗರುಡ

  ಯಶ್ ಭೇಟಿ ಮಾಡಿದ ಗರುಡ

  ಕಾರು ಖರೀದಿಸಿದ ಖುಷಿಯನ್ನು ನಟ ಮತ್ತು ಗೆಳೆಯ ಯಶ್ ಜೊತೆ ಹಂಚಿಕೊಂಡಿದ್ದಾರೆ. ಪಾರ್ಚೂನರ್ ಕೊಂಡುಕೊಂಡು ನೇರವಾಗಿ ಯಶ್ ಮನೆಗೆ ಹೋಗಿ ಹೊಸ ಕಾರನ್ನು ಯಶ್ ಗೆ ತೋರಿಸಿದ್ದಾರೆ. ಹೊಸ ಕಾರು ನೋಡಿ ಸಂತಸ ಪಟ್ಟ ಯಶ್ ಗರುಡ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಕಾರಿನ ಜೊತೆ ನಿಂತು ಫೋಟೋಗೆ ಪೋಸ್ ಕೂಡ ನೀಡಿದ್ದಾರೆ.

  ಯಶ್ ಸಹಿ ಮಾಡಿರುವ ಟಿ ಶರ್ಟ್ ಬೇಕು ಅಂದ್ರೆ ಈ ಪ್ರಶ್ನೆಗೆ ಉತ್ತರಿಸಿ

  ರಾಕಿಂಗ್ ಸ್ಟಾರ್ ಮೇಲಿನ ಅಭಿಮಾನ

  ರಾಕಿಂಗ್ ಸ್ಟಾರ್ ಮೇಲಿನ ಅಭಿಮಾನ

  ರಾಕಿಂಗ್ ಸ್ಟಾರ್ ಮತ್ತು ರಾಮ್ ಇಬ್ಬರು ಬಹುಕಾಲದ ಗೆಳೆಯರು. ರಾಮ್ ಯಾವಾಗಲೂ ಯಶ್ ಜೊತೆಯೇ ಇರುತ್ತಿದ್ದರು. ಅಲ್ಲದೆ 'ಕೆಜಿಎಫ್' ಸಿನಿಮಾದಲ್ಲಿ ಗರುಡ ಅಂತಹ ಪಾತ್ರಕ್ಕೆ ಬಣ್ಣ ಹಚ್ಚಲು ಅವಕಾಶ ಮಾಡಿಕೊಟ್ಟ ಯಶ್ ಮೇಲೆ ರಾಮ್ ಗೆ ಅಭಿಮಾನ, ಪ್ರೀತಿ, ಗೌರವ ಹೆಚ್ಚಿದೆ. ಇದೇ ಕಾರಣಕ್ಕೆ ಕಾರು ಖರೀದಿಸಿದ ನಂತರ ನೇರವಾಗಿ ಯಶ್ ಮನೆಗೆ ಬಂದು ಯಶ್ ಗೆ ಹೊಸ ಕಾರನ್ನು ತೋರಿಸಿದ್ದಾರೆ.

  ಅಭಿಮಾನಿ ಕೇಳಿದ ತಕ್ಷಣ ಮೊಬೈಲ್ ನಂಬರ್ ನೀಡಿದ 'ಕೆಜಿಎಫ್' ಕ್ವೀನ್

  ಕಾರ್ತಿ-ರಶ್ಮಿಕಾ ಚಿತ್ರದಲ್ಲಿ ವಿಲನ್

  ಕಾರ್ತಿ-ರಶ್ಮಿಕಾ ಚಿತ್ರದಲ್ಲಿ ವಿಲನ್

  'ಕೆಜಿಎಫ್' ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಕಾಣುತ್ತಿದ್ದಂತೆ ರಾಮ್ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಪರಭಾಷೆಯಿಂದಲೂ ಗರುಡಗೆ ಅವಕಾಶಗಳು ಅರಸಿಬರುತ್ತಿವೆ. ಇದೇ ಖುಷಿಯಲ್ಲಿ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕಾರ್ತಿಕ್ ಅಭಿನಯದ ಸಿನಿಮಾದಲ್ಲಿ ರಾಮ್ ವಿಲನ್ ಆಗಿ ಅಬ್ಬರಿಸಲಿದ್ದಾರೆ.

  English summary
  'KGF' Kannada movie villain Garuda (Ramchandra Raju) purchased new Fortuner car. Actor Yash congrats to villain Garuda for new car purchased.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X