ನಾಳೆ ಕೆಜಿಎಫ್ ರಿಲೀಸ್ ಆಗೇ ಆಗುತ್ತೆ: ನಿರ್ಮಾಪಕ ವಿಜಯ್

ಕೆಜಿಎಫ್ ಚಿತ್ರ ನಾಳೆ ಬಿಡುಗಡೆಯಾಗಬಾರದು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ವೆಂಕಟೇಶ್ ಎಂಬುವವರು ಚಿತ್ರಕ್ಕೆ ತಡೆ ತಂದಿದ್ದು, ನಾಳೆ ಸಿನಿಮಾ ಬಿಡುಗಡೆ ಬಹುತೇಕ ಅನುಮಾನ ಎಂದು ಹೇಳಲಾಗ್ತಿದೆ.

ಈ ಬಗ್ಗೆ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಸ್ಪಷ್ಟನೆ ನೀಡಿದ್ದು, ''ನಾಳೆ ಸಿನಿಮಾ ರಿಲೀಸ್ ಆಗೇ ಆಗುತ್ತೆ, ಯಾವುದೇ ಸಂಶಯ ಬೇಡ'' ಎಂದು ಸ್ಪಷ್ಟಪಡಿಸಿದ್ದಾರೆ.

''ಕೋರ್ಟ್ ಆದೇಶದ ಬಗ್ಗೆ ನಾನು ಟಿವಿಯಲ್ಲಿ ನೋಡಿದ್ದು, ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾವು ಈಗಾಗಲೇ ವಿತರಕರಿಗೆ ಹೇಳಿ ಆಗಿದೆ. ನಮಗೆ ಯಾವುದೇ ಆತಂಕವಿಲ್ಲ'' ಎಂದಿದ್ದಾರೆ. ಮುಂದೆ ಓದಿ.

'ತಂಗಂ'ಗೂ ನಮಗೂ ಸಂಬಂಧವಿಲ್ಲ

'ತಂಗಂ'ಗೂ ನಮಗೂ ಸಂಬಂಧವಿಲ್ಲ

ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತಾದ ಯಾವುದೇ ಸಂಬಂಧವಿಲ್ಲ. ನಾನು ಈ ಬಗ್ಗೆ ಯಾರ ಜೊತೆಯೂ ಮಾತನಾಡಿಲ್ಲ. ಇದು ರೌಡಿ ತಂಗಂ ಕಥೆಯೂ ಅಲ್ಲ. ಇಡೀ ವಿಶ್ವದಲ್ಲಿ ಸಿನಿಮಾ ರಿಲೀಸ್ ಆಗುತ್ತೆ'' ಎಂದು ವಿಜಯ್ ಕಿರಗಂದೂರ್ ಸ್ಪಷ್ಟಪಡಿಸಿದ್ದಾರೆ.

ವೆಂಕಟೇಶ್ ಯಾರು ಎಂದು ಗೊತ್ತಿಲ್ಲ

ವೆಂಕಟೇಶ್ ಯಾರು ಎಂದು ಗೊತ್ತಿಲ್ಲ

ವೆಂಕಟೇಶ್ ಅವರ ವಕೀಲರು ಹೇಳಿರುವ ಪ್ರಕಾರ, ಕೆಜಿಎಫ ಚಿತ್ರತಂಡದ ಜೊತೆ ಈ ಬಗ್ಗೆ ವರ್ಷಗಳ ಹಿಂದೆಯೇ ಮಾತನಾಡಿದ್ವಿ. ಆದ್ರೆ, ಅವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಎಂದು ಹೇಳಿದ್ದರು. ಆದ್ರೆ, ವಿಜಯ್ ಕಿರಗಂದೂರ್ ಈ ಬಗ್ಗೆ ಮಾತನಾಡಿದ್ದು, ''ವೆಂಕಟೇಶ್ ಯಾರು ಎಂದು ಗೊತ್ತೇ ಇಲ್ಲ. ನಮ್ಮ ಬಳಿ ಯಾರು ಮಾತನಾಡಿಲ್ಲ'' ಎಂದು ಹೇಳಿದ್ದಾರೆ.

ಹೈ ಕೋರ್ಟ್ ಗೆ ಹೋಗುವ ಸಾಧ್ಯತೆ

ಹೈ ಕೋರ್ಟ್ ಗೆ ಹೋಗುವ ಸಾಧ್ಯತೆ

ಸದ್ಯದ ಮಾಹಿತಿ ಪ್ರಕಾರ, ಸಿಟಿ ಸಿವಿಲ್ ಕೋರ್ಟ್ ನೀಡಿರುವ ಆದೇಶವನ್ನ ಪ್ರಶ್ನಿಸಿ, ಕೆಜಿಎಫ್ ಚಿತ್ರತಂಡ ಇಂದು ತಡರಾತ್ರಿಯೇ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದಾರಂತೆ. ನಾಳೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ನಿಲ್ಲಬಾರದು ಎಂಬ ಉದ್ದೇಶದಲ್ಲಿ ಚಿತ್ರತಂಡವಿದೆ.

ಯಾರೂ ಆತಂಕಪಡಬೇಕಿಲ್ಲ

ಯಾರೂ ಆತಂಕಪಡಬೇಕಿಲ್ಲ

ಜನರು ಟಿಕೆಟ್ ಎಲ್ಲ ಬುಕ್ ಮಾಡಿದ್ದಾರೆ. ಯಾರೂ ಆತಂಕ ಪಡುವಂತಿಲ್ಲ. ಯಶ್ ಬಳಿಯೂ ನಾನು ಮಾತನಾಡಿದೆ. ಎಲ್ಲವೂ ಓಕೆ. ಸಿನಿಮಾ ನಾಳೆ ನೋಡಬಹುದು ಎಂದು ನಿರ್ಮಾಪಕರು ಖಚಿತ ಪಡಿಸಿದ್ದಾರೆ.

More from Filmibeat

English summary
Bengaluru 10th City Civil Court stays Actor Yash Starrer KGF movie screening till January 07, 2019. now, Producer vijay kiragandur clarified about this issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X