Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲೆಕ್ಷನ್ ನಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್: ಮೊದಲ ದಿನ 24 ಕೋಟಿ.!
ಕೆಜಿಎಫ್ ಚಿತ್ರದ ಕಲೆಕ್ಷನ್ ಎಷ್ಟು ಎಂಬುದೇ ದೊಡ್ಡ ಕುತೂಹಲವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಿದ್ರು. ಸಿನಿಮಾ ತಂಡದವರು ಅದ್ಯಾವಾಗ ಘೋಷಣೆ ಮಾಡ್ತಾರೆ ಅಭಿಮಾನಿಗಳು ಕಾಯ್ತಿದ್ರು.
ಅಂತಿಮವಾಗಿ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗವಾಗಿದೆ. ವರ್ಲ್ಡ್ ವೈಡ್ ಕೆಜಿಎಫ್ ಸಿನಿಮಾ ಮೊದಲ ದಿನ 24 ಕೋಟಿ ಗಳಿಸಿದೆ ಎಂದು ಖ್ಯಾತ ವಿಶ್ಲೇಷಕರು ಹಾಗೂ ಚಿತ್ರತಂಡದವರು ಹೇಳಿದ್ದಾರೆ.
ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.!
ಕೆಜಿಎಫ್ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಒಟ್ಟು 24 ಕೋಟಿ ಅಂದ್ರೆ, ಯಾವ ಭಾಷೆಯಲ್ಲಿ ಎಷ್ಟು ಗಳಿಕೆ ಕಂಡಿದೆ ಎಂಬ ಕುತೂಹಲವೂ ಸಹಜ. ಅದಕ್ಕೆ ಉತ್ತರ ಮುಂದಿದೆ?
ಕನ್ನಡ ಸಿನಿಮಾ ಕಲೆಕ್ಷನ್ ಎಷ್ಟು?
ಕೆಜಿಎಫ್ ಕನ್ನಡ ಭಾಷೆಯ ಸಿನಿಮಾ ಮೊದಲ ದಿನ 12.5 ಕೋಟಿ ಗಳಿಕೆ ಕಂಡಿದೆಯಂತೆ. ಸುಮಾರು 400 ಸ್ಕ್ರೀನ್ ಗಳಲ್ಲಿ ಕನ್ನಡ ವರ್ಷನ್ ಕೆಜಿಎಫ್ ರಿಲೀಸ್ ಆಗಿತ್ತು. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆಯೂ ಹೌದು.
ಭಾರತದಲ್ಲಿ ಕೆಜಿಎಫ್ ಗಳಿಸಿದ್ದೆಷ್ಟು?
ಜಗತ್ತಿನಾದ್ಯಂತ 24.5 ಕೋಟಿ ಗಳಿಸಿರುವ ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಭಾರತದಲ್ಲಿ ಮಾತ್ರ 18.1 ಕೋಟಿ ಗಳಿಕೆ ಕಂಡಿದೆ.
ಓದುಗರ ವಿಮರ್ಶೆ: ಕೆಜಿಎಫ್ ಅಷ್ಟು ಇಷ್ಟವಾಗದಿರುವುದಕ್ಕೆ ಕಾರಣ ಇಲ್ಲಿದೆ
ಹಿಂದಿಯಲ್ಲಿ 2.1 ಕೋಟಿ
ತರಣ್ ಆದರ್ಶ್ ಅವರು ಹೇಳಿರುವ ಪ್ರಕಾರ, ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ ಮೊದಲ ದಿನ 2.10 ಕೋಟಿ ಗಳಿಕೆ ಕಂಡಿದೆಯಂತೆ. ಈ ಗಳಿಕೆಯನ್ನ ಕಂಡು ಖುಷಿ ಪಡುವುದಕ್ಕಿಂತ ಅಚ್ಚರಿಯಾಗಿ ನೋಡೋರೇ ಹೆಚ್ಚಾಗಿದ್ದಾರೆ.
'ಕೆ.ಜಿ.ಎಫ್' ಚಿತ್ರ ನೋಡಿದ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.?
ಅಧಿಕೃತ ಮಾಹಿತಿ ಯಾವಾಗ?
ಅಂದ್ಹಾಗೆ, ಕೆಜಿಎಫ್ ಚಿತ್ರದ ಕಲೆಕ್ಷನ್ ಬಗ್ಗೆ ಚಿತ್ರದ ನಿರ್ಮಾಪಕ, ನಿರ್ದೇಶಕ ಅಥವಾ ನಟ ಖಚಿತಪಡಿಸಿಲ್ಲ. ಆದ್ರೆ, ವಿಶ್ಲೇಷಕ ರಮೇಶ್ ಬಾಲ, ತರಣ್ ಆದರ್ಶ್, ಹಾಗೂ ವಿಶಾಲ್ ಫಿಲಂ ಫ್ಯಾಕ್ಟರಿ ಟ್ವಿಟ್ಟರ್ ಖಾತೆಯಲ್ಲಿ ಈ ಲೆಕ್ಕಾಚಾರ ಪ್ರಕಟವಾಗಿದೆ.