'ಕೆಜಿಎಫ್' ಎರಡನೇ ದಿನದ ಕಲೆಕ್ಷನ್ ಎಷ್ಟು? ಎಷ್ಟು ಕೋಟಿ ಬಂತು?
Recommended Video

ರಾಕಿಂಗ್ ಸ್ಟಾರ್ ಸಿನಿಮಾ ಇಡೀ ಭಾರತದಾದ್ಯಂತ ರಾಕ್ ಮಾಡುತ್ತಿದೆ. ಕನ್ನಡದ ಬಹು ನಿರೀಕ್ಷಿತ 'ಕೆಜಿಎಫ್' ಸಿನಿಮಾವನ್ನ ಎಲ್ಲರೂ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಜನರ ಪ್ರೀತಿಯ ಜೊತೆಗೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ.
ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿದ್ದ 'ಕೆಜಿಎಫ್' ಸಿನಿಮಾ ಮೊದಲ ದಿನ 24.5 ಕೋಟಿ ಗಳಿಕೆ ಮಾಡಿತ್ತು. ಬಿಡುಗಡೆ ಮೊದಲ ದಿನ ಅಂದರೆ ಶುಕ್ರವಾರ ಜನರಿಂದ ಬಂದ ಪ್ರತಿಕ್ರಿಯೆ ಇನ್ನು ಹೆಚ್ಚಿನ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತಿದೆ.
ಒಂದು ಖುಷಿಯ ವಿಚಾರ ಏನೆಂದರೆ, 'ಕೆಜಿಎಫ್' ಸಿನಿಮಾದ ಕಲೆಕ್ಷನ್ ಪಾಸಿಟಿವ್ ಆಗಿ ಹೋಗುತ್ತಿದೆ. ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಎಲ್ಲ ಭಾಷೆಗಳಲ್ಲಿ ಒಳ್ಳೆಯ ಓಪನಿಂಗ್ ಪಡೆಕೊಂಡು ಮುನ್ನುಗುತ್ತಿದೆ. ಮುಂದೆ ಓದಿ...

ಎರಡನೇ ದಿನ 37.21 ಕೋಟಿ
'ಕೆಜಿಎಫ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ಗಿಂತ ಎರಡನೇ ದಿನದ ಗಳಿಕೆ ಹೆಚ್ಚಾಗಿದೆ. ಮೊದಲ ದಿನ ಸಿನಿಮಾ 24.5 ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನ 37.21 ಕೋಟಿ ಕಲೆಕ್ಷನ್ ಸಿನಿಮಾಗೆ ಮಾಡಿದೆ. ಮೊದಲ ದಿನ ಸಿಕ್ಕ ಪ್ರತಿಕ್ರಿಯೆ ಚಿತ್ರದ ಕಲೆಕ್ಷನ್ ಮೇಲೆ ಪಾಸಿಟಿವ್ ವಾಗಿ ಪರಿಣಾಮ ಬೀರಿದೆ.

ಕನ್ನಡದಿಂದ ಎರಡನೇ ದಿನ 25 ಕೋಟಿ
'ಕೆಜಿಎಫ್' ಕನ್ನಡ ಸಿನಿಮಾ ವರ್ಷನ್ 25 ಕೋಟಿ ಗಳಿಕೆ ಮಾಡಿದೆ. ಮೊದಲ ದಿನ ಕನ್ನಡ ಭಾಷೆಯ 'ಕೆಜಿಎಫ್' 12.5 ಕೋಟಿ ಗಳಿಸಿತ್ತು. ಎರಡನೇ ದಿನಕ್ಕೆ ಅದು ಡಬಲ್ ಆಗಿದೆ. ಭಾನುವಾರ ಆಗಿರುವ ಕಾರಣ ಇಂದು ಸಿನಿಮಾ ದೊಡ್ಡ ಪ್ರಮಾಣದ ಹಣ ಮಾಡಲಿದೆ. ಕನ್ನಡದ ಜನ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ.
ಹಿಂದಿಯಲ್ಲಿ ಎರಡನೇ ದಿನ 5.10 ಕೋಟಿ
ಐದು ಭಾಷೆಗಳಲ್ಲಿ ಎರಡನೇ ದಿನಕ್ಕೆ ಸಿನಿಮಾ 37.21 ಕೋಟಿ ಗಳಿಕೆ ಮಾಡಿದೆ. ಮೊದಲ ದಿನ 2.10 ಕೋಟಿ ಗಳಿಸಿದ್ದ ಸಿನಿಮಾ, ಎರಡನೇ ದಿನ 5.10 ಕೋಟಿ ಕಲೆಕ್ಷನ್ ಮಾಡಿದೆ. ವಿತರಕರ ಮುಖದಲ್ಲಿ ಸಿನಿಮಾ ನಗು ಮೂಡಿಸಿದೆ. ಕನ್ನಡದ ಸಿನಿಮಾ ನೋಡಿ ಬಾಲಿವುಡ್ ಮಂದಿ ಬೆರಗಾಗಿದ್ದಾರೆ.

ಬೇರೆ ಭಾಷೆಗಳ ಲೆಕ್ಕ
ಐದು ಭಾಷೆಯಲ್ಲಿಯೂ ಸಿನಿಮಾಗೆ ಒಳ್ಳೆಯ ಕ್ರೇಜ್ ಇದ್ದು, ಬಿಡುಗಡೆಯ ನಂತರ ಆ ನಂಬಿಕೆ ಸಿನಿಮಾ ಉಳಿಸಿಕೊಂಡಿದೆ. ತಮಿಳಿನಲ್ಲಿ, ತೆಲುಗಿನಲ್ಲಿ ನಿಂದ ಸಿನಿಮಾ ಹಣ ಬಂದಿದೆ. ಎರಡನೇ ದಿನ ತೆಲುಗಿನಿಂದ 3 ಕೋಟಿ, ತಮಿಳಿನಿಂದ 1.70 ಕೋಟಿ ನಿರ್ಮಾಪಕರಿಗೆ ಬಂದಿದೆ. ಒಟ್ಟಿಗೆ ಸಿನಿಮಾದ ಪತಿಶ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.


Click it and Unblock the Notifications











