ಪ್ರಿಯಾಂಕಾ-ಪ್ರಿಯಾಮಣಿ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ರಿಲೀಸ್

ಪ್ರಿಯಾಂಕಾ ಉಪೇಂದ್ರ ಮತ್ತೊಂದು ಹಾರರ್ ಥ್ರಿಲ್ಲಿಂಗ್ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಮಣಿ ಮತ್ತು ಛಾಯಾ ಸಿಂಗ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಾಗಿ, ಕನ್ನಡ ಮೂವರು ನಟಿಯರು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದು.

Recommended Video

20 ವರ್ಷದ ನಂತರ ಪ್ರಿಯಾಂಕಾ ಉಪೇಂದ್ರ ಚಿತ್ರಕ್ಕೆ ಎಂಟ್ರಿ ಕೊಟ್ಟ ಗುರುಕಿರಣ್ | Filmibeat Kannada

ಪ್ರಿಯಾಂಕಾ-ಪ್ರಿಯಾಮಣಿ-ಛಾಯಾ ಸಿಂಗ್ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. 'ಖೈಮರಾ' ಎಂದು ಈ ಚಿತ್ರಕ್ಕೆ ಹೆಸರಿಡಲಾಗಿದ್ದು, ಫಸ್ಟ್ ಲುಕ್‌ ಪೋಸ್ಟರ್‌ನಲ್ಲಿ ಮೂವರು ನಟಿಯರ ಝಲಕ್ ಸಹ ಅನಾವರಣಗೊಂಡಿದೆ.

ಈ ಚಿತ್ರವನ್ನು ತಮಿಳು ಡೈರೆಕ್ಟರ್ ಗೌತಮ್ ನಿರ್ದೇಶನ ಮಾಡುತ್ತಿದ್ದು, ಇದು ಇವರಿಗೆ ಚೊಚ್ಚಲ ಕನ್ನಡ ಸಿನಿಮಾ. ಗುರು ಕಿರಣ್ ಸಂಗೀತ ನಿರ್ದೇಶನ ನೀಡುತ್ತಿದ್ದು, ವಿಷ್ಣು ರಾಮಕೃಷ್ಣನ್ ಅವರ ಛಾಯಾಗ್ರಹಣ ಇದೆ. ಪಿ ವಿಮಲ್ ಕಥೆ ಬರೆದಿದ್ದು, ಶ್ರೀಕಾಂತ್ ಸಂಕಲನ ಇದೆ.

Khaimara horror thriller movie First Look Posters Release

ಚಿತ್ರದಲ್ಲಿ ಈ ಮೂವರು ನಟಿಯರು ಬೇರೆ ಬೇರೆ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಚಿತ್ರೀಕರಣ ಬೆಂಗಳೂರು ಮತ್ತು ಕೊಡಗಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಚಿತ್ರದಲ್ಲಿ ಶಿವಾಜಿ ಸೂರತ್ಕಲ್ ಖ್ಯಾತಿಯ ನಟ ವಿನಯ್ ಗೌಡ ಸಹ ನಟಿಸುತ್ತಿದ್ದಾರೆ.

ಈ ಸಿನಿಮಾ ಪ್ರಸ್ತುತ ಕಾಲಘಟ್ಟದ ಜೊತೆಗೆ 1960ರ ದಶಕದ ಕಥೆಯನ್ನೂ ಒಳಗೊಂಡಿದೆ. ಹಾಗಾಗಿ ಪಾತ್ರಗಳು ಎರಡು ಶೇಡ್ ಗಳಲ್ಲಿ ಮೂಡಿಬರಲಿದೆ. ನವೆಂಬರ್ 17ರಿಂದ ಚಿತ್ರೀಕರಣ ಸಹ ಆರಂಭಗೊಳ್ಳಲಿದೆ.

More from Filmibeat

English summary
Kannada actress Priyanka Upendra, Priyamani and chaya singh starrer horror thriller movie title Khaimara and first look posters released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X